ಉತ್ತಮ ಹಾಗೂ ಅಭಿರುಚಿಯುತ ಜೀವನದ ಬಗ್ಗೆ ಹೇಳುವ ಗಾದೆಮಾತು ಇದು‌. ಸ್ವಲ್ಪವೇ ತಿಂದರೂ ರಸಮಯವಾದದ್ದನ್ನು ತಿನ್ನಬೇಕು. ಏನೇನೋ ನೀರಸವಾದದ್ದನ್ನು ಅತಿಯಗಿ ತಿನ್ನಬಾರದು‌.‌ ಊಟ ಮಾಡುವಾಗ ಪ್ರಮಾಣಕ್ಕಿಂತ ರುಚಿ, ಸ್ವಾರಸ್ಯ, ಸವಿಯುವಿಕೆ ಮುಖ್ಯ ಎಂಬುದನ್ನು ಅಡಕವಾಗಿ, ಪ್ರಾಸಬದ್ಧವಾಗಿ ಹೇಳುತ್ತದಲ್ಲವೆ ಈ ಗಾದೆಮಾತು? ಪ್ರಾನ್ಸ್ ದೇಶದಲ್ಲಿ ಹೀಗೆ ರುಚಿಕರವಾದ, ಒಳ್ಳೆಯ ಊಟವನ್ನು ಪುಟ್ಟ ಪುಟ್ಟ ಭಾಗಗಳಲ್ಲಿ ಬಡಿಸ್ತಾರಂತೆ. ಈ ರೀತಿಯಲ್ಲಿ ತಿನ್ನುವುದನ್ನು ‘ಫ್ರೆಂಚ್ ಪೋರ್ಷನ್’ ಎನ್ನುತ್ತಾರೆ. ಒಟ್ಟಿನಲ್ಲಿ ನಮ್ಮ ಗಾದೆ ಮಾತೊಂದು ಫ್ರಾನ್ಸ್ ದೇಶವನ್ನು ನೆನಪಿಸಿತು ನೋಡಿ!

Kannada proverb – Thusa thindruu rasa thinnabeku ( Even if you eat less, it should be juicy, i.e. very tasty).

This wise proverb insists on quality over quantity while eating. It is better to eat small, tasty food portions rather than mindlessly eating too much food. If we follow this advice both our health and lifestyle will definitely improve. I am reminded of the French way of serving – ‘French portion’ ; Serving good food in small quantities rather than serving it in a big, chaotic spread. Both the proverb and the French  habit say the same thing which is useful to us. Isn’t it?