Magnifying glass

ಮ್ಯಾಗ್ನಿಫೈಯಿಂಗ್ ಗ್ಲಾಸ್ – ವರ್ಧನಾ ಮಸೂರ – ಒಂದು ಉಬ್ಬು ಮಸೂರ. ಇದನ್ನು ಸೂಕ್ಷ್ಮದರ್ಶಕದಲ್ಲಿ‌ ಬಳಸುತ್ತಾರೆ.

Magnification

ಮ್ಯಾಗ್ನಿಫಿಕೇಷನ್ – (ಬಿಂಬ) ವರ್ಧನ – ಒಂದು ಮಸೂರ, ಕನ್ನಡಿ ಅಥವಾ  ಯಾವುದೇ ಉಪಕರಣವು ಒಂದು ವಸ್ತುವಿನ ಬಿಂಬವನ್ನು ವರ್ಧಿಸುವ ಅಳತೆ/ ಪ್ರಕ್ರಿಯೆ ಇದು.

Magnetron

ಮ್ಯಾಗ್ನೆಟ್ರಾನ್ – ಕಾಂತೀಯ ಕಣವೇಗವರ್ಧಕ – ಇದೊಂದು ನಿರ್ವಾತ ಕೊಳವೆ ; ಇದರಲ್ಲಿ ಅಪೇಕ್ಷಿತ ವಿದ್ಯುತ್ ಕಾಂತೀಯ ಅಲೆಗಳನ್ನು ( ಆವರ್ತನಗತಿಗಳನ್ನು) ಪಡೆಯಲು, ಎಲೆಕ್ಟ್ರಾನುಗಳ ಪ್ರವಾಹವನ್ನು ಆನ್ವಯಿಕ ಕಾಂತಕ್ಷೇತ್ರದಿಂದ ನಿರ್ಬಂಧಿಸಲಾಗುತ್ತದೆ.

Magnetosphere

ಮ್ಯಾಗ್ನೆಟೋಸ್ಫಿಯರ್ – ಕಾಂತಗೋಳ ಅಥವಾ ಕಾಂತಮಂಡಲ – ಇದು ಭೂಮಿ ಮತ್ತು ಅದರಂತಹ ಇತರ ಕಾಂತಗುಣೀ ಗ್ರಹಗಳನ್ನು ಸುತ್ತುವರಿದಿರುವ ಧೂಮಕೇತು ಆಕಾರದ ಪ್ರದೇಶ. ಇದರಲ್ಲಿನ ಸೌರವ್ಯೂಹ ಸಂಬಂಧೀ ವಿದ್ಯುದಂಶಗಳನ್ನು ಸೂರ್ಯನ ಕಾಂತಕ್ಷೇತ್ರವು ನಿಯಂತ್ರಿಸುವುದಕ್ಕಿಂತ ಹೆಚ್ಚಾಗಿ ಆ ಗ್ರಹದ ಕಾಂತಕ್ಷೇತ್ರವೇ ನಿಯಂತ್ರಿಸುತ್ತದೆ.

Magneto resistance effect

ಮ್ಯಾಗ್ನೆಟೋ ರೆಸಿಸ್ಟೆನ್ಸ್ ಎಫೆಕ್ಟ್ – ಕಾಂತೀಯ ನಿರೋಧಕ ಪರಿಣಾಮ – ಬಾಹ್ಯ ಕಾಂತಕ್ಷೇತ್ರವು ಬದಲಾದಾಗ ಪ್ರಯೋಗಕ್ಕೆ ಆಯ್ದ ವಸ್ತುವಿನ‌ ವಿದ್ಯುತ್ ನಿರೋಧಕತೆಯಲ್ಲಿ ಉಂಟಾಗುವಂತಹ ಬದಲಾವಣೆ‌.

ಕನ್ನಡ ಗಾದೆಮಾತು – ಮಾತಿನ ಮಲ್ಲ, ಕೆಲಸಕ್ಕೆ ಒಲ್ಲ.

ಕೆಲವು ಜನ ಹೇಗಿರುತ್ತಾರೆಂದರೆ ಸದಾ ಕಾಲ ಮಾತು ಮಾತು ಮಾತು. ಕೆಲಸ ಮಾಡುವ ಬಗ್ಗೆ  ಮಾತಾಡುತ್ತಾರೆಯೇ ಹೊರತು ಕೆಲಸ ಮಾತ್ರ ಯಾವತ್ತೂ ಮಾಡುವುದಿಲ್ಲ. ಇಂತಹವರಿಂದ ಯಾರಿಗೂ ಯಾವ ಪ್ರಯೋಜನವೂ ಇಲ್ಲ.‌ ಸರ್ವಜ್ಞ ಕವಿ ಕೂಡ ಹೀಗೆ ಮಾತಾಡಿ- ಮಾತಾಡಿಯೇ ಹೊತ್ತು ಕಳೆದು, ಕೆಲಸವೇ ಮಾಡದವರನ್ನು ‘ತಾನಾಡಿಯೂ ಮಾಡದವನು ಅಧಮ ತಾ ಸರ್ವಜ್ಞ’ ಎಂದಿದ್ದಾನೆ‌‌. ಮಾತಲ್ಲೇ ಮಹಲು ಕಟ್ಟಿ ಸಮಯ ವ್ಯರ್ಥ ಮಾಡುವವರನ್ನು ಟೀಕಿಸುವಂತಹ ಗಾದೆ ಮಾತಿದು‌.  Kannada proverb – Maathina malla, kelasakke olla ( […]

ರಾಯಚೂರಿನ ಆಡುಗನ್ನಡ ತಂದ ಪೇಚಿನ ಪ್ರಸಂಗ

ನಮ್ಮ ಕುಟುಂಬಕ್ಕೆ ವಿಶ್ವನಾಥ್ ಎಂಬ ಒಬ್ಬ ಪರಿಚಿತರಿದ್ದಾರೆ. ಈ ಹಿಂದೆ, ‘ಜಲಶಿಲಾಂತರ’ ಪದದ ಬಗ್ಗೆ ಇದೇ ಜಾಲಪುಟದಲ್ಲಿ ಕನ್ನಡ ಪ್ರಸಂಗ ಬರೆಯುವಾಗ ಅವರ ಪ್ರಸ್ತಾಪ ಮಾಡಿದ್ದೆ ನಾನು. ಪಕ್ಷಿ ಛಾಯಾಹ್ರಾಹಕರು ಮತ್ತು ವನ್ಯಪ್ರದೇಶ ಚಾರಾಣಾಸಕ್ತರು ಎಂದು  ಅವರನ್ನು ಪರಿಚಯಿಸಿದ್ದೆ‌.‌ ಅವರು ಬ್ಯಾಂಕೊಂದರಲ್ಲಿ‌ ಕೆಲಸ ಮಾಡಿ ಕೆಲವು ವರ್ಷಗಳ ಹಿಂದೆ ನಿವೃತ್ತರಾದವರು. ಒಮ್ಮೆ ವಿಶ್ವನಾಥ್ ಅವರು, ‌‌‌‍‌‌ತಾವು‍ ಹಿಂದೊಮ್ಮೆ, ವರ್ಗಾವಣೆಯ ಕಾರಣದಿಂದ ರಾಯಚೂರಿನಲ್ಲಿ ಕೆಲಸ ಮಾಡಲಾರಂಭಿಸಿದಾಗ, ತಮಗೆ ಆದ ಒಂದು ಅನುಭವವನ್ನು, ಸಮಾರಂಭಕ್ಕಾಗಿ ಸೇರಿದ್ದ ಜನರೊಡನೆ ಹಾಗೆಯೇ ಸುಮ್ಮನೆ […]

Magneto optical effects

ಮ್ಯಾಗ್ನೆಟೋ ಆಪ್ಟಿಕಲ್ ಎಫೆಕ್ಟ್ಸ್ – ಕಾಂತೀಯ ದೃಶ್ಯಬೆಳಕು ಪರಿಣಾಮಗಳು – ಬಾಹ್ಯ ಕಾಂತಕ್ಷೇತ್ರವು ಬದಲಾದಾಗ ವಸ್ತುವಿನ ದೃಶ್ಯಬೆಳಕು ವರ್ತನೆಗಳಲ್ಲಿ ಆಗುವ ಪರಿಣಾಮಗಳು‌, ಉದಾಹರಣೆಗೆ, ಫ್ಯಾರಡೇ ಪರಿಣಾಮ ಹಾಗೂ ಕೆನ್ ಪರಿಣಾಮ.

Magneton

ಮ್ಯಾಗ್ನೆಟಾನ್ – ಮ್ಯಾಗ್ನೆಟಾನ್  – ಬೀಜಕೇಂದ್ರೀಯ ಪರಮಾಣು ಅಥವಾ ಅಣು ಅಯಸ್ಕಾಂತದ ಕಾಂತೀಯ ತಿರುಗುಬಲವನ್ನು ಅಳೆಯಲು ಬಳಸುವ ಒಂದು ಮೂಲಮಾನ.

Magneto motive force ( magnetic potential)

ಮ್ಯಾಗ್ನೆಟೋ ಮೋಟಿವ್ ಫೋರ್ಸ್ ( ಮ್ಯಾಗ್ನೆಟಿಕ್ ಪೊಟೆನ್ಶಿಯಲ್ ) – ಕಾಂತೀಯ ಚಾಲಕ ಬಲ( ಕಾಂತೀಯ ಅಂತಃ ಸಾಮರ್ಥ್ಯ) – ವಿದ್ಯುನ್ಮಂಡಲದಲ್ಲಿ ವಿದ್ಯುತ್ ಚಾಲಕ ಬಲವಿದ್ದಂತೆ ಕಾಂತೀಯ ಮಂಡಲದಲ್ಲಿ ಕಾಂತೀಯ ಚಾಲಕ ಬಲ. ಇದು ಒಂದು ಪೂರ್ಣಪಥದಲ್ಲಿನ‌ ಕಾಂತಕ್ಷೇತ್ರದಲ್ಲಿನ  ಒಂದು ಗಣಿತೀಯ ಗುಣಕ ( ಇಂಟೆಗ್ರಲ್). ಇದರ ಮೂಲಮಾನ‌ ಆಂಪಿಯರ್ ಟರ್ನ್.

Page 1 of 4

Kannada Sethu. All rights reserved.