Electrodynamics

ವಿದ್ಯುತ್ತೀಯ ಚಲನಶಾಸ್ತ್ರ – ಚಲನೆಯಲ್ಲಿರುವ  ವಿದ್ಯುದಂಶಗಳು, ವಿದ್ಯುತ್ತೀಯ ಹಾಗೂ ಕಾಂತಕ್ಷೇತ್ರಗಳಿಂದ ಸೃಷ್ಟಿಯಾಗುವ ಬಲಗಳ ನಡುವಿನ ಸಂಬಂಧ ( ಮುಖ್ಯವಾಗಿ ವಿದ್ಯುಜ್ಜನಕ ಯಂತ್ರಗಳಿಗೆ ಸಂಬಂಧ ಪಟ್ಟಂತೆ) – ಈ ವಿಷಯಗಳ ಅಧ್ಯಯನ.

Electrode potential 

ವಿದ್ಯುದ್ವಾರದ‌ ಅಂತಃಸಾಮರ್ಥ್ಯ – ಒಂದು ಲೋಹವು ತನ್ನನ್ನು ಸುತ್ತುವರೆದಿರುವ ದ್ರಾವಕಕ್ಕೆ ತನ್ನ ಎಲೆಕ್ಟ್ರಾನುಗಳನ್ನು ಕೊಟ್ಟುಬಿಡುವ ಪ್ರವೃತ್ತಿಯ ಅಳತೆ.

Electrodialysis

ವಿದ್ಯುತ್ತೀಯ ದ್ರವ ಶುದ್ಧೀಕರಣ – ನಿರ್ಲವಣೀಕರಣ ಅಥವಾ ನೀರಿನಿಂದ ಉಪ್ಪನ್ನು ಪ್ರತ್ಯೇಕಿಸುವಂತೆ, ಉಪ್ಪಿರುವ ನೀರಿನಿಂದ ಶುದ್ಧ ನೀರನ್ನು ಪಡೆಯುವ ವಿಧಾನ.

Electrodeposition

ವಿದ್ಯುತ್ತೀಯ ಪದರಗಟ್ಟುವಿಕೆ – ವಿದ್ಯುತ್ ರಾಸಾಯನಿಕ ಕ್ರಿಯೆಯ ಮೂಲಕ ಒಂದು ಘನವಸ್ತುವಿನ ( ಲೋಹ) ಒಂದು ಪದರವನ್ನು ಒಂದು ವಿದ್ಯುದ್ವಾರದ ಮೇಲ್ಮೈಗೆ ಹಚ್ಚುವುದು. 

Electrode

ವಿದ್ಯುದ್ವಾರ – ಒಂದು ವಿದ್ಯುತ್ ಉಪಕರಣದಲ್ಲಿ ಅಥವಾ ವಿದ್ಯುತ್ ವ್ಯವಸ್ಥೆಯಲ್ಲಿ ಎಲೆಕ್ಟ್ರಾನುಗಳನ್ನು ಅಥವಾ ಬೇರೆ ವಿಧದ ವಿದ್ಯುತ್ ಒಯ್ಯಕಗಳನ್ನು ಹೊರಸೂಸುವ ಅಥವಾ ಸಂಗ್ರಹಿಸುವ ಭಾಗ. ‌ 

Electrochemistry

ವಿದ್ಯುತ್ ರಸಾಯನಿಕ ಶಾಸ್ತ್ರ- ದ್ರಾವಕಗಳಲ್ಲಿ ವಿದ್ಯುದಣುಗಳ ರೂಪಣೆ ಮತ್ತು ವರ್ತನೆಗಳನ್ನು ಅಧ್ಯಯನ ಮಾಡುವ ಜ್ಞಾನಶಾಖೆ.

Electrochemical series

ವಿದ್ಯುತ್ ರಾಸಾಯನಿಕ ಸರಣಿ – ರಾಸಾಯನಿಕ ಮೂಲವಸ್ತುಗಳನ್ನು ಅವುಗಳ ನಿಯತ ವಿದ್ಯುದ್ವಾರ ಅಂತಃ ಸಾಮರ್ಥ್ಯಕ್ಕೆ ಅನುಗುಣವಾಗಿ ಜೋಡಿಸುವುದು.

Electric spark

ವಿದ್ಯುತ್ ಕಿಡಿ‌ – ಒಂದು ಅನಿಲದಲ್ಲಿ ಬೆಳಕು ಮತ್ತು ಶಬ್ಧಸಹಿತವಾಗಿ ವಿದ್ಯುತ್ ಶಕ್ತಿಯ ಹೊರಚೆಲ್ಲುವಿಕೆ.

Electric potential

ವಿದ್ಯುತ್ ಅಂತಃ ಸಾಮರ್ಥ್ಯ – ಅನಂತದಿಂದ ಒಂದು ಘಟಕ ಅಳತೆಯ ವಿದ್ಯುದಂಶವನ್ನು ಒಂದು ಬಿಂದುವಿಗೆ ತರಲಿಕ್ಕಾಗಿ ಬೇಕಾದ ಶಕ್ತಿ. ಇದರ ಮೂಲಮಾನ ವೋಲ್ಟ್ (V).

Electric polarization

ವಿದ್ಯುತ್ ಧ್ರುವೀಕರಣ – ಒಂದು ಪರಮಾಣುವನ್ಬು ಅಥವಾ ವಿದ್ಯುತ್ ನಿರೋಧಕ ಕ್ಷೇತ್ರವೊಂದರಲ್ಲಿಟ್ಟಾಗ ಅದರಲ್ಲಿನ ಧನ ಹಾಗೂ ವಿದ್ಯುದಂಶಗಳು ಸ್ಥಾನಪಲ್ಲಟಗೊಳ್ಳುವುದು.

Page 9 of 12

Kannada Sethu. All rights reserved.