Full wave rectifier

ಫುಲ್ ವೇವ್ ರೆಕ್ಟಿಫೈಯರ್ – ಪೂರ್ಣ ಅಲೆ ಪರಿವರ್ತಕ‌ – ಪರ್ಯಾಯ ವಿದ್ಯುತ್ತಿನ ಋಣಾತ್ಮಕ ಅರ್ಧ ಅಲೆಯನ್ನು ಧನಾತ್ಮಕ ಅರ್ಧ ಅಲೆಯಾಗಿ ಪರಿವರ್ತಿಸುವ ಒಂದು‌ ಪರಿವರ್ತಕ. ಇದರಿಂದಾಗಿ ಆಂದೋಲನದ ಎರಡೂ ಅರ್ಧಗಳು ಕೂಡಿ ಏಕದಿಕ್ಕಿನ ವಿದ್ಯುತ್ತನ್ನು ನೀಡುವುದಕ್ಕೆ ಸಹಾಯವಾಗುತ್ತದೆ.

Fuel cell 

ಫ್ಯುಯೆಲ್ ಸೆಲ್ – ಇಂಧನ ಕೋಶ – ಇಂಧನವು ನೇರವಾಗಿ ವಿದ್ಯುಚ್ಛಕ್ತಿಯಾಗಿ ಪರಿವರ್ತನೆ ಗೊಳ್ಳುವ ಒಂದು ಕೋಶ.

Fuel

ಫ್ಯುಯೆಲ್ – ಇಂಧನ – ಒಂದು ಕುಲುಮೆಯಲ್ಲಿ ಅಥವಾ ತಾಪಯಂತ್ರದಲ್ಲಿ ಉತ್ಕರ್ಷಣೆಗೆ ( oxidation) ಒಳಗಾಗಿ ಅಥವಾ ಬೇರೆ ಯಾವುದಾದರೂ ರೀತಿಯಲ್ಲಿ ಪರಿವರ್ತನೆಗೊಂಡು ಉಪಯುಕ್ತವಾದ ತಾಪ ಅಥವಾ ಶಕ್ತಿಯನ್ನು ಬಿಡುಗಡೆ ಮಾಡುವ ವಸ್ತು.

Froth flotation

ಫ್ರಾತ್ ಪ್ಲೊಟೇಷನ್ – ನೊರೆಯ ತೇಲುವಿಕೆ – ಬೇಡದಿರುವ ಮಲಿನ ಪದಾರ್ಥಗಳಿಂದ ಲೋಹದ ಅದಿರನ್ನು ಬೇರ್ಪಡಿಸಲು ಕೈಗಾರಿಕೆಗಳಲ್ಲಿ ಬಳಸುವ ಒಂದು ವಿಧಾನ‌. ಇದರಲ್ಲಿ, ಒಟ್ಟು ಮಿಶ್ರಣವನ್ನು ಪುಡಿ ಮಾಡಿ ನೀರು, ಮತ್ತು, ನೊರೆ ಬರಿಸುವಂತಹ ಒಂದು ವಸ್ತುವನ್ನು ಸೇರಿಸಿ‌, ಇದರ ಮೂಲಕ ಗಾಳಿಯನ್ನು ನುಗ್ಗಿಸುತ್ತಾರೆ. ಬರುವಂತಹ ನೊರೆಗುಳ್ಳೆಗಳು ಲೋಹದ ಅದಿರಿನ ಕಣಗಳಿಗೆ ಅಂಟಿಕೊಂಡು ಅವುಗಳನ್ನು ಮೇಲೆ ತರುತ್ತವೆ. ಬೇಡದ ಮಲಿನ ಪದಾರ್ಥಗಳು ಕೆಳಗೇ ಉಳಿಯುತ್ತವೆ.

Fringes 

ಫ್ರಿಂಜಸ್ – ಕಪ್ಪು ಬಿಳುಪು ಪಟ್ಟಿಗಳು – ಬೆಳಕಿನಲೆಯ ಹಬ್ಬುವಿಕೆ ಅಥವಾ ಅಡ್ಡ ಹಾಯುವಿಕೆಯಿಂದ ಉಂಟಾದ ಸಮಾನಾಂತರ ಕಪ್ಪು ಬಿಳುಪು ಪಟ್ಟಿಗಳು( ಪಟ್ಟಿಯಂತಹ ಪ್ರದೇಶಗಳು).

Friction

ಫ್ರಿಕ್ಷನ್ – ಘರ್ಷಣೆ ( ತಿಕ್ಕಾಟ) – ಸಂಪರ್ಕದಲ್ಲಿರುವ ಎರಡು ಮೇಲ್ಮೈಗಳ ಸಂಬಂಧಿತ ( ರಿಲೇಟಿವ್) ಚಲನೆಯನ್ನು ವಿರೋಧಿಸುವ ಬಲ.

Frequency meter 

ಫ್ರೀಕ್ವೆನ್ಸಿ ಮೀಟರ್‌ – ಆವರ್ತನ ಮಾಪಕ – ಪರ್ಯಾಯ ವಿದ್ಯುತ್ತಿನ ಆವರ್ತನವನ್ನು ಅಳೆಯುವ ಒಂದು ಉಪಕರಣ.

Frequency divider

ಫ್ರೀಕ್ವೆನ್ಸಿ ಡಿವೈಡರ್ – ಆವರ್ತನ ವಿಭಾಜಕ – ತಾನು‌ ಪಡೆಯುತ್ತಿರುವ ಆವರ್ತನದ ನಿಖರ ಉಪಗುಣಕವಾಗಿರುವಂತಹ ಆವರ್ತನವನ್ನು ಕೊಡುವಂತಹ ಒಂದು ವಿದ್ಯುತ್ ಉಪಕರಣ.

Frequency

ಫ್ರೀಕ್ವೆನ್ಸಿ – ಆವರ್ತನ – ಒಂದು ನಿಯತರೀತಿಯ ಘಟನೆಯ ಪುನರಾವರ್ತನೆಯ ಗತಿಲೆಕ್ಕ. ಸೆಕೆಂಡೊಂದಕ್ಕೆ ಅಲೆ ಅಥವಾ ಇನ್ಯಾವುದಾದರೂ ಆಂದೋಲನ ಅಥವಾ ಕಂಪನಗಳ ಸುತ್ತುಗಳ ಸಂಖ್ಯೆ.

Frenkel defect

ಫ್ರೆಂಕೆಲ್ ಡಿಫೆಕ್ಟ್ – ಫ್ರೆಂಕೆಲ್ ದೋಷ – ಒಂದು ಹರಳಿನ ರಚನೆಯಲ್ಲಿ ಒಂದು ಪರಮಾಣು ಅಥವಾ ಒಂದು ವಿದ್ಯುದಣು ತನ್ನ ಸಾಮಾನ್ಯ ಸ್ಥಾನದಿಂದ ತೆಗೆದುಹಾಕಲ್ಪಟ್ಟು, ಪರಮಾಣು ಸಾಲು ಮತ್ತು ವಿದ್ಯುದಣುಗಳ ಸಾಲಿನ ಮಧ್ಯೆ ಸ್ಥಿತಗೊಳ್ಳುವಂಥದ್ದು.

Page 2 of 10

Kannada Sethu. All rights reserved.