ಇನ್ಸ್ಯುಲೇಟರ್, ಥರ್ಮಲ್ – ಪ್ರತಿರೋಧಕ, ಉಷ್ಣತಾ –
ಉಷ್ಣತೆಯನ್ನು ಸರಾಗವಾಗಿ (ಕೂಡಲೇ ಎಂಬಂತೆ) ತಮ್ಮೊಳಗೆ ಮತ್ತು ತಮ್ಮ ಮೂಲಕ ಹರಿಯಲು ಬಿಡದ ವಸ್ತುಗಳು.
ವಾರಕ್ಕೆ ಐದು ಪದಗಳಂತೆ, ತಾಂತ್ರಿಕ/ವೈಜ್ಞಾನಿಕ ಕ್ಷೇತ್ರದ ಪದಗಳಿಗೆ ಕನ್ನಡ ಸಂವಾದಿ ಪದಗಳ ಪರಿಚಯ ಮಾಡುವ ಅಂಕಣವಿದು. ಕನ್ನಡದಲ್ಲಿ ಹೊಸ ಜ್ಞಾನ ನಿರ್ಮಾಣ ಆಗಬೇಕೆಂದರೆ ಅದರ ಪದಕೋಶವು ವಿಸ್ತಾರಗೊಳ್ಳಬೇಕು. ಈ ದಿಸೆಯಲಿನ್ಲ ಕಿರುಪ್ರಯತ್ನವೇ ಈ ಅಂಕಣ.
ಇನ್ಸ್ಯುಲೇಟರ್, ಥರ್ಮಲ್ – ಪ್ರತಿರೋಧಕ, ಉಷ್ಣತಾ –
ಉಷ್ಣತೆಯನ್ನು ಸರಾಗವಾಗಿ (ಕೂಡಲೇ ಎಂಬಂತೆ) ತಮ್ಮೊಳಗೆ ಮತ್ತು ತಮ್ಮ ಮೂಲಕ ಹರಿಯಲು ಬಿಡದ ವಸ್ತುಗಳು.
ಇಂಟಿಗ್ರೇಟೆಡ್ ಸರ್ಕ್ಯೂಟ್ – ಸಂಕಲಿತ ವಿದ್ಯುನ್ಮಂಡಲ – ಅನೇಕ ಬೇರೆ ಬೇರೆ ಅಂಗಗಳು ತನ್ನೊಳಗೆ ಒಂದು ಘಟಕವಾಗುವಂತೆ ಸಂಕಲಿಸಿದ ವಿನ್ಯಾಸ ಇರುವಂತಹ ವಿದ್ಯುನ್ಮಂಡಲ.
ಇಂಟಿಗ್ರೇಟಿಂಗ್ ಮೀಟರ್ – ಸಂಕಲನ ಮಾಪಕ – ಅಳೆದಂತಹ ಒಂದು ಪರಿಮಾಣವನ್ನು ಕಾಲಕ್ಕೆ ಸಂಬಂಧಿಸಿದ ರೀತಿಯಲ್ಲಿ ಸಂಕಲಿಸುವ ಉಪಕರಣ.
ಇಂಟಿಗ್ರೇಟರ್ – ಸಂಕಲನ( ಕೂಡುವ) ಯಂತ್ರ – ನಿರಂತರ ಕೂಡುವಿಕೆ ಎಂಬ ಗಣಿತಕ್ರಿಯೆಯನ್ನು ಮಾಡಲು ಬಳಸುವ ಯಂತ್ರಚಾಲಕ ಅಥವಾ ವಿದ್ಯುತ್ ಉಪಕರಣ.
ಇಂಟೆನ್ಸಿಫೈಯರ್ – ತೀಕ್ಷ್ಣಕಾರಕ – ಛಾಯಾಚಿತ್ರ ಮಾಧ್ಯಮದ ಧನಾತ್ಮಕ ಅಥವಾ ಋಣಾತ್ಮಕ ಬಿಂಬವನ್ನು ತೀಕ್ಷ್ಣ ಗೊಳಿಸುವ ಅಥವಾ ಬಲಪಡಿಸುವ ವಸ್ತು.
ಇಂಟರ್ಯಾಕ್ಷನ್ – ಅಂತರ್ ಕ್ರಿಯೆ – ಎರಡು ಅಥವಾ ಅದಕ್ಕಿಂತ ಹೆಚ್ಚು ವಸ್ತುಗಳ ಅಥವಾ ವ್ಯವಸ್ಥೆಗಳ ಪರಸ್ಪರ
ಪರಿಣಾಮ. ಇದರಲ್ಲಿ ಗುರುತ್ವಾಕರ್ಷಣೆಯ, ವಿದ್ಯುತ್ ಕಾಂತೀಯ, ಪ್ರಬಲ ಹಾಗೂ ದುರ್ಬಲ ಎಂದು ನಾಲ್ಕು ವಿಧಗಳಿರುತ್ತವೆ.
ಇಂಟರ್ಫೆರೆನ್ಸ್ – ಅಡ್ಡ ಹಾಯುವಿಕೆ – ಒಂದು ಅಲೆಯ ಮೇಲೆ ಇನ್ನೊಂದು ಅಲೆಯು ಹಾಯ್ದಾಗ ಉಂಟಾಗುವ ಪರಿಣಾಮ.
ಇಂಟರ್ ಫೆರ್ರೋಮೀಟರ್ – ಅಲೆ ಹಾಯುವಿಕೆಯ ಮಾಪಕ – ಬೆಳಕಿನ ತರಂಗಾಂತರ, ವರ್ಣಪಟಲದ ಗೆರೆಗಳ ಅತಿಸೂಕ್ಷ್ಮ ರಚನೆಗಳು, ಬೇರೆ ಬೇರೆ ವಸ್ತುಗಳ ವಕ್ರೀಭವನ ಸೂಚ್ಯಂಕಗಳು ….ಈ ಮುಂತಾದ ಇನ್ನೂ ಹಲವು ಸಂಗತಿಗಳನ್ನು ನಿಖರವಾಗಿ ಅಳೆಯಲು ಬಳಸುವ ದೃಶ್ಯೋಪಕರಣ.
ಇಂಟರ್ ಮೀಡಿಯೆಟ್ ನ್ಯೂಟ್ರಾನ್ಸ್ – 100 eV ಯಿಂದ 10000 eV ವರೆಗಿನ ಶಕ್ತಿಯನ್ನು ಹೊಂದಿರುವ ನ್ಯೂಟ್ರಾನುಗಳು.
ಇಂಟರ್ ಮೀಡಿಯೆಟ್ ರಿಯಾಕ್ಟರ್ – ಮಧ್ಯಮಗತಿಯ ಅಣುಸ್ಥಾವರ – ಇದೊಂದು ವಿಶೇಷ ರೀತಿಯ ಅಣುಸ್ಥಾವರ. ಇದರಲ್ಲಿ ಬೀಜಕೇಂದ್ರದ ಸರಣಿಕ್ರಿಯೆಯನ್ನು ಮಧ್ಯಮಗತಿಯ ನ್ಯೂಟ್ರಾನುಗಳು ನಿರ್ವಹಿಸುತ್ತಿರುತ್ತವೆ.
Kannada Sethu. All rights reserved.