ಕೆಲವು ಸಲ ವ್ಯಕ್ತಿಯು ಅಹಂಕಾರದಿಂದಲೋ ಅಥವಾ ಕೇವಲ ಸೋಮಾರಿತನದಿಂದಲೋ ತಾನು ಮಾಡಬೇಕಾದ ಅಥವಾ ಮಾಡಬಹುದಾದ ಕೆಲಸವನ್ನು ಮಾಡುವುದಿಲ್ಲ. ಉದಾಹರಣೆಗೆ, ಮನೆಯಲ್ಲಿ ಕಸ ಬಿದ್ದಿದೆ ಎಂದಿಟ್ಟುಕೊಳ್ಳೋಣ. ಆ ಮನೆಯ ನಿವಾಸಿಗಳೆಲ್ಲರೂ ‘ನಾನೊಂದು ದೊಡ್ಡ ಜನ, ನಾನ್ಯಾಕೆ ಕಸ ತೆಗೆಯಬೇಕು? ಬೇಕಾದ್ರೆ ನೀನು ತೆಗಿ” ಎಂದು ಇನ್ನೊಬ್ಬರಿಗೆ ಹೇಳುತ್ತಿದ್ದರೆ ಆ ಕಸ ಅಲ್ಲೇ ಇರುತ್ತದೆ. ಮನೆ/ಕಛೇರಿ, ಸಂಸ್ಥೆ ಅಂದ ಮೇಲೆ ಮಾಡಲೇಬೇಕಾದ ಕೈಮೈ ಕೆಲಸಗಳು ಇದ್ದೇ ಇರುತ್ತವೆ. ಯಾರೋ ಒಬ್ಬರು ಅವನ್ನು ಮಾಡಲೇಬೇಕು. ಉದಾಹರಣೆಗೆ, ಕುದುರೆ ಸವಾರಿ ಮಾಡಿದರೆ ಸಾಲದು, ಆ ಕುದುರೆಯನ್ನು ರಾತ್ರಿ ಲಾಯದಲ್ಲಿ ಯಾರಾದರೊಬ್ಬರು ಕಟ್ಟಲೇಬೇಕು, ಅದರ ದೇಖರೇಖಿ ಮಾಡಲೇಬೇಕು. ಈ ಸಂದರ್ಭದಲ್ಲಿ ಎಲ್ಲರೂ ಯಜಮಾನಿಕೆಯ ದರ್ಪ ತೋರಿದರೆ ಕೆಲಸ ಆಗುವುದೇ ಇಲ್ಲ. ಯಾವುದೇ ಬಹುಮಾನ, ಸುಮ್ಮಾನ ಇಲ್ಲದ ದೇಖರೇಖಿಯ ಕೆಲಸಗಳನ್ನು ಮಾಡುವ ಸಂದರ್ಭದಲ್ಲಿ ಅನಗತ್ಯ ಹಮ್ಮುಬಿಮ್ಮು ಮಾಡುವವರನ್ನು ನೋಡಿ ಈ ಗಾದೆಮಾತು ಹುಟ್ಟಿರಬಹುದು ಅನ್ನಿಸುತ್ತೆ.
Kannada proverb – Naanuu yajamana, neenuu yajamana, kudure kattoryaru? (Look, I am the master , you are also the master, then who will take the horse to the stable?).
Sometimes people assume so much superiority that they consider themselves too high to do manial jobs like cleaning the floor or tying the horse in the stable. In a home or in an organization, if everyone behaves like a master i.e. who wants to give orders only and not ready to take them, then no work can be done. This proverb warns us against such a behaviour.
Like us!
Follow us!