Magento meter

ಮಾಗ್ನೆಟೋ ಮೀಟರ್ – ಕಾಂತಶಕ್ತಿ  ಮಾಪಕ – ಕಾಂತಕ್ಷೇತ್ರವೊಂದರ ಶಕ್ತಿ, ದಿಕ್ಕು ಹಾಗೂ ಏರುಪೇರುಗಳನ್ನು ಅಳೆಯುವಂತಹ ವೈಜ್ಞಾನಿಕ ಉಪಕರಣ.

Magnetic moment

ಮ್ಯಾಗ್ನೆಟಿಕ್ ಮೊಮೆಂಟ್ – ಕಾಂತೀಯ ತಿರುಗುಬಲ‌ – ಇದು ಒಂದು ಕಾಂತಕ್ಷೇತ್ರದ ದಿಕ್ಕಿಗೆ ತಿರುಗಿಕೊಳ್ಳಲು ಒಂದು ವಸ್ತುವಿನಲ್ಲಿರುವ ಪ್ರವೃತ್ತಿ ಎಷ್ಟು ಎಂಬುದರ ಅಳತೆ.

Magnetic mirror

ಮ್ಯಾಗ್ನೆಟಿಕ್ ಮಿರರ್ – ಕಾಂತೀಯ ಕನ್ನಡಿ – ಉಷ್ಣಬೀಜಕೇಂದ್ರ ಪ್ರಯೋಗದ ಉಪಕರಣಗಳಲ್ಲಿ ಪ್ಲಾಸ್ಮಾ ( ವಸ್ತುವಿನ ನಾಲ್ಕನೆಯ ಸ್ಥಿತಿ – ಅತ್ಯುನ್ನತ ವಿದ್ಯುದಣುಕೃತ ಅನಿಲ ಸ್ಥಿತಿ) ವನ್ನು ಹಿಡಿದಿಟ್ಟುಕೊಳ್ಳಲು ಬಳಸುವ ಒಂದು ಉಪಕರಣವಿದು. ಇದರಲ್ಲಿ ಒಂದು ಕೊಳವೆಯ ತುದಿಯಲ್ಲಿ ಅತಿಹೆಚ್ಚು ಕಾಂತಕ್ಷೇತ್ರಶಕ್ತಿಯಿರುವ ಪ್ರದೇಶವಿರುತ್ತದೆ. ಈ ಪ್ರದೇಶವನ್ನು ಪ್ರವೇಶಿಸುವ ವಿದ್ಯುದಣುಗಳು ಥಟ್ಟನೆ ತಮ್ಮ ಚಲನೆಯ ವಿರುದ್ಧ ದಿಕ್ಕಿಗೆ ತಿರುಗಿ, ತಾವು ಯಾವ ಪ್ಲಾಸ್ಮಾದಿಂದ ಹುಟ್ಟಿದ್ದವೋ ಅದಕ್ಕೆಯೇ ಹಿಮ್ಮರಳುತ್ತವೆ.

Magnetic meridian

ಮ್ಯಾಗ್ನೆಟಿಕ್ ಮೆರಿಡಿಯನ್ – ಕಾಂತೀಯ ರೇಖಾಂಶ – ಭೂಮಿಯ ಕಾಂತಕ್ಷೇತ್ರದ ದಿಕ್ಕನ್ನು ತನ್ನಲ್ಲಿ‌ ಇಟ್ಟುಕೊಂಡಿರುವಂತಹ ಒಂದು ಲಂಬನೇರದ ಮೇಲ್ಮೈ.

Magnetic intensity

ಮ್ಯಾಗ್ನೆಟಿಕ್ ಇಂಟೆನ್ಸಿಟಿ – ಕಾಂತೀಯ ತೀಕ್ಷ್ಣತೆ – ಒಂದು ಕಾಂತಕ್ಷೇತ್ರದ ಒಂದು ಬಿಂದುವಿನಲ್ಲಿ ‌ಇಟ್ಟಂತಹ ಏಕಘಟಕ ಉತ್ತರಧ್ರುವವು ಅನುಭವಿಸುವ ಬಲವನ್ನು ಕಾಂತೀಯ ತೀಕ್ಷ್ಣತೆ ಎನ್ನುತ್ತಾರೆ. ಇದರ ಮೂಲಮಾನ ಆಂಪಿಯರ್ ಪರ್ ಮೀಟರ್.

ಕನ್ನಡ ಗಾದೆಮಾತು – ನುಂಗಿಕೊಂಡ ಸಂಕಟ ಬೆಂಕಿಗಿಂತ ಹೆಚ್ಚು.

ಕೆಲವು ಸಲ ಮನುಷ್ಯರು, ತಮಗೆ ಆದ ತೀವ್ರ ನೋವು, ಸಂಕಟ, ಅವಮಾನಗಳನ್ನು ನುಂಗಿಕೊಂಡು ಏನೂ ಹೇಳದೆ, ಪ್ರತಿಕ್ರಯಿಸದೆ, ಹಾಗೇ ಸುಮ್ಮನಿದ್ದುಬಿಡುತ್ತಾರೆ.‌ ಮೇಲ್ನೋಟಕ್ಕೆ ಅವರು ಆರಾಮಾಗಿ ಇದ್ದಾರೆ ಅನ್ನಿಸಿದರೂ ಆ ಸಂಕಟ ಒಳಗೇ ಅವರನ್ನು ತೀವ್ರವಾಗಿ ಸುಡುತ್ತಿರುತ್ತದೆ. ಆದರೆ ಕಾಲಾನಂತರ ಈ ಸಂಕಟವು ಯಾವುದಾದರೂ ದೈಹಿಕ, ಮಾನಸಿಕ ರೋಗವಾಗಿ ಪರಿವರ್ತನೆ ಆಗಬಹುದು‌. ಅಥವಾ ಈ ಸಂಕಟದ ಕಾರಣದಿಂದಾಗಿ ಆ ವ್ಯಕ್ತಿಯು ಇಡೀ ಲೋಕದ ವಿರುದ್ಧ ತಿರುಗಿ ಬೀಳಬಹುದು‌. ಆಧುನಿಕ ಮನೋವಿಜ್ಞಾನ ಸಹ ‘ತಾನು ನುಂಗಿಕೊಂಡ ಸಂಕಟವು ವ್ಯಕ್ತಿಯ ಮಟ್ಟಿಗೆ ವಿಷಕಾರಿಯಾಗುತ್ತದೆ, […]

ಬಟಾಟೆ ಪದದ ಗಮ್ಮತ್ತು, ‘ಆಲೂಗಡ್ಡೆ’ಯ ಕಿಮ್ಮತ್ತು!

ದಕ್ಷಿಣ ಕನ್ನಡದಲ್ಲಿ ಬೆಳೆದ ನನ್ನಂಥವರಿಗೆ ‘ಬಟಾಟೆ ಗಸಿ’ ತುಂಬ ಪರಿಚಿತ ಪದ. ತೆಂಗಿನಕಾಯಿ ತುರಿಯನ್ನು ರುಬ್ಬಿ‌ ಹಾಕಿ ಮಾಡುವ ಸಾಗುವಿನಂತಹ ಖಾದ್ಯ ಅದು. ಉಡುಪಿ ಶೈಲಿಯ ಅಡುಗೆಗಳಲ್ಲಿ ‘ಬಟಾಟೆ ಬಾಜಿ'( ಒಂದು ರೀತಿಯ ಪಲ್ಯ) ಸಹ ಒಂದು ಪ್ರಸಿದ್ಧ ವ್ಯಂಜನ.‌ ತುಂಬ ಸ್ವಾರಸ್ಯಕರವಾದ ವಿಷಯ ಅಂದರೆ ‘ಬಟಾಟ’ ಎಂಬ ಪೋರ್ಚುಗೀಸ್ ಭಾಷೆಯ ಪದವು, ಭಾರತದ ಪಶ್ಚಿಮ ಕರಾವಳಿಯ ರಾಜ್ಯಗಳಲ್ಲಿ, ಅಂದರೆ ಗೋವಾ, ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ, ‘ಬಟಾಟೆ’ ಆಗಿ ಉಳಿದಿದೆ. ಕರ್ನಾಟಕದ ಉಳಿದ ಭಾಗಗಳಲ್ಲಿ ಇದಕ್ಕೆ ಆಲೂಗಡ್ಡೆ […]

Magnetic Induction

ಮ್ಯಾಗ್ನೆಟಿಕ್ ಇಂಡಕ್ಷನ್ – ಕಾಂತೀಯ ಪ್ರೇರಣೆ – ಬಾಹ್ಯ ಕಾಂತಕ್ಷೇತ್ರವೊಂದರಿಂದ ಒಂದು ವಸ್ತುವಿನ‌ ಅಯಸ್ಕಾಂತೀಕರಣ. ಕಾಂತೀಯ ವಸ್ತುವಿನ ತುಂಡೊಂದನ್ನು ಪ್ರಬಲ ಅಯಸ್ಕಾಂತದ ಪಕ್ಕದಲ್ಲಿಟ್ಟಾಗ ಅದರಲ್ಲಿ ಉತ್ತರ ಮತ್ತು ದಕ್ಷಿಣ ಧ್ರುವಗಳು ಆವಾಹಿತವಾಗುತ್ತವೆ. ಈಗ ಈ ಕಾಂತೀಯ ವಸ್ತುವಿನ ತುಂಡು ಒಂದು ಪ್ರೇರಿತ ಅಯಸ್ಕಾಂತದಂತೆ ವರ್ತಿಸುತ್ತದೆ ಮತ್ತು ಇನ್ನೊಂದು ಅಯಸ್ಕಾಂತದಿಂದ ಆಕರ್ಷಿತವಾಗುತ್ತದೆ.

Magnetic hysteresis

ಮ್ಯಾಗ್ನೆಟಿಕ್ ಹಿಸ್ಟೆರಿಸಿಸ್ – ಕಾಂತೀಯ ಉಳಿಕೆ ಪರಿಣಾಮ ( ವಿಲಂಬನ) – ಪ್ರಬಲ‌ ಕಾಂತವಸ್ತುಗಳನ್ನು ಕಾಂತಗೊಳಿಸಿಯಾದ ಮೇಲೆ, ಆ ಕಾಂತತ್ವವನ್ನು ತೆಗೆದ ಮೇಲೂ ಅವುಗಳಲ್ಲಿ ಸ್ವಲ್ಪ ಕಾಂತೀಯತೆ ಉಳಿದಿರುತ್ತದೆ. ಹೀಗೆ ಕಾಂತೀಯತೆಯು ಉಳಿಯುವುದನ್ನು ‘ಕಾಂತೀಯ ಉಳಿಕೆ ಪರಿಣಾಮ’ ಎನ್ನುತ್ತಾರೆ.

Magnetic head

ಮ್ಯಾಗ್ನೆಟಿಕ್ ಹೆಡ್ – ಕಾಂತೀಯ ಪ್ರಮುಖ – ಒಂದು‌ ಕಾಂತೀಯ ದಾಖಲುಕಾರಕದಲ್ಲಿ ವಿದ್ಯುತ್ತೀಯ ಕಂಪನಗಳನ್ನು ಕಾಂತೀಯ ಪಟ್ಟಿಯ ಮೇಲೆ ಸಂಗ್ರಹಿಸುವುದಕ್ಕಾಗಿ, ಕಾಂತೀಯ ಕಂಪನಗಳನ್ನಾಗಿ ಪರಿವರ್ತಿಸುವಂತಹ ಶಕ್ತಿ ನಿರ್ವಾಹಕ ಇದು‌.

Page 1 of 3

Kannada Sethu. All rights reserved.