ಇಂಪೀಡೆನ್ಸ್ ಬ್ರಿಡ್ಜ್ – ಅಡ್ಡಿಯ ಸೇತುವೆ – ವ್ಹೀಟ್ ಸ್ಟೋನ್ ವಿದ್ಯುನ್ಮಂಡಲಕ್ಕೆ ತುಂಬ ಹೋಲಿಕೆ ಇರುವ ಒಂದು ವಿದ್ಯುತ್ ಉಪಕರಣ. ಇದನ್ನು ಅಡ್ಡಿಗಳನ್ನು ತುಲನೆ ಮಾಡಲು ಬಳಸಲಾಗುತ್ತದೆ.
ಇಂಪೀಡೆನ್ಸ್ ( ಸಿಂಬಲ್ Z) – ಅಡ್ಡಿ ( ಸಂಕೇತ Z) – ವಿದ್ಯುನ್ಮಂಡಲವೊಂದು ಪರ್ಯಾಯ ವಿದ್ಯುತ್ ಗೆ ಒಡ್ಡುವ ಪ್ರತಿರೋಧದ ಅಳತೆ.
ಇಮ್ಮರ್ಶನ್ ಆಬ್ಜೆಕ್ಟಿವ್ – ಮುಳುಗಿಸಿಟ್ಟ ಮಸೂರ – ಸೂಕ್ಷ್ಮದರ್ಶಕದಲ್ಲಿ ಇರುವಂತಹ ಹೆಚ್ಚಿನ ಸಾಮರ್ಥ್ಯವುಳ್ಳ ಒಂದು ರೀತಿಯ ವಸ್ತುಮಸೂರ ಇದು. ( ವಸ್ತು ಮಸೂರ = ನೋಡುತ್ತಿರುವ ವಸ್ತುವಿಗೆ ಅತ್ಯಂತ ಹತ್ತಿರ ಇರುವ ಮಸೂರ).
ಇಂಪ್ಯಾಕ್ಟ್ ವೆಲಾಸಿಟಿ – ಅಪ್ಪಳಿಸುವ ವೇಗ – ಮುಂದಕ್ಕೆ ಚಿಮ್ಮಿಸಿದಂತಹ ವಸ್ತುವು( ಉದಾಹರಣೆಗೆ ಕ್ಷಿಪಣಿ ) ಅಪ್ಪಳುಸುವ ಕ್ಷಣದಲ್ಲಿ ಹೊಂದಿರುವಂತಹ ದಿಶಾವೇಗ. ಇದನ್ನು ಅಪ್ಪಳಿಸುವ ದಿಕ್ವೇಗ ಎಂದೂ ಕರೆಪದಪ್ರಯೋಗ
ಇಂಪ್ಯಾಕ್ಟ್ ಸ್ಟ್ರೆಸ್ – ಆಘಾತಮೂಲೀ ಒತ್ತಡ – ಏಕಘಟಕ ವಿಸ್ತೀರ್ಣದ ಮೇಲೆ ಇದ್ದಕ್ಕಿದ್ದಂತೆ ಬಿದ್ದ ಹೊರೆಯಿಂದಾಗಿ ಅನುಭವಕ್ಕೆ ಬರುವ ಬಲ.
ಇಂಪ್ಯಾಕ್ಟ್ ಸ್ಟ್ರೆಂಗ್ತ್ – ಒಂದು ವಸ್ತುವಿಗೆ ಇರುವ ಆಘಾತಧಾರಣ ಸಾಮರ್ಥ್ಯ ( ಇದ್ದಕ್ಕಿದ್ದಂತೆ ಉಂಟಾಗುವ ಆಘಾತವನ್ನು ತಡೆದುಕೊಳ್ಳುವ ಶಕ್ತಿ).
ಇಮೇಜ್ ಸ್ಪೇಸ್ – ಬಿಂಬ ರೂಪಣಾ ಸ್ಥಳ ( ಜಾಗ) – ಒಂದು ದೃಶ್ಯ ವಿಜ್ಞಾನ ವ್ಯವಸ್ಥೆಯಲ್ಲಿ ನಿಜವಾದ ಅಥವಾ ನಿಜಭಾಸ( ವರ್ಚುಯಲ್) ಬಿಂಬಗಳನ್ನು ರೂಪಿಸುವಂತಹ ಜಾಗ.
ಇಮೇಜ್ ಪ್ಲೇನ್ – ಬಿಂಬ ಮೇಲ್ಮೈ – ಬಿಂಬವನ್ನು ಕೇಂದ್ರವಗಿ ಹೊಂದಿರುವ ಅಕ್ಷಕ್ಕೆ ಲಂಬವಾಗಿರುವ ಮೇಲ್ಮೈ.
ಇಮ್ಯಾಜಿನರಿ ನಂಬರ್ – ಕಲ್ಪಿತ ಸಂಖ್ಯೆ – -1 ರ ವರ್ಗಮೂಲದ ಗುಣಕವಾಗಿರುವ ಒಂದು ಸಂಖ್ಯೆ. ಇದನ್ನು ‘i’ ಯಿಂದ ಸೂಚಿಸಲಾಗುತ್ತದೆ.
ಇಮೇಜ್ ಫೋರ್ಸ್ – ಪ್ರತಿಬಿಂಬ ಬಲ ಅಥವಾ ಪ್ರತಿ ಬಲ – ಒಂದು ವಿದ್ಯುದಂಶವು ತನ್ನ ಸಮೀಪ ಇರುವ ವಾಹಕಗಳು ಅಥವಾ ಅವಾಹಕಗಳಲ್ಲಿ ಪ್ರಚೋದಿಸುವ ವಿದ್ಯುದಂಶಗಳಿಂದಾಗಿ, ಆ ವಿದ್ಯುದಂಶದ ಮೇಲೆ ಉಂಟಾಗುವ ಅಥವಾ ವರ್ತಿಸುವ ಬಲ.
								
 Like us!
 Follow us!