ಐಸೆನ್ಥಾಲ್ಪಿಕ್ ಪ್ರೋಸೆಸ್ – ಸಮಶಾಖ ಪ್ರಮಾಣ ಪ್ರಕ್ರಿಯೆ – ಶಾಖಪ್ರಮಾಣದಲ್ಲಿ ಯಾವುದೇ ಬದಲಾವಣೆ ಇಲ್ಲದೆ ನಡೆಯುವ ಪ್ರಕ್ರಿಯೆ, ಅಂದರೆ, ಇದರಲ್ಲಿನ ಒಟ್ಟು ಉಷ್ಣ ಶಕ್ತಿಯು ಸ್ಥಿರವಾಗಿಯೇ ಉಳಿಯುತ್ತದೆ.
ಇರ್ರಿವರ್ಸೆಬಲ್ ಪ್ರೋಸೆಸ್ – ಹಿಮ್ಮರಳಿಸಲಾಗದ ಪ್ರಕ್ರಿಯೆ – ಕ್ರಿಯೆ ನಡೆಯುವಾಗ ಯಾವ ಹಂತಗಳ ಸರಣಿ ಜಾರಿಯಾಗಿತ್ತೋ ಅದೇ ಸರಣಿಯಲ್ಲಿ ತನ್ನ ಮೂಲಸ್ಥಿತಿಗೆ ಮರಳಲಾಗದ ಪ್ರಕ್ರಿಯೆ. ಎಲ್ಲ ನಿಜ ಕ್ರಿಯೆಗಳೂ ತಮ್ಮ ಗುಣಸ್ವಭಾವದಲ್ಲಿ ಮರಳಿಸಲಾಗದ ಪ್ರಕ್ರಿಯೆಗಳೇ ಆಗಿರುತ್ತವೆ.
ಅಯಾನೋಸ್ಫಿಯರ್ – ವಿದ್ಯುದಣು ಮಂಡಲ – ಭೂಮಿಯ ಹವಾಮಾನದ ಎತ್ತರದ ಮಟ್ಟಗಳಲ್ಲಿ ರೇಡಿಯೋ ಅಲೆಗಳನ್ನು ( ಒಂದು ರೀತಿಯ ವಿದ್ಯುತ್ಕಾಂತೀಯ ಅಲೆಗಳಿವು) ಪ್ರತಿಫಲಿಸುವ ಹಾಗೂ ತನ್ಮೂಲಕ ರೇಡಿಯೋ ಪ್ರಸಾರವನ್ನು ಸಾಧ್ಯ ಮಾಡುವ ಪ್ರದೇಶ.
ಅಯಾನೈಸಿಂಗ್ ರೇಡಿಯೇಷನ್ – ವಿದ್ಯುದಣು ನಿರ್ಮಾಣ ವಿಕಿರಣ – ಒಂದು ವ್ಯವಸ್ಥೆಯಲ್ಲಿ ವಿದ್ಯುದಣು ನಿರ್ಮಾಣ ಮಾಡಲು ಬೇಕಾದಷ್ಟು ಶಕ್ತಿಯನ್ನು ಹೊಂದಿರುವಂತಹ ವಿಕಿರಣ.
ಅಯೊನೈಸೇಷನ್ ಗಾಜ್ – ವಿದ್ಯುದಣು ನಿರ್ಮಾಣ ಅಳತೆ ಉಪಕರಣ – ಒಂದು ನಿರ್ವಾತ ಅಳತೆ ಉಪಕರಣವಿದು. ಇದರಲ್ಲಿನ ಅನಿಲದ ಒತ್ತಡವನ್ನು ಅದರ ವಿದ್ಯುದಣು ನಿರ್ಮಾಣದ ಮಟ್ಟದಿಂದ ಅಳೆಯಲಾಗುತ್ತದೆ.
ಅಯೊನೈಸೇಷನ್ ಎನರ್ಜಿ- ವಿದ್ಯುದಣು ನಿರ್ಮಾಣ ಶಕ್ತಿ – ಒಂದು ತಟಸ್ಥ ಅನಿಲದ ಅಣುವಿನಿಂದ ಎಲೆಕ್ಟ್ರಾನೊಂದನ್ಬು ಹೊರತೆಗೆಯಲು ಬೇಕಾದ ಶಕ್ತಿ.
ಅಯಾನ್ ಇರ್ರೇಡಿಯೇಷನ್ – ವಿದ್ಯುದಣು ವಿಕಿರಣೀಕರಣ – ತುಂಬ ಶಕ್ತಿಯುತವಾದ ವಿದ್ಯುದಣುಗಳ ಮಳೆಯನ್ನು ಒಂದು ವಸ್ತುವಿನ ಮೇಲೆ ಸುರಿಸುವುದು.
ಅಯಾನ್ ಇಂಜಿನ್ – ವಿದ್ಯುದಣು ಚಾಲಕ ಯಂತ್ರ – ವಿದ್ಯುದಣುಗಳ ಪುಂಜವನ್ಬು ಬಳಸಿಕೊಂಡು ಬಾಹ್ಯಾಕಾಶ ನೌಕೆಗಳನ್ನು ಮೇಲಕ್ಕೆ ಚಿಮ್ಮಿಸುವ ಒಂದು ಚಾಲಕ ಯಂತ್ರ( ಇಂಜಿನ್).
ಅಯಾನ್ ಡೆನ್ಸಿಟಿ – ವಿದ್ಯುದಣು ಸಾಂದ್ರತೆ – ಒಂದು ಘಟಕ ಅಳತೆಯ ಪರಿಮಾಣದಲ್ಲಿ ಲಭ್ಯವಿರುವಂತಹ ವಿದ್ಯುದಣುಗಳ ಅಥವಾ ಅಯಾನುಗಳ ಸಾಂದ್ರತೆ. ಇದನ್ನು ಸಾಮಾನ್ಯವಾಗಿ ವಿದ್ಯುದಣು ಸಾರತೆ ಎನ್ನುತ್ತಾರೆ.
ಅಯಾನೈಸೇಷನ್ ಚೇಂಬರ್ – ವಿದ್ಯುದಣು ನಿರ್ಮಾಣ ಕೊಠಡಿ – ವಿದ್ಯುದಣು ನಿರ್ಮಿಸುವ ವಿಕಿರಣವನ್ನು ಪತ್ತೆ ಹಚ್ಚಲು ಅಥವಾ ಅದನ್ನು ಅಳೆಯಲು ಬಳಸುವಂತಹ ಕೊಠಡಿ ಅಥವಾ ಗೂಡು.
Like us!
Follow us!