Escape velocity

ಎಸ್ಕೇಪ್ ವೆಲಾಸಿಟಿ – ಒಂದು ಉಪಗ್ರಹ ಅಥವಾ ಚಂದ್ರದ ಮೇಲ್ಮೈ ಯ ಗುರುತ್ವಾಕರ್ಷಣೆಯಿಂದ ತಪ್ಪಿಸಿಕೊಂಡು ಹೋಗಲು‌ ಒಂದು ವಸ್ತುವು ಹೊಂದಿರಬೇಕಾದ ಕನಿಷ್ಠ ವೇಗ.

Ergometer

ಎರ್ಗೋಮೀಟರ್ – ಶಕ್ತಿಮಾಪಕ – ಯಾವುದೇ ಉಪಕರಣವು ಮಾಡಿದ ಕೆಲಸದಿಂದ ಉತ್ಪನ್ನವಾದ ಶಕ್ತಿಯನ್ನು ಅಳೆಯುವ ಉಪಕರಣ.

Eriometer

ಎರಿಯೋಮೀಟರ್ – ಕಿರು ವ್ಯಾಸಮಾಪಕ – ಬೆಳಕಿನಲೆಯ ಹಬ್ಬುವಿಕೆ

(ಡಿಫ್ರ್ಯಾಕ್ಷನ್) ಯನ್ನು ಬಳಸಿಕೊಂಡು ಅತಿ ಚಿಕ್ಕ ವ್ಯಾಸವನ್ನು ಅಳೆಯಲು ಉಪಯೋಗಿಸುವಂತಹ ಉಪಕರಣ.

Erect

ಎರೆಕ್ಟ್ – ನೆಟ್ಟಗೆ ನಿಂತ, ಸೀದಾ – ವಸ್ತು ಹೇಗೆ ನಿಂತಿದೆಯೋ ಅದೇ ರೀತಿಯಲ್ಲೇ ನಿಂತ ಬಿಂಬವನ್ನು ವರ್ಣಿಸುವ ರೀತಿ.

Equivalent focal length

ಈಕ್ವಿವೇಲೆಂಟ್ ಫೋಕಲ್ ಲೆಂಗ್ತ್ – ಸಮಸಮಾನ ಸಂಗಮ ದೂರ – ಪ್ರಧಾನ ಬಿಂದುವಿನಿಂದ ಅದರ ತತ್ಸಂಬಂಧಿತ 

(corresponding) ಪ್ರಧಾನ ಸಂಗಮ ಬಿಂದುವಿಗೆ ಇರುವಂತಹ ದೂರ‌‌.

Equivalent circuit

ಈಕ್ವಿವೇಲೆಂಟ್ ಸರ್ಕ್ಯೂಟ್ – ಸಮಸಮಾನ ವಿದ್ಯುನ್ಮಂಡಲ – ತನಗಿಂತ ಹೆಚ್ಚು ಸಂಕೀರ್ಣವಾದ ವಿದ್ಯುನ್ಮಂಡಲ ಅಥವಾ ಉಪಕರಣದ ವಿದ್ಯುತ್ತೀಯ ಗುಣಲಕ್ಷಣಗಳನ್ನೇ ಕೆಲವು ನಿರ್ದಿಷ್ಟೀಕೃತ ಸನ್ನಿವೇಶಗಳಲ್ಲಿ ಹೊಂದಿರುವ, ಆದರೆ ಹೋಲಿಕೆಯಲ್ಲಿ ಸರಳವಾಗಿರುವ ಒಂದು ವಿದ್ಯುನ್ಮಂಡಲ.

Equinox

ಈಕ್ವಿನಾಕ್ಸ್ – ಸಮಕಾಲ – ಸೂರ್ಯನು ಭೂಮಧ್ಯರೇಖೆಯನ್ನು ದಾಟುವ ಕಾಲ, ಹಗಲು ಮತ್ತು ರಾತ್ರಿಗಳು ಸಮ ಅವಧಿಯನ್ನು  ಹೊಂದಿರುವ ಕಾಲ.

Equipotential 

ಈಕ್ವಿಪೊಟೆನ್ಶಿಯಲ್ – ಸಮವಿದ್ಯುತ್ ಅಂತಃಸಾಮರ್ಥ್ಯ – ತನ್ನ ಮೇಲಿರುವ ಎಲ್ಲ ಬಿಂದುಗಳೂ ಸಮಾನ ವಿದ್ಯುತ್ ಅಂತಃಸಾಮರ್ಥ್ಯವನ್ನು ಹೊಂದಿರುವಂತೆ ವಿನ್ಯಾಸಗೊಳಿಸಿದ ಒಂದು ಮೇಲ್ಮೈ.

Equilibrium

ಈಕ್ವಿಲಿಬ್ರಿಯಂ – ಸಮತೋಲನ – ಒಂದು ವಸ್ತುವಿನ ಮೇಲೆ ವರ್ತಿಸುತ್ತಿರುವ ಬಲಗಳ ಮೊತ್ತ ಸೊನ್ನೆ ಆಗಿದ್ದಾಗ ಆ ವಸ್ತು ಸಮತೋಲನದಲ್ಲಿದೆ ಎಂದು ಹೇಳಲಾಗುತ್ತದೆ.

Equilibrant

ಈಕ್ವಿಲಿಬ್ರೆಂಟ್ – ಸಮತೋಲಕ – ಒಂದು ವಸ್ತುವಿನ ಮೇಲೆ ವರ್ತಿಸುತ್ತಿರುವ ವಿವಿಧ ಬಲಗಳ ಫಲಿತಾಂಶಬಲಕ್ಕೆ ಸಮವಾದ ಮತ್ತು ವಿರುದ್ದವಾದ ಬಲ.

Page 3 of 12

Kannada Sethu. All rights reserved.