ಕನ್ನಡ ಕನ್ನಡಿ

ವಾರಕ್ಕೆ ಐದು ಪದಗಳಂತೆ, ತಾಂತ್ರಿಕ/ವೈಜ್ಞಾನಿಕ ಕ್ಷೇತ್ರದ ಪದಗಳಿಗೆ ಕನ್ನಡ ಸಂವಾದಿ ಪದಗಳ ಪರಿಚಯ ಮಾಡುವ ಅಂಕಣವಿದು. ಕನ್ನಡದಲ್ಲಿ ಹೊಸ ಜ್ಞಾನ ನಿರ್ಮಾಣ ಆಗಬೇಕೆಂದರೆ ಅದರ ಪದಕೋಶವು ವಿಸ್ತಾರಗೊಳ್ಳಬೇಕು. ಈ ದಿಸೆಯಲಿನ್ಲ ಕಿರುಪ್ರಯತ್ನವೇ ಈ ಅಂಕಣ.

Ionisation

ಅಯಾನೈಸೇಷನ್ – ವಿದ್ಯುದಣು ನಿರ್ಮಾಣ ಅಥವಾ ಅಯಾನೀಕರಣ – ವೇಗವಾಗಿ ಚಲಿಸುತ್ತಿರುವ ಕಣದಿಂದ ಡಿಕ್ಕಿ ಹೊಡೆಸಿ ಅಥವಾ ರಾಸಾಯನಿಕ ಕ್ರಿಯೆಗಳ ಮೂಲಕ ವಿದ್ಯುದಣುಗಳನ್ನು ನಿರ್ಮಿಸುವ ವಿಕಿರಣವನ್ನು ಉತ್ಪತ್ತಿ ಮಾಡಿ ಆ ಮೂಲಕ ವಿದ್ಯುದಣುಗಳನ್ನು ರೂಪಿಸುವುದು‌. 

Ionisation chamber

ಅಯಾನೈಸೇಷನ್ ಚೇಂಬರ್ – ವಿದ್ಯುದಣು ನಿರ್ಮಾಣ ಕೊಠಡಿ‌ – ವಿದ್ಯುದಣು ನಿರ್ಮಿಸುವ ವಿಕಿರಣವನ್ನು ಪತ್ತೆ ಹಚ್ಚಲು ಅಥವಾ ಅದನ್ನು ಅಳೆಯಲು ಬಳಸುವಂತಹ ಕೊಠಡಿ ಅಥವಾ ಗೂಡು.

Ionisation energy

ಅಯೊನೈಸೇಷನ್ ಎನರ್ಜಿ‌- ವಿದ್ಯುದಣು ನಿರ್ಮಾಣ ಶಕ್ತಿ – ಒಂದು ತಟಸ್ಥ ಅನಿಲದ ಅಣುವಿನಿಂದ  ಎಲೆಕ್ಟ್ರಾನೊಂದನ್ಬು ಹೊರತೆಗೆಯಲು ಬೇಕಾದ ಶಕ್ತಿ.

Ionisation gauge

ಅಯೊನೈಸೇಷನ್ ಗಾಜ್ – ವಿದ್ಯುದಣು ನಿರ್ಮಾಣ ಅಳತೆ ಉಪಕರಣ – ಒಂದು ನಿರ್ವಾತ ಅಳತೆ ಉಪಕರಣವಿದು‌. ಇದರಲ್ಲಿನ ಅನಿಲದ ಒತ್ತಡವನ್ನು ಅದರ ವಿದ್ಯುದಣು ನಿರ್ಮಾಣದ ಮಟ್ಟದಿಂದ ಅಳೆಯಲಾಗುತ್ತದೆ‌.

Ionizing radiation

ಅಯಾನೈಸಿಂಗ್ ರೇಡಿಯೇಷನ್ – ವಿದ್ಯುದಣು ನಿರ್ಮಾಣ ವಿಕಿರಣ – ಒಂದು ವ್ಯವಸ್ಥೆಯಲ್ಲಿ ವಿದ್ಯುದಣು ನಿರ್ಮಾಣ ಮಾಡಲು ಬೇಕಾದಷ್ಟು ಶಕ್ತಿಯನ್ನು ಹೊಂದಿರುವಂತಹ ವಿಕಿರಣ.

Ionosphere

ಅಯಾನೋಸ್ಫಿಯರ್ – ವಿದ್ಯುದಣು ಮಂಡಲ – ಭೂಮಿಯ ಹವಾಮಾನದ ಎತ್ತರದ ಮಟ್ಟಗಳಲ್ಲಿ ರೇಡಿಯೋ ಅಲೆಗಳನ್ನು ( ಒಂದು ರೀತಿಯ ವಿದ್ಯುತ್ಕಾಂತೀಯ ಅಲೆಗಳಿವು)  ಪ್ರತಿಫಲಿಸುವ ಹಾಗೂ ತನ್ಮೂಲಕ ರೇಡಿಯೋ ಪ್ರಸಾರವನ್ನು ಸಾಧ್ಯ ಮಾಡುವ ಪ್ರದೇಶ.

Irreversible process

ಇರ್ರಿವರ್ಸೆಬಲ್ ಪ್ರೋಸೆಸ್ – ಹಿಮ್ಮರಳಿಸಲಾಗದ ಪ್ರಕ್ರಿಯೆ – ಕ್ರಿಯೆ ನಡೆಯುವಾಗ ಯಾವ ಹಂತಗಳ ಸರಣಿ‌ ಜಾರಿಯಾಗಿತ್ತೋ ಅದೇ ಸರಣಿಯಲ್ಲಿ ತನ್ನ ಮೂಲಸ್ಥಿತಿಗೆ ಮರಳಲಾಗದ ಪ್ರಕ್ರಿಯೆ. ಎಲ್ಲ ನಿಜ ಕ್ರಿಯೆಗಳೂ ತಮ್ಮ ಗುಣಸ್ವಭಾವದಲ್ಲಿ ಮರಳಿಸಲಾಗದ ಪ್ರಕ್ರಿಯೆಗಳೇ ಆಗಿರುತ್ತವೆ.

Isenthalpic process

ಐಸೆನ್ಥಾಲ್ಪಿಕ್ ಪ್ರೋಸೆಸ್ – ಸಮಶಾಖ ಪ್ರಮಾಣ  ಪ್ರಕ್ರಿಯೆ – ಶಾಖಪ್ರಮಾಣದಲ್ಲಿ ಯಾವುದೇ ಬದಲಾವಣೆ ಇಲ್ಲದೆ ನಡೆಯುವ ಪ್ರಕ್ರಿಯೆ, ಅಂದರೆ, ಇದರಲ್ಲಿನ ಒಟ್ಟು ಉಷ್ಣ ಶಕ್ತಿಯು ಸ್ಥಿರವಾಗಿಯೇ ಉಳಿಯುತ್ತದೆ.

Isentropic  ( Adiabatic) process

ಐಸೆನ್ ಟ್ರೋಪಿಕ್ ( ಅಡಿಯಾಬ್ಯಾಟಿಕ್)

ಪ್ರೋಸೆಸ್ –  ಶಕ್ತಿವಿನಿಮಯ ರಹಿತ ಪ್ರಕ್ರಿಯೆ – ವ್ಯವಸ್ಥೆಯಲ್ಲಿರುವ ಶಕ್ತಿಯು ಹೊರಗೆ ಹೋಗದೆ, ಹೊರಗಿನಿಂದ ಶಕ್ತಿಯು ಒಳಗೆ ಪ್ರವೇಶಿಸದೆ ಇರುವ ಪ್ರಕ್ರಿಯೆ.

Isobar

ಐಸೋಬಾರ್ – ಸಮ ಒತ್ತಡ/ಸಮಭಾರಿ – 

(ಅ) ನಕ್ಷೆಯಲ್ಲಿ ಸಮಾನ ಹವಾಮಾನ ಒತ್ತಡವುಳ್ಳ ಸ್ಥಳಗಳ ಮೂಲಕ ಹಾದುಹೋಗುವ ಒಂದು ರೇಖೆ.

(ಆ) ಒಂದೇ ದ್ರವ್ಯರಾಶಿ ಸಂಖ್ಯೆ ಇದ್ದು ಬೇರೆ ಬೇರೆ ಪರಮಾಣು ಸಂಖ್ಯೆಯುಳ್ಳ ಎರಡು ಅಥವಾ ಅದಕ್ಕಿಂತ ಹೆಚ್ಚಿನ ನ್ಯೂಕ್ಲೈಡು( ಒಂದು ರೀತಿಯ ಪರಮಾಣು)ಗಳು.

Page 9 of 10

Kannada Sethu. All rights reserved.