ಕನ್ನಡ ಕನ್ನಡಿ

ವಾರಕ್ಕೆ ಐದು ಪದಗಳಂತೆ, ತಾಂತ್ರಿಕ/ವೈಜ್ಞಾನಿಕ ಕ್ಷೇತ್ರದ ಪದಗಳಿಗೆ ಕನ್ನಡ ಸಂವಾದಿ ಪದಗಳ ಪರಿಚಯ ಮಾಡುವ ಅಂಕಣವಿದು. ಕನ್ನಡದಲ್ಲಿ ಹೊಸ ಜ್ಞಾನ ನಿರ್ಮಾಣ ಆಗಬೇಕೆಂದರೆ ಅದರ ಪದಕೋಶವು ವಿಸ್ತಾರಗೊಳ್ಳಬೇಕು. ಈ ದಿಸೆಯಲಿನ್ಲ ಕಿರುಪ್ರಯತ್ನವೇ ಈ ಅಂಕಣ.

Intermolecular forces

ಇಂಟರ್ ಮಾಲಿಕ್ಯುಲಾರ್ ಫೋರ್ಸಸ್ – ಅಂತರ್ ಅಣುವಿಕ ಬಲಗಳು – ಅಣುಗಳು ಮತ್ರು ಪರಮಾಣುಗಳ ನಡುವಿನ ಬಲಗಳು. ಇವು ಆಕರ್ಷಣೆಯ ಬಲಗಳಾಗಿರುತ್ತವೆ.

Internal combustion engine

ಇಂಟರ್ನಲ್ ಕಂಬಶ್ಚನ್ ಇಂಜಿನ್ – ಆಂತರಿಕ ದಹನ ಯಂತ್ರ – ಉಗಿ ಯಂತ್ರಗಳಲ್ಲಿರುವಂತೆ ಪ್ರತ್ಯೇಕ ಕುಲುಮೆಯಿಲ್ಲದೆ, ಇಂಧನವನ್ನು ತನ್ನಲ್ಲಿಯೇ ಇರುವ ದಹನ ಘಟಕಗಳಲ್ಲಿ ಉರಿಸುವಂತಹ ಒಂದು‌ ತಾಪಯಂತ್ರ.

Internal energy : symbol : U 

ಇಂಟರ್ನಲ್ ಎನರ್ಜಿ : ಸಿಂಬಲ್ U – ಆಂತರಿಕ ಶಕ್ತಿ (ಸಂಕೇತ U) – ಒಂದು  ವ್ಯವಸ್ಥೆಯಲ್ಲಿನ ಅಣುಗಳು ಹಾಗೂ ಪರಮಾಣುಗಳ ಚಲನಾ ಶಕ್ತಿ ಮತ್ತು ಅಂತಃಶಕ್ತಿಗಳ ಒಟ್ಟು ಮೊತ್ತ.

Internal resistance

ಇಂಟರ್ನಲ್ ರೆಜಿಸ್ಟೆನ್ಸ್ – ಆಂತರಿಕ ಪ್ರತಿರೋಧ – ವಿದ್ಯುಚ್ಛಕ್ತಿಯ ಆಕರವೊಂದರಲ್ಲಿರುವ ಪ್ರತಿರೋಧ.

International date line

ಇಂಟರ್ನ್ಯಾಷನಲ್ ಡೇಟ್ ಲೈನ್ – ಅಂತಾರಾಷ್ಟ್ರೀಯ ದಿನಾಂಕ ರೇಖೆ – ಉತ್ತರ ಮತ್ತು ದಕ್ಷಿಣ ಧ್ರುವಗಳನ್ನು ಸೇರಿಸುವ ಒಂದು ಕಲ್ಪಿತ ರೇಖೆ. ಇದು ಪೆಸಿಫಿಕ್‌ ಸಾಗರದ ಮೂಲಕ ಚಲಿಸುತ್ತಾ 180 ಡಿಗ್ರಿ ಅಕ್ಷಾಂಶವನ್ನು ಅನುಸರಿಸುತ್ತದೆ. ಒಂದು ದಿನದ ಪ್ರಾರಂಭ ಮತ್ತು ಕೊನೆಯನ್ನು ಗುರುತಿಸಲು ಈ‌ ರೇಖೆಯನ್ನು ಇಟ್ಟುಕೊಳ್ಳಬಹುದೆಂದು ಅಂತಾರಾಷ್ಟ್ರೀಯವಾಗಿ ಅಂಗೀಕರಿಸಲಾಗಿದೆ.

Page 7 of 7

Kannada Sethu. All rights reserved.