ಒಬ್ಬ ಕನ್ನಡಾಭಿಯಾನಿಯಾಗಿ ಹಾಗೂ ಕನ್ನಡದ ಅಧ್ಯಾಪಕಿಯಾಗಿ ಕನ್ನಡದ ಉಳಿವು, ಬೆಳವಣಿಗೆಗಳ ಬಗ್ಗೆ ನಾನು ಯೋಚಿಸುತ್ತಾ ಇರ್ತೇನೆ‌.

ಕರ್ನಾಟಕ ಏಕೀಕರಣ ಆಗಿ ಎಪ್ಪತ್ತು ವರ್ಷಗಳಲ್ಲಿ ಕೃಷ್ಣೆ, ತುಂಗೆ, ಕಾವೇರಿಗಳಲ್ಲಿ ಬೇಕಾದಷ್ಟು ನೀರು ಹರಿದಿದೆ‌. ಇಷ್ಟು ವರ್ಷಗಳಲ್ಲಿ ನಡೆದ ಚಳುವಳಿಗಳು, ಸರ್ಕಾರ ಹಾಗೂ ಸರ್ಕಾರೇತರ ಸಂಸ್ಥೆಗಳಿಂದ, ಉದ್ಯಮಿಗಳು ಹಾಗೂ ಜನಸಾಮಾನ್ಯರಿಂದ ಕನ್ನಡದ ಉಳಿವು ಮತ್ತು ಬೆಳವಣಿಗೆಗಳನ್ನು ಕುರಿತು ಆಗಿರುವ ಕೆಲಸ ಮತ್ತು ಚಿಂತನೆಗಳ ಸಾರಸಂಗ್ರಹವನ್ನು ಭಟ್ಟಿ ಇಳಿಸಿ ಹೇಳುವುದಾದರೆ, ಕನ್ನಡವನ್ನು ಗರಿಷ್ಠ ಮಟ್ಟದಲ್ಲಿ ಬಳಸುವುದು ಮತ್ತು ಕನ್ನಡಿಗರನ್ನು ಕಷ್ಟ‌ನಷ್ಟಗಳಿಗೆ ಒಳಗಾಗದಂತೆ ಕಾಪಾಡುವುದೊಂದೇ ನಮ್ಮ ನುಡಿಯನ್ನು ಸುಸ್ಥಿರವಾಗಿ ಉಳಿಸಲು ನಮ್ಮ ಎದುರಿಗಿರುವ ದಾರಿ ಅನ್ನಿಸುತ್ತದೆ. ಈ ದಿಸೆಯಲ್ಲಿ ಜನಸಾಮಾನ್ಯರು, ಕನ್ನಡ ಅಧ್ಯಾಪಕರು ಹಾಗೂ ಸರ್ಕಾರ ಈ ಮೂರೂ ಘಟಕಗಳ ಜನರು ತಮ್ಮ ತಮ್ಮ ಹಂತದಲ್ಲಿ ಗರಿಷ್ಠ ಕನ್ನಡ ಬಳಕೆಯನ್ನು ಮಾಡಬೇಕು. ಇದರಿಂದ ಕನ್ನಡವೂ ಉಳಿಯುತ್ತದೆ, ಕನ್ನಡಿಗರೂ ಉಳಿಯುತ್ತಾರೆ. 

ಸಂಕ್ಷಿಪ್ತವಾಗಿ ಹೇಳುವುದಾದರೆ, ನಮ್ಮ ಕಾಲದಲ್ಲಿ ಕನ್ನಡವನ್ನು ಉಳಿಸುವ ಮಂತ್ರ ಅಂದರೆ ಅದನ್ನು ಗರಿಷ್ಠ ಮಟ್ಟದಲ್ಲಿ ಬಳಸುವುದೇ ಆಗಿದೆ‌.