ಫ್ಲಕ್ಸ್ – ವಸ್ತುಪ್ರವಾಹ ಅಥವಾ ಶಕ್ತಿಪ್ರವಾಹ – 1. ವಸ್ತು ಅಥವಾ ಶಕ್ತಿಯು ಹರಿಯುತ್ತಿರುವ ದಿಕ್ಕಿಗೆ ಲಂಬವಾಗಿರುವ ಏಕಘಟಕ ವಿಸ್ತೀರ್ಣದಲ್ಲಿ, ಹರಿಯುವ ಆ ವಸ್ತು ಅಥವಾ ಶಕ್ತಿಯ ಹರಿವಿನ ಗತಿ.
2. ಕ್ಷೇತ್ರದಲ್ಲಿನ ಬಲದ ರೇಖೆಗಳ ಸಂಖ್ಯೆ.
ವಾರಕ್ಕೆ ಐದು ಪದಗಳಂತೆ, ತಾಂತ್ರಿಕ/ವೈಜ್ಞಾನಿಕ ಕ್ಷೇತ್ರದ ಪದಗಳಿಗೆ ಕನ್ನಡ ಸಂವಾದಿ ಪದಗಳ ಪರಿಚಯ ಮಾಡುವ ಅಂಕಣವಿದು. ಕನ್ನಡದಲ್ಲಿ ಹೊಸ ಜ್ಞಾನ ನಿರ್ಮಾಣ ಆಗಬೇಕೆಂದರೆ ಅದರ ಪದಕೋಶವು ವಿಸ್ತಾರಗೊಳ್ಳಬೇಕು. ಈ ದಿಸೆಯಲಿನ್ಲ ಕಿರುಪ್ರಯತ್ನವೇ ಈ ಅಂಕಣ.
ಫ್ಲಕ್ಸ್ – ವಸ್ತುಪ್ರವಾಹ ಅಥವಾ ಶಕ್ತಿಪ್ರವಾಹ – 1. ವಸ್ತು ಅಥವಾ ಶಕ್ತಿಯು ಹರಿಯುತ್ತಿರುವ ದಿಕ್ಕಿಗೆ ಲಂಬವಾಗಿರುವ ಏಕಘಟಕ ವಿಸ್ತೀರ್ಣದಲ್ಲಿ, ಹರಿಯುವ ಆ ವಸ್ತು ಅಥವಾ ಶಕ್ತಿಯ ಹರಿವಿನ ಗತಿ.
2. ಕ್ಷೇತ್ರದಲ್ಲಿನ ಬಲದ ರೇಖೆಗಳ ಸಂಖ್ಯೆ.
ಫ್ಲಕ್ಸ್ ಡೆನ್ಸಿಟಿ (ಮ್ಯಾಗ್ನೆಟಿಕ್) – (ಕಾಂತೀಯ) ಬಲರೇಖಾ ಸಾಂದ್ರತೆ – ಒಂದು ಬಿಂದುವಿನಲ್ಲಿ ಏಕ ಘಟಕ ವಿಸ್ತೀರ್ಣದಲ್ಲಿರುವ ಕಾಂತೀಯ ರೇಖೆಗಳು.
ಫ್ಲಕ್ಸ್ ಮೀಟರ್ – ಬಲರೇಖಾ ಮಾಪಕ – ಕಾಂತೀಯ ಬಲರೇಖೆಗಳನ್ನು ಅಳೆಯಲು ಬಳಸುವ ಉಪಕರಣ. ಗ್ಯಾಲ್ವನೋಮೀಟರ್ ಹಾಗೂ ಲೋಹದ ಒಂದು ಸುರುಳಿಯನ್ನು ಬಳಸಿ ಇದನ್ನು ತಯಾರು ಮಾಡಿರುತ್ತಾರೆ.
ಫ್ಲೈ ವ್ಹೀಲ್ – ಗತಿದಾಯಿ ಚಕ್ರ ಅಥವಾ ಮುಖ್ಯ ಚಕ್ರ – ಯಂತ್ರೋಪಕರಣಗಳಲ್ಲಿ ಶಕ್ತಿ ಸಂರಕ್ಷಕ ಉಪಕರಣವಾಗಿ ಬಳಸುವ ಒಂದು ದೊಡ್ಡ ಚಕ್ರ ಇದು.
ಫೋಕಲ್ ಲೆಂಗ್ತ್ – ಸಂಗಮ ದೂರ – ಒಂದು ಮಸೂರ ಅಥವಾ ಕನ್ನಡಿಯು ಬೆಳಕಿನ ಸಮಾಂತರ ಪುಂಜವೊಂದನ್ನು ಒಂದೇ ಬಿಂದುವಿಗೆ ಸೇರಿಸಿ ತರುವುದರ ದೂರದ ಅಳತೆ ಇದು.
ಫೋಕಲ್ ಪ್ಲೇನ್ – ಸಂಗಮ ಮೇಲ್ಮೈ – ಒಂದು ಮಸೂರ ಅಥವಾ ಕನ್ನಡಿಯ ಅಕ್ಷಕ್ಕೆ ಲಂಬವಾಗಿರುವ ಹಾಗೂ ಅದರ ಸಂಗಮ ಬಿಂದುವಿನ ಮೂಲಕ ಹಾಯ್ದುಹೋಗುವ ಮೇಲ್ಮೈ.
ಫುಟ್ – ಅಡಿ : ಫುಟ್- ಪೌಂಡ್- ಸೆಕೆಂಡ್ ( ಎಫ್. ಪಿ. ಎಸ್) ಮೂಲಮಾನ ವ್ಯವಸ್ಥೆಯಲ್ಲಿನ ಉದ್ದದ ಮೂಲಮಾನ. ಒಂದು ಗಜದ ( ಯಾರ್ಡ್ ) ಮೂರನೇ ಒಂದು ಭಾಗ.
ಫೊರ್ಬಿಡನ್ ಬ್ಯಾಂಡ್ – ನಿಷಿದ್ಧ ಪಟ್ಟಿ – ಒಂದು ಘನವಸ್ತುವಿನ ಹರಳಿನಲ್ಲಿ ಯಾವ ಎಲೆಕ್ಟ್ರಾನು ಸಹ ಪ್ರವೇಶಿಸದ/ತನ್ನದಾಗಿಸದ ಶಕ್ತಿ ಪಟ್ಟಿ ಇದು. ಶಕ್ತಿಪಟ್ಟಿಗಳ ಚಿತ್ರಗಳಲ್ಲಿ ಇವು ಖಾಲಿಜಾಗಗಳಾಗಿ ಕಂಡು ಬರುತ್ತವೆ.
ಫೋರ್ಸ್ – ಬಲ – ನಿಷ್ಕ್ರಿಯ ವಸ್ತುವೊಂದರ ದ್ರವ್ಯವೇಗವನ್ನು ( ಮೊಮೆಂಟಮ್ ಅನ್ನು) ಬದಲಾಯಿಸುವ ಮಾಡುಗ ಇದು. ಬಲವು ದ್ರವ್ಯವೇಗದ ಹೆಚ್ಚುವಿಕೆಯ ಗತಿಗೆ ಸಮಾನುಪಾತದಲ್ಲಿರುತ್ತದೆ.
ಫೋರ್ಸ್ ರೇಷ್ಯೋ – ಬಲದ ಅನುಪಾತ – ಯಂತ್ರವೊಂದಕ್ಕೆ ಸಂಬಂಧಿಸಿದಂತೆ ಅದಕ್ಕೆ ಕೊಡುವ ಬಲ( ಎಫರ್ಟ್) ಕ್ಕೂ ಅದು ಕೊಡುವ ಬಲಕ್ಕೂ ( ಲೋಡ್) ಇರುವ ಅನುಪಾತ. ಇದಕ್ಕೆ ಯಾವುದೇ ಮೂಲಮಾನವಿಲ್ಲ, ಆದರೆ ಇದನ್ನು ಶೇಕಡಾವಾರು ಲೆಕ್ಕದಲ್ಲಿ ನಿರೂಪಿಸುತ್ತಾರೆ. ಕಡಿಮೆ ಬಲ ಕೊಟ್ಟು ಹೆಚ್ಚು ಬಲ ಪಡೆಯುವಂತೆ ಯಂತ್ರಗಳನ್ನು ರೂಪಿಸಲು ಯಾವಾಗಲೂ ಪ್ರಯತ್ನಿಸುತ್ತಾರೆ.
Kannada Sethu. All rights reserved.