ಕನ್ನಡ ಕನ್ನಡಿ

ವಾರಕ್ಕೆ ಐದು ಪದಗಳಂತೆ, ತಾಂತ್ರಿಕ/ವೈಜ್ಞಾನಿಕ ಕ್ಷೇತ್ರದ ಪದಗಳಿಗೆ ಕನ್ನಡ ಸಂವಾದಿ ಪದಗಳ ಪರಿಚಯ ಮಾಡುವ ಅಂಕಣವಿದು. ಕನ್ನಡದಲ್ಲಿ ಹೊಸ ಜ್ಞಾನ ನಿರ್ಮಾಣ ಆಗಬೇಕೆಂದರೆ ಅದರ ಪದಕೋಶವು ವಿಸ್ತಾರಗೊಳ್ಳಬೇಕು. ಈ ದಿಸೆಯಲಿನ್ಲ ಕಿರುಪ್ರಯತ್ನವೇ ಈ ಅಂಕಣ.

Hyperbola

ಹೈಪರ್ ಬೋಲಾ – ಅತಿ ಪರವಲಯ – ತನ್ನ ವಿಕೇಂದ್ರಿಕತೆಯು ( eccentricity) ಒಂದಕ್ಕಿಂತ ಹೆಚ್ಚು ಇರುವಂತಹ ಶಂಕು.

Hyperbolic functions

ಹೈಪರ್ ಬಾಲಿಕ್ ಫಂಕ್ಷನ್ಸ್ – ಪರವಲಯಿತ ಗಣಿತವಾಕ್ಯಗಳು – Sin h, cos h ಮತ್ತು tan h – ಇವನ್ನೊಳಗೊಂಡ ಗಣಿತವಾಕ್ಯಗಳ ಕಟ್ಟು‌. ಇವು ತ್ರಿಕೋನಮಿತಿ ( ಟ್ರಿಗೋನೋಮೆಟ್ರಿ)ಯ ಗಣಿತವಾಕ್ಯಗಳಿಗೆ ಸಮನಾದ ಗುಣಲಕ್ಷಣಗಳನ್ನೇ ಹೊಂದಿರುತ್ತವೆ.

Hypercharge

ಹೈಪರ್ ಛಾರ್ಜ್ – ಅತಿ ವಿದ್ಯುದಂಶ – ಬೇರಿಯಾನ್ಸ್ ಎಂಬ ಅಂತರ್ ಪರಮಾಣು ಅಂದರೆ ಪರಮಾಣುವಿನ ಒಳಗಿರುವ ಕಣಗಳ ಒಂದು ಗುಣಲಕ್ಷಣವನ್ನು ಹೇಳಲು ಬಳಸುವ ಪದ ಇದು.  ಪರಮಾಣುಗಳ ಒಳಗೆ ಪ್ರಬಲ ಅಂತರ್ ಕ್ರಿಯೆಗಳು ಉಂಟಾಗುವ ಸಂದರ್ಭಗಳಲ್ಲಿ ಕೆಲವು ಸಲ ನಿರೀಕ್ಷಿತ ಒಡೆಯುವಿಕೆಗಳು ನಡೆಯದೆ ವಿಚಿತ್ರ ಪರಿಸ್ಥಿತಿ ನಿರ್ಮಾಣ ಆದಾಗ, ಅದನ್ನು ವಿವರಿಸಲು ಬಳಸುವ ಒಂದು ಪರಿಮಾಣಾತ್ಮಕ ( ಕ್ವಾಂಟೈಜ್ಡ್) ಗುಣಲಕ್ಷಣ. ಅತಿ ವಿದ್ಯುದಂಶವು ದುರ್ಬಲ ಅಂತರ್ ಕ್ರಿಯೆಗಳಲ್ಲಿ ವಿನಿಮಯಗೊಳ್ಳುವುದಿಲ್ಲ.

Hyperfine structure

ಹೈಪರ್  ಫೈನ್ ಸ್ಟ್ರಕ್ಚರ್ – ಅತಿ ಸೂಕ್ಷ್ಮ ರಚನೆ – ವರ್ಣಪಟಲದ ಗೆರೆ ಅಥವಾ ಪಟ್ಟಿಯಲ್ಲಿ,  ಪರಮಾಣುವಿನ ಶಕ್ತಿಮಟ್ಟವನ್ನು ಪರಮಾಣು ಬೀಜಕೇಂದ್ರವು ಪರಿಣಮಿಸಿದಾಗ ಉಂಟಾಗುವ ತುಂಬ ಸೂಕ್ಷ್ಮವಾದ ಗೆರೆಗಳು.

Hyperon

ಹೈಪರಾನ್ – ಹೈಪರಾನು – ತುಂಬ ಕಡಿಮೆ ಹೊತ್ತು ಅಸ್ತಿತ್ವದಲ್ಲಿರುವ ಒಂದು ಮೂಲಭೂತ ಕಣ. ಇದು ಬೇರ್ಯಾನುಗಳ ಪಟ್ಟಿಗೆ ಸೇರುತ್ತದೆ ಮತ್ತು ಸೊನ್ನೆಯಲ್ಲದ ವಿಲಕ್ಷಣತೆ (strangeness)ಯನ್ನು ಹೊಂದಿರುತ್ತದೆ.

Hypersonic

 ಹೈಪರ್ಸಾನಿಕ್ – ಶಬ್ದಾತೀತ – ಶಬ್ದಾತೀತ ಪ್ರವಾಹಗಳಿಗೆ ಸಂಬಂಧ ಪಟ್ಟದ್ದು. ಮಾಚ್ ( ದ್ರವಗಳ ವೇಗಕ್ಕೆ ಸಂಬಂಧಪಟ್ಟ ಒಂದು ಸಂಖ್ಯೆ) 5 ಅಥವಾ ಅದಕ್ಕಿಂತ ಹೆಚ್ಚಿನ ವೇಗಗಳಿಗೆ ಸಂಬಂಧಿಸಿರುತ್ತೆ.

Hypsometer

ಹಿಪ್ಸೋಮೀಟರ್ – ಕುದಿಬಿಂದು ಮಾಪಕ – ಒಂದು ದ್ರವದ ಕುದಿಬಿಂದುವನ್ನು ಅಳೆಯಲು ಬಳಸುವ ಉಪಕರಣ. ಆವಿಯ ಉಷ್ಣತೆಯಲ್ಲಿ ಉಷ್ಣಮಾಪಕಗಳ ಮೇಲೆ ಗುರುತುಗಳನ್ನು ಮಾಡಲು ಸಹ ಇದನ್ನು ಬಳಸುತ್ತಾರೆ.

Hysteresis

ಹಿಸ್ಟಿರಿಸಿಸ್ – ಉಳಿಕೆ ಪರಿಣಾಮ ( ವಿಲಂಬನ) – ಯಾವುದಾದರೊಂದು ಪರಿಣಾಮವುಂಟಾದಾಗ ಅದು ಮುಗಿದ ನಂತರವೂ ಉಳಿಯುವ ‘ಉಳಿಕೆ ವಿಷಯ’. ಉದಾಹರಣೆಗೆ, ಪ್ರಬಲ ಕಾಂತ ವಸ್ತುಗಳನ್ನು ಕಾಂತಗೊಳಿಸಿಯಾದ ಮೇಲೆ, ಆ ಕಾಂತತ್ವವನ್ನು ತೆಗೆದ ಮೇಲೂ ಅವುಗಳಲ್ಲಿ ಸ್ವಲ್ಪ ಕಾಂತೀಯತೆ ಉಳಿದಿರುತ್ತದೆ. ಇದನ್ನು ಉಳಿಕೆ ಪರಿಣಾಮ ಎನ್ನುತ್ತಾರೆ. 

Hysteresis loop

ಹಿಸ್ಟಿರಿಸಿಸ್ ಲೂಪ್ – ಉಳಿಕೆ ಪರಿಣಾಮ ( ವಿಲಂಬನ) ಸುತ್ತು – ಪ್ರಾರಂಭದಲ್ಲಿ ನಿಷ್ಕಾಂತಗೊಳಿಸಿದ ಪ್ರಬಲ ಕಾಂತವಸ್ತುವೊಂದನ್ನು ಕಾಂತಕ್ಷೇತ್ರ ವ್ಯತ್ಯಾಸಗಳ ಆವರ್ತನಗಳಿಗೆ ಒಳಪಡಿಸಿದಾಗ ಉಂಟಾಗುವ ಒಂದು‌ ಕಾಂತಮಂಡಲ.

Hysteresis loss

ಹಿಸ್ಟಿರಿಸಿಸ್ ಲಾಸ್ – ವಿಲಂಬನ ನಷ್ಟ – ವಿಲಂಬನ ಪರೊಣಾಮದಿಂದಾಗಿ ಉಂಟಾಗುವ ಶಕ್ತಿನಷ್ಟ.

Page 9 of 9

Kannada Sethu. All rights reserved.