ನೈಜ ಜೀವನಾನುಭವದಿಂದ ಮೂಡಿ ಬಂದಿರುವ ಗಾದೆಮಾತು ಇದು. ಮನೆಯಲ್ಲಿ, ಹಬ್ಬ – ಹರಿದಿನಗಳಲ್ಲಿ ಅಥವಾ ಮದುವೆ – ಮುಂಜಿಗಳಲ್ಲಿ, ಅಡಿಗೆ ಆದ ತಕ್ಷಣ ಅಂದರೆ ಮೊದಲ ಪಂಕ್ತಿಯಲ್ಲೇ ಊಟ ಮಾಡಿದರೆ ಅಡಿಗೆ ಬಿಸಿಬಿಸಿಯಾಗಿ, ವಿಪುಲವಾಗಿದ್ದು ಎಲ್ಲ ಭಕ್ಷ್ಯಭೋಜ್ಯಗಳೂ ಸಾಕುಬೇಕೆಂಬಷ್ಟು ಸಿಗುತ್ತವೆ. ಅದೇ ಕೊನೆಯಲ್ಲಿ ಊಟ ಮಾಡುತ್ತೇವೆ ಎಂದರೆ ಹೋಳುಕಾಳು ಇಲ್ಲದ ಸಾಂಬಾರು, ಆರಿ ಹೋದ ಬಜ್ಜಿ- ಬೋಂಡಾ ತಿನ್ನಬೇಕಾಗಬಹುದು, ಅಥವಾ ಊಟಕ್ಕೆಂದು ಮಾಡಿದ ಪಲ್ಯವೋ, ಸಿಹಿತಿಂಡಿಗಳೋ ಮುಗಿದೇ ಹೋಗಿರಬಹುದು‌. ಹಾಗೆಯೇ ಮೊದಲು ಸ್ನಾನ ಮಾಡುತ್ತೇವೆಂದರೆ (ಮುಖ್ಯವಾಗಿ ಹಳೆಕಾಲದ ಒಲೆಉರಿ ಹಾಕುವ ಬಚ್ಚಲುಮನೆಗಳಲ್ಲಿ )ನೀರು ಇನ್ನೂ ಕಾದಿಲ್ಲದೆ ಇರಬಹುದು, ಹಾಗೂ ‘ಬೇರೆಯವರು ಸ್ನಾನಕ್ಕೆ ಹೋಗಲು ಕಾಯುತ್ತಾ ಇರಬಹುದೇನೋ’ ಎಂಬ ಯೋಚನೆಯಿಂದಾಗಿ ಆರಾಮವಾಗಿ, ನಿಧಾನವಾಗಿ ಸ್ನಾನ ಮಾಡಲು ಸಾಧ್ಯ ಆಗದಿರಬಹುದು. ಆದರೆ, ಕೊನೆಯಲ್ಲಿ ಸ್ನಾನಕ್ಕೆ ಹೋಗುತ್ತೇವೆಂದಾಗ ನೀರೂ ಚೆನ್ನಾಗಿ ಕಾದಿರುತ್ತದೆ ಹಾಗೂ ಬೇರೆಯವರು ಸ್ನಾನಕ್ಕೆ ಕಾಯುತ್ತಿದ್ದಾರೆಂಬ ಚಿಂತೆಯೂ ಇರುವುದಿಲ್ಲ.

ಎಷ್ಟು ಅನುಭವಭರಿತ ಗಾದೆಮಾತಲ್ಲವೆ ಇದು!

Kannada proverb – Ootakke modalirabeku, Snaanakke konegirabeku ( Be the first one for meals and be the last one for bath).

This is a proverb which pertains to the times of village life of Kannada speaking regions. If one is  the first one or he/she is

in the first line to have meals, it is understood that he/she would get the best food which is fresh, hot and has wide variety. And if you go as the last one to take lbath, the water in the big cauldron would be quite hot because of, by now  wood fire under the cauldron would be well lit.

These things make sense. Isn’t it?