ಎಲೆಕ್ಟ್ರಾನನಿಲ – ಒಂದು ಘನವಸ್ತು ಅಥವಾ ದ್ರವವಸ್ತುವಿನೊಳಗೆ ಮುಕ್ತ ಎಲೆಕ್ಟ್ರಾನುಗಳು ಅನಿಲದಂತೆ ಓಡಾಡಿಕೊಂಡಿರುವುದು.
ಕನ್ನಡ ಕನ್ನಡಿ
ವಾರಕ್ಕೆ ಐದು ಪದಗಳಂತೆ, ತಾಂತ್ರಿಕ/ವೈಜ್ಞಾನಿಕ ಕ್ಷೇತ್ರದ ಪದಗಳಿಗೆ ಕನ್ನಡ ಸಂವಾದಿ ಪದಗಳ ಪರಿಚಯ ಮಾಡುವ ಅಂಕಣವಿದು. ಕನ್ನಡದಲ್ಲಿ ಹೊಸ ಜ್ಞಾನ ನಿರ್ಮಾಣ ಆಗಬೇಕೆಂದರೆ ಅದರ ಪದಕೋಶವು ವಿಸ್ತಾರಗೊಳ್ಳಬೇಕು. ಈ ದಿಸೆಯಲಿನ್ಲ ಕಿರುಪ್ರಯತ್ನವೇ ಈ ಅಂಕಣ.
ಎಲೆಕ್ಟ್ರಾನು ಕೋವಿ – ನಿರ್ವಾತ ಕೊಳವೆಯಲ್ಲಿನ ಕಾಯಿಸಿದ ಋಣ ವಿದ್ಯುದ್ವಾರವನ್ನು ಸೂಚಿಸುವ ಪದ. ಇದು ಉಷ್ಣ ಅಯಾನು ಹೊರಚೆಲ್ಲುವಿಕೆಯ ಮೂಲಕ ಎಲೆಕ್ರ್ಟಾನುಗಳ ಒಂದು ಪ್ರವಾಹವನ್ನು ಉತ್ಪತ್ತಿ ಮಾಡುತ್ತದೆ.
ವಿದ್ಯುನ್ಮಾನ ಮಸೂರ – ವಿದ್ಯುತ್ತೀಯ ಮತ್ತು ಕಾಂತೀಯ ಕ್ಷೇತ್ರಗಳ ಒಂದು ಸಂಯೋಜನೆಯನ್ನು ಎಲೆಕ್ಟ್ರಾನು ಪುಂಜವೊಂದನ್ನು ಗಮನಕೇಂದ್ರಕ್ಕೆ ತರಲು ಬಳಸುವುದು.
ಎಲೆಕ್ಟ್ರಾನು ಸೂಕ್ಷ್ಮದರ್ಶಕ – ಒಂದು ವಸ್ತುವಿನ ಹಿಗ್ಗಿಸಿದ ಬಿಂಬವನ್ನು ಉತ್ಪತ್ತಿ ಮಾಡಲು ಬೆಳಕಿನ ಕಿರಣಗಳ ಬದಲು ವಿದ್ಯುತ್ತೀಯ ಹಾಗೂ ಕಾಂತೀಯ ಕ್ಷೇತ್ರಗಳ ಸಂಯೋಜನೆಯನ್ನು ಬಳಸುವ ಒಂದು ಉಪಕರಣ.
ಎಲೆಕ್ಟ್ರಾನು ದೃಶ್ಯ-ಬೆಳಕು ವಿಜ್ಞಾನ – ವಿದ್ಯುತ್ತೀಯ ಮತ್ತು ಕಾಂತೀಯ ಕ್ಷೇತ್ರಗಳಲ್ಲಿ ಒಂದು ಎಲೆಕ್ಟ್ರಾನು ಕಿರಣಪುಂಜದ ವರ್ತನೆ ಮತ್ತು ನಿಯಂತ್ರಣಗಳ ಅಧ್ಯಯನ.
ಎಲೆಕ್ಟ್ರಾನು ಅರೆಕಾಂತೀಯ ಅನುರಣನ – ಲೋಹಗಳು ಮತ್ತು ಅರೆವಾಹಕಗಳಲ್ಲಿ ವಾಹಕ ಎಲೆಕ್ಟ್ರಾನುಗಳಿಂದ ಉಂಟಾಗುವ ಅನುರಣನವನ್ನು ಎಲೆಕ್ಟ್ರಾನು ಅರೆಕಾಂತೀಯ ಅನುರಣನ ಎನ್ನುತ್ತಾರೆ.
ಎಲೆಕ್ಟ್ರಾನ್ ಸ್ಪಿನ್ ರೆಸೋನೆನ್ಸ್ – ಎಲೆಕ್ಟ್ರಾನು ಗಿರಕಿ ಅನುರಣನ – ವರ್ಣಪಟಲ ದರ್ಶಕ ವ್ಯವಸ್ಥೆ ( spectroscopy) ಯಲ್ಲಿ ಬಳಸುವ ಒಂದು ಕಾರ್ಯವಿಧಾನ ಇದು. ಎಲೆಕ್ಟ್ರಾನಿನ ಗಿರಕಿಯನ್ನು ಮತ್ತು ಅದಕ್ಕೆ ಸಂಬಂಧಿಸಿದ ಕಾಂತೀಯ ತಿರುಗುಬಲವನ್ನು ಆಧರಿಸಿ, ಅಣು ವೊಂದರಲ್ಲಿ ಎಲೆಕ್ಟ್ರಾನೊಂದು ಎಲ್ಲಿದೆ ಎಂದು ತಿಳಿಯುವಲ್ಲಿ ಈ ವಿಧಾನವು ಸಹಾಯ ಮಾಡುತ್ತದೆ.
ಎಲೆಕ್ಟ್ರಾನು ರಂಗು – ಕೆಲವು ಆಮ್ಲಗಳು ಎಲೆಕ್ಟ್ರಾನುಗಳನ್ನು ತುಂಬ ಹೆಚ್ಚಾಗಿ ಚದುರಿಸುವ ಗುಣವನ್ನು ಹೊಂದಿರುತ್ತವೆ. ಹೀಗಾಗಿ ಇವುಗಳನ್ನು ಎಲೆಕ್ಟ್ರಾನು ಸೂಕ್ಷ್ಮದರ್ಶಕದಲ್ಲಿ ಬಳಸುತ್ತಾರೆ. ಅಂದರೆ, ಬೆಳಕು ಸೂಕ್ಷ್ಮದರ್ಶಕಗಳಲ್ಲಿ ರಂಗಿನ ಮಾಧ್ಯಮಗಳನ್ನು ಬಳಸುವಂತೆಯೇ ಇವನ್ನು ಬಳಸಲಾಗುವುದು.
ಎಲೆಕ್ಟ್ರಾನು ದೂರದರ್ಶಕ – ಅತಿನೇರಳೆ ಹಾಗೂ ಅಧೋಕೆಂಪು ವಿಕಿರಣವನ್ನು ದೃಗ್ಗೋಚರ ಬಿಂಬವನ್ನಾಗಿ ಪರಿವರ್ತಿಸಬಲ್ಲ ಒಂದು ದೂರದರ್ಶಕ.
ಎಲೆಕ್ಟ್ರಾನು ಉಷ್ಣತೆ – ಪ್ಲಾಸ್ಮಾದೊಳಗಿನ ಎಲೆಕ್ಟ್ರಾನುಗಳ ಸರಾಸರಿ ಚಲನಶಕ್ತಿಯನ್ನೇ ಅನಿಲದ ಅಣುಗಳು ಕೂಡ ಹೊಂದಿರುವ ಉಷ್ಣತೆ.