ಕನ್ನಡ ಕನ್ನಡಿ

ವಾರಕ್ಕೆ ಐದು ಪದಗಳಂತೆ, ತಾಂತ್ರಿಕ/ವೈಜ್ಞಾನಿಕ ಕ್ಷೇತ್ರದ ಪದಗಳಿಗೆ ಕನ್ನಡ ಸಂವಾದಿ ಪದಗಳ ಪರಿಚಯ ಮಾಡುವ ಅಂಕಣವಿದು. ಕನ್ನಡದಲ್ಲಿ ಹೊಸ ಜ್ಞಾನ ನಿರ್ಮಾಣ ಆಗಬೇಕೆಂದರೆ ಅದರ ಪದಕೋಶವು ವಿಸ್ತಾರಗೊಳ್ಳಬೇಕು. ಈ ದಿಸೆಯಲಿನ್ಲ ಕಿರುಪ್ರಯತ್ನವೇ ಈ ಅಂಕಣ.

Hydrogen electrode

ಹೈಡ್ರೋಜನ್ ಎಲೆಕ್ಟ್ರೋಡ್ – ಜಲಜನಕದ ವಿದ್ಯುದ್ವಾರ – ವಿದ್ಯುದ್ವಾರ ಸಾಮರ್ಥ್ಯವು ಸೊನ್ನೆಯಾಗಿರುವಂತೆ ಇರಿಸಿದ, ಜಲಜನಕವನ್ನು ಆಧರಿಸಿದ ಒಂದು ವಿದ್ಯುದ್ವಾರ. ಹೀಗಾಗಿ ಬೇರೆ ಮೂಲವಸ್ತುಗಳನ್ನು ಇದರೊಂದಿಗೆ ಹೋಲಿಸಬಹುದಾಗಿರುತ್ತದೆ.

Hydrogen ion

ಹೈಡ್ರೋಜನ್ ಅಯಾನ್ – ಜಲಜನಕದ ವಿದ್ಯುದಣು – ಧನ ವಿದ್ಯುದಂಶವುಳ್ಳ ಜಲಜನಕದ ಪರಮಾಣು ಅಂದರೆ ಪ್ರೋಟಾನು.

Hydrology

ಹೈಡ್ರಾಲಜಿ‌ – ಜಲವಿಜ್ಞಾನ – ವಾತಾವರಣದ ವಾಯುಮಂಡಲ‌ ಹಾಗೂ ಜಲಮಂಡಲಗಳಲ್ಲಿ ನೀರು ಸಿಗುವಂತಹ ಸ್ಥಳಗಳು ಮತ್ತು ಇವಕ್ಕೆ ಸಂಬಂಧಿಸಿದ ಗುಣಲಕ್ಷಣಗಳ ಅಧ್ಯಯನ.

Hydromagnetics

ಹೈಡ್ರೋಮ್ಯಾಗ್ನೆಟಿಕ್ಸ್ – ಜಲಕಾಂತತ್ವ – ವಾಹಕವಾಗಿರುವ ಒಂದು ದ್ರಾವಣವನ್ನು ಏಕಕಾಲದಲ್ಲಿ ವಿದ್ಯುತ್ ಕಾಂತೀಯತೆ ಮತ್ತು ಜಲಚಲನಾ ನಿಯಮಗಳಡಿಯಲ್ಲಿ ಬರುವಂತೆ ಮಾಡಿದಾಗ ಅದರ ಅಧ್ಯಯನ ಮಾಡುವುದು. ಇದನ್ನು ಕಾಂತೀಯ ಜಲಚಲನಾ ಶಾಸ್ತ್ರ ( MHD – Magneto hydrodynamics) ಎಂದೂ ಕರೆಯುತ್ತಾರೆ.

Hydrometer

ಹೈಡ್ರೋಮೀಟರ್ – ಜಲಸಾಂದ್ರತಾ ಮಾಪಕ – ದ್ರವಗಳ ಸಾಂದ್ರತೆಯನ್ನು ಅಥವಾ ಸಾಪೇಕ್ಷ  (ತುಲನೀಯ) ಸಾಂದ್ರತೆಯನ್ನು ಅಳೆಯಲು ಬಳಸುವ ಉಪಕರಣ.

Hydrostatics

ಹೈಡ್ರೋಸ್ಟ್ಯಾಟಿಕ್ಸ್ – ವಿಶ್ರಾಂತ ದ್ರವಸ್ಥಿತಿ ವಿಜ್ಞಾನ – ವಿಶ್ರಾಂತಸ್ಥಿತಿಯಲ್ಲಿರುವ ದ್ರವಗಳ ಮುಖ್ಯವಾಗಿ ಕೆರೆಗಳು, ಅಣೆಕಟ್ಟುಗಳು, ದ್ರವತಡೆಗೋಡೆಗಳು‌ ಮತ್ತು ಜಲ ಒತ್ತು ಯಂತ್ರಗಳಲ್ಲಿನ ದ್ರವಗಳ ಅಧ್ಯಯನ.

Hygrometer

ಹೈಗ್ರೋಮೀಟರ್ – ತೇವಾಂಶ ಮಾಪಕ –  ವಾತಾವರಣದಲ್ಲಿರುವ ತೇವಾಂಶವನ್ನು ಅಳೆಯುವಂತಹ ಉಪಕರಣ. ಇದರಲ್ಲಿ ವಿವಿಧ ಬಗೆಗಳಿವೆ. ಯಾಂತ್ರಿಕ, ವಿದ್ಯುತ್ ಬಳಕೆಯ, ಇಬ್ಬನಿ ಬಳಕೆಯ, ತೇವ ಮತ್ತು ಒಣ ಬುರುಡೆಯ …ಹೀಗೆ.

Hygroscope

ಹೈಗ್ರೋಸ್ಕೋಪ್ – ತೇವಾಂಶ ದರ್ಶಕ – ವಾಯುವಿನಲ್ಲಿನ ಸಾಪೇಕ್ಷ ( ತುಲನೀಯ) ತೇವಾಂಶವನ್ನು ಸೂಚಿಸುವ ಉಪಕರಣ. ಇದರಲ್ಲಿ ಸಾಮಾನ್ಯವಾಗಿ ತೇವಾಂಶದ ಉಪಸ್ಥಿತಿಯಲ್ಲಿ ತನ್ನ ಬಣ್ಣವನ್ನು ಬದಲಾಯಿಸುವ ವಸ್ತುವನ್ನು ಬಳಸುತ್ತಾರೆ.

Hyper

ಹೈಪರ್ – ಅತಿ, ಎತ್ತರದ, ಹೆಚ್ಚಿನ, ಅತೀತ – ಅತಿ, ಎತ್ತರದ, ಹೆಚ್ಚಿನ – ಈ ಅರ್ಥವುಳ್ಳ ಇಂಗ್ಲಿಷ್ ಪೂರ್ವಪದ ಇದು. ಉದಾಹರಣೆಗೆ, hypersonic ಅಂದರೆ ಅತಿಶಬ್ದದ, ಶಬ್ದಾತೀತ.

Hyper metropia ( hyperopia)

ಹೈಪರ್ ಮೆಟ್ರೋಪಿಯಾ (ಹೈಪರೋಪಿಯಾ) – ದೂರದೃಷ್ಟಿ ದೋಷ – ಒಂದು ದೃಷ್ಟಿದೋಷ. ಇದರಲ್ಲಿ ಅಕ್ಷಿಪಟಲದ ಮೇಲೆ ಹತ್ತಿರದ ವಸ್ತುಗಳ  ಬಿಂಬವು ಸರಿಯಗಿ ಬೀಳದಿರುವುದರಿಂದ ಅವು ಸರಿಯಾಗಿ ಕಾಣುವುದಿಲ್ಲ. ಉಬ್ಬುಮಸೂರ ( ಕಾನ್ವೆಕ್ಸ್ ಲೆನ್ಸ್) ಇರುವ ಕನ್ನಡಕವನ್ನು ಹಾಕಿಕೊಂಡು ಈ  ದೋಷವನ್ನು ಸರಿಪಡಿಸಬೇಕು.

Page 8 of 9

Kannada Sethu. All rights reserved.