ಕನ್ನಡ ಕನ್ನಡಿ

ವಾರಕ್ಕೆ ಐದು ಪದಗಳಂತೆ, ತಾಂತ್ರಿಕ/ವೈಜ್ಞಾನಿಕ ಕ್ಷೇತ್ರದ ಪದಗಳಿಗೆ ಕನ್ನಡ ಸಂವಾದಿ ಪದಗಳ ಪರಿಚಯ ಮಾಡುವ ಅಂಕಣವಿದು. ಕನ್ನಡದಲ್ಲಿ ಹೊಸ ಜ್ಞಾನ ನಿರ್ಮಾಣ ಆಗಬೇಕೆಂದರೆ ಅದರ ಪದಕೋಶವು ವಿಸ್ತಾರಗೊಳ್ಳಬೇಕು. ಈ ದಿಸೆಯಲಿನ್ಲ ಕಿರುಪ್ರಯತ್ನವೇ ಈ ಅಂಕಣ.

Isochronous circuits

ಐಸೋಕ್ರೋನಸ್ ಸರ್ಕ್ಯೂಟ್ಸ್ – ಸಮಕಂಪನ ವಿದ್ಯುನ್ಮಂಡಲಗಳು – ಎರಡು ವಿದ್ಯುನ್ಮಂಡಲಗಳು ಒಂದೇ ಕಂಪನಾವರ್ತನ ಕಾಲ ( resonant frequency) ವನ್ನು ಹೊಂದಿದ್ದರೆ ಅವುಗಳನ್ನು ಸಮಕಂಪನ ವಿದ್ಯುನ್ಮಂಡಲಗಳು ಎನ್ನುತ್ತಾರೆ.

Isoclinic line

ಐಸೋಕ್ಲಿನಿಕ್ ಲೈನ್ – ಸಮ ಇಳಿಜಾರುಯುತ ರೇಖೆ – ಭೂಮಿಯ ಮೇಲ್ಮೈಯ ಮೇಲೆ ಸಮ ಇಳಿಜಾರು ಕೋನಗಳುಳ್ಳ ಬಿಂದುಗಳನ್ನು ಸೇರಿಸುವ ಒಂದು ರೇಖೆ.

Isodynaminc line

ಸಮಬಲ ರೇಖೆ – ಭೂಮಿಯ ಮೇಲ್ಮೈಯಲ್ಲಿ ಒಟ್ಟು ಕಾಂತಕ್ಷೇತ್ರಬಲವು ಒಂದೇ ಆಗಿರುವ ಬಿಂದುಗಳನ್ನು ಸೇರಿಸುವಂತಹ ಒಂದು ಕಲ್ಪಿತ ರೇಖೆ.

Isogonic line( Isogonal)

ಐಸೋಗಾನಿಕ್ ಲೈನ್ ( ಐದೋಗಾನಲ್) – ಭೂಮಿಯ ಮೇಲ್ಮೈಯಲ್ಲಿ ಸಮಬಾಗುವಿಕೆಯುಳ್ಳ ಬಿಂದುಗಳನ್ನು ಸೇರಿಸುವ ಕಲ್ಪಿತ ರೇಖೆ.

Isolating transformer

ಐಸೋಲೇಟಿಂಗ್ ಟ್ರ್ಯಾನ್ಸ್ಫಾರ್ಮರ್ – ಪ್ರತ್ಯೇಕಗೊಳಿಸುವ ವಿದ್ಯುತ್ ಪರಿವರ್ತಕ – ಯಾವುದಾದರೂ ವಿದ್ಯುನ್ಮಂಡಲ ಅಥವಾ ಉಪಕರಣವನ್ನು ತನ್ನ ವಿದ್ಯುತ್ ಸರಬರಾಜಿನಿಂದ ಪ್ರತ್ಯೇಕಗೊಳಿಸುವ (ಬೇರೆ ಮಾಡುವ) ಪರಿವರ್ತಕ.

Isolator

ಐಸೋಲೇಟರ್ – ಪ್ರತ್ಯೇಕ‌ಕಾರಕ – ವಿದ್ಯುತ್ ಕಾಂತೀಯ ಶಕ್ತಿಯನ್ನು ಒಂದು ದಿಕ್ಕಿನಲ್ಲಿ ಹರಿಯಲು ಬಿಟ್ಟು ಅದರ ವಿರುದ್ಧ ದಿಕ್ಕಿನಲ್ಲಿ ವಿದ್ಯುತ್ ಸಾಮರ್ಥ್ಯವನ್ನು ಹೀರಿಕೊಳ್ಳುವ ಉಪಕರಣ.

Isomagnetic lines

ಐಸೋಮ್ಯಾಗ್ನೆಟಿಕ್ ಲೈನ್ಸ್ – ಕಾಂತಬಲವು ಸಮಾನವಾಗಿರುವ ಬಿಂದುಗಳನ್ನು ಜೋಡಿಸುವ ರೇಖೆಗಳು‌.

Isomers

ಐಸೋಮರ್ಸ್ – ಸಮಾಂಗಿಗಳು – ಸಮಾನ ಅಣುತೂಕ ಮತ್ತು  ಸಮಾನ ಶೇಕಡಾವಾರು ವಸ್ತುಸಂಯೋಜನೆಗಳನ್ನು ಹೊಂದಿದ್ದು, ತಮ್ಮ ಕೆಲವು ರಾಸಾಯನಿಕ ಮತ್ತು ಭೌತಿಕ ಗುಣಲಕ್ಷಣಗಳಲ್ಲಿ ಭಿನ್ನವಾಗಿರುವ ಸಂಯುಕ್ತಗಳು.

Page 10 of 10

Kannada Sethu. All rights reserved.