ವರ್ಣಮಂಡಲ – ಸೂರ್ಯನ ಪ್ರಭಾಮಂಡಲ(ಫೋಟೋಸ್ಪಿಯರ್)ದ ಸುತ್ತ ಇರುವ ಒಂದು ವಾತಾವರಣ ಪದರ. ಸಂಪೂರ್ಣ ಸೂರ್ಯಗ್ರಹಣದ ಸಂದರ್ಭದಲ್ಲಿ ನಾವಿದನ್ನು ವೀಕ್ಷಿಸಬಹುದು.
ಬಣ್ಣ ಸಂಬಂಧೀ ಬಿಂಬದೋಷ – ಒಂದು ಮಸೂರದಿಂದ ಉಂಟಾಗುವ ಬಿಂಬದಲ್ಲಿ ಬಣ್ಣದ ಅಂಚುಗಳು ಮೂಡುವಂತಹ ದೋಷ ಇದು. ಗಾಜಿನ ವಕ್ರೀಭವನ ಗುಣ ( ರಿಫ್ರಾಕ್ಷನ್) ದಿಂದಾಗಿ ಈ ದೋಷ ಉಂಟಾಗುತ್ತದೆ.
ಕಣ್ಣಿನ ಮಧ್ಯಪದರ – ಕಣ್ಣಿನಲ್ಲಿರುವ ಮೂರು ಪದರಗಳಲ್ಲಿ ಮಧ್ಯದ್ದು. ಕಣ್ಣುಗುಡ್ಡೆಯನ್ನು ಆವರಿಸಿರುವ ಚರ್ಮದ ಪದರವಿದು.
ವಿದ್ಯುತ್ ನಿಯಂತ್ರಕ – ಪರ್ಯಾಯ ವಿದ್ಯುತ್ ಅಲೆಗಳ ಆವರ್ತನಗಳನ್ನು ಅಡ್ಡಿಯೊಡ್ಡಿ ಕಡಿಮೆ ಮಾಡಲು ಹಾಗೂ ಏಕಮುಖೀ ವಿದ್ಯುತ್ ಹರಿವಿನ ಮಂಡಲಗಳಲ್ಲಿನ ಓಲಾಟ, ಅಸ್ಥಿರತೆಗಳನ್ನು ಸರಿ ಮಾಡಲು ಬಳಸುವ ವಿದ್ಯುತ್ ಚೋದಕವಿದು.
ಚಾಲ್ಡ್ನಿ ತಗಡುಗಳು – ಘನವಸ್ತುಗಳಲ್ಲಿನ ಕಂಪನಗಳನ್ನು ಪತ್ತೆ ಮಾಡಲು ಬಳಸುವ ಒಂದು ರೀತಿಯ ತಗಡುಗಳು.
ರಾಸಾಯನಿಕ ಅಂತಃಸಾಮರ್ಥ್ಯ – ಒಂದು ಮಿಶ್ರಣದಲ್ಲಿನ ಒಂದು ವಸ್ತುವಿನ ರಾಸಾಯನಿಕ ಅಂತಃಸಾಮರ್ಥ್ಯ.
ರಾಸಾಯನಿಕ ತೇವಾಂಶಮಾಪಕ – ಒಂದು ಅನಿಲ ಅಥವಾ ಗಾಳಿಯ ತೇವಾಂಶವನ್ನು ಅಳೆಯಲು ಬಳಸುವ ಉಪಕರಣ.
ಮುಖ್ಯ ಕಿರಣ – ಒಂದು ವಸ್ತುವಿನಿಂದ ಹೊರಟು ನಮ್ಮ ಕಣ್ಣುಪಾಪೆಯ ಮಧ್ಯಭಾಗಕ್ಕೆ ತಲುಪುವ ಕಿರಣಪುಂಜದಲ್ಲಿನ ಮಧ್ಯದಲ್ಲಿರುವ ಒಂದು ಪ್ರಾತಿನಿಧಿಕ ಕಿರಣ
ಚಿ-ಮೆಸಾನು – ಪರಮಣುವಿನೊಳಗೆ ಇರುವ ಒಂದು ಸಣ್ಣ ಕಣ. ಇದು ಬೋಸಾನುಗಳ ಗುಂಪಿಗೆ ಸೇರುತ್ತದೆ.
ಮೈಕ್ರೋಚಿಪ್ಪು – ತುಂಬ ಪುಟ್ಟದಾಗಿರುವ ಒಂದು ಅರೆವಾಹಕ. ಇದು ಸಂಕಲಿತ ವಿದ್ಯುನ್ಮಂಡಲದ ಟ್ರಾನ್ಸ್ಮೀಟರನ್ನು ಅಥವಾ ನಿರೋಧಕವನ್ನು ಒಳಗೊಂಡಿರುತ್ತದೆ.