Crown glass

ಮಸೂರ ತಯಾರಿಕಾ ಗಾಜು ಅಥವಾ ದೃಶ್ಯೋಪಕರಣ ತಯಾರಿಕಾ ಗಾಜು – ಸಾಕಷ್ಟು ಗಟ್ಟಿಯಾಗಿದ್ದರೂ ಸುಲಭವಾಗಿ ಉಜ್ಜಿ ಹೊಳಪು ನೀಡಲು ಸಾಧ್ಯವುಳ್ಳ ಗಾಜು. ಇದು ತುಂಬಾ ಪಾರದರ್ಶಕವಾಗಿರುತ್ತದೆ.

Cathode ray oscilloscope

ಋಣಧ್ರುವ ಕಿರಣ ಬಿಂಬ ದರ್ಶಕ –  ವಿದ್ಯುತ್ ಪ್ರವಾಹವನ್ನು ಅಥವಾ  ವಿದ್ಯುದಂಶವನ್ನು ಒಂದು ಪ್ರತಿದೀಪಕ (ಫ್ಲೋರೋಸೆಂಟ್) ಪರದೆಯ ಮೇಲೆ ತೋರಿಸುವ ಒಂದು ಉಪಕರಣ.

Critical speed

ನಿರ್ಧಾರಕ ವೇಗ – ದ್ರವಗಳ ಹರಿವಿನಲ್ಲಿ ಶಾಂತ ಹರಿವಿನಿಂದ ಪ್ರಕ್ಷುಬ್ಧ ಹರಿವಿಗೆ ಆ ದ್ರವವು ಬದಲಾಗುವಂತಹ ವೇಗ.

Critical mass

ನಿರ್ಧಾರಕ ದ್ರವ್ಯರಾಶಿ – ಒಂದು ಅಣುಸ್ಥಾವರದಲ್ಲಿ ಸರಣಿಕ್ರಿಯೆಯು ಚಾಲನೆಯಲ್ಲಿರುವುದಕ್ಕಾಗಿ ಅಗತ್ಯವಿರುವ ವಿದಳನವಸ್ತುವಿನ ಕನಿಷ್ಠ ಪ್ರಮಾಣ.

Couple

ಜೋಡಿಬಲ – ಒಂದಕ್ಕೊಂದು ಸಮ ಹಾಗೂ ವಿರುದ್ಧವಾಗಿರುವ ಬಲಗಳು. ಇವು ಒಂದೇ ಬಿಂದುವಿನಲ್ಲಿ ವರ್ತಿಸುವುದಿಲ್ಲ, ಬದಲಾಗಿ‌ ಆ ವಸ್ತುವನ್ನು ತಿರುಗುವಂತೆ ಮಾಡುತ್ತವೆ.

Counter

ಎಣಿಕೆ ಉಪಕರಣ – ಕಣಗಳನ್ನು ಮತ್ತು ವಿದ್ಯುತ್ ಕಾಂತೀಯ ವಿಕಿರಣವನ್ನು ಎಣಿಸಲು ಬಳಸುವ ಉಪಕರಣ. 

Cosmic rays

ವಿಶ್ವಾತ್ಮಕ ಅಲೆಗಳು‌ – ಬಾಹ್ಯಾಕಾಶದಿಂದ ಹೊರಟು ಭೂಮಿಯನ್ನು ತಲುಪುವಂತಹ ತುಂಬ ಶಕ್ತವಾದ ವಿಕಿರಣ.

Corpuscular theory of light

ಬೆಳಕಿನ ಕಣ ಸಿದ್ದಾಂತ – ಬೆಳಕು ಕಣಗಳ ರೂಪದಲ್ಲಿ ಪ್ರಯಾಣಿಸುತ್ತದೆ ಎಂದು ಊಹಿಸುವ ವಾದ.

Corona

ಪ್ರಭಾವಲಯ – ಸೂರ್ಯನ ವಾತಾವರಣದ ಹೊರ ಅಂಚು.

Cornea

ಕಣ್ಗುಡ್ಡೆ ಮೇಲ್ಪೊರೆ – ಕಣ್ಣಿನ ಪಾರದರ್ಶಕ ಭಾಗ.

Page 2 of 15

Kannada Sethu. All rights reserved.