ವಿದ್ಯುತ್ ಕ್ಷೇತ್ರ- ವಿದ್ಯುದಂಶ ಹೊಂದಿದ ಕಣವೊಂದು ಒಂದು ಬಲವನ್ನು ಅನುಭವಿಸುವಂತಹ ಒಂದು ಕ್ಷೇತ್ರ.
ಕನ್ನಡ ಕನ್ನಡಿ
ವಾರಕ್ಕೆ ಐದು ಪದಗಳಂತೆ, ತಾಂತ್ರಿಕ/ವೈಜ್ಞಾನಿಕ ಕ್ಷೇತ್ರದ ಪದಗಳಿಗೆ ಕನ್ನಡ ಸಂವಾದಿ ಪದಗಳ ಪರಿಚಯ ಮಾಡುವ ಅಂಕಣವಿದು. ಕನ್ನಡದಲ್ಲಿ ಹೊಸ ಜ್ಞಾನ ನಿರ್ಮಾಣ ಆಗಬೇಕೆಂದರೆ ಅದರ ಪದಕೋಶವು ವಿಸ್ತಾರಗೊಳ್ಳಬೇಕು. ಈ ದಿಸೆಯಲಿನ್ಲ ಕಿರುಪ್ರಯತ್ನವೇ ಈ ಅಂಕಣ.
ವಿದ್ಯುತ್ ಬಲ ರೇಖೆಗಳು – ತನಗೆ ಲಂಬವಾಗಿರುವ ಪ್ರದೇಶ ಅಥವಾ ಮೇಲ್ಮೈಗೆ ಹರಿಯುವ ವಿದ್ಯುತ್ ಕ್ಷೇತ್ರವೊಂದರ ಬಲದ ರೇಖೆಗಳ ಸಂಖ್ಯೆ.
ವಿದ್ಯುತ್ ಬಿಂಬ – ಒಂದು ವಾಹಕ ಮೇಲ್ಮೈಯಿಂದ ಒಂದಷ್ಟು ದೂರದಲ್ಲಿ ಒಂದು ವಿದ್ಯುದಂಶವನ್ನು ಇಟ್ಟಿದ್ದೇವೆ ಅಂದುಕೊಳ್ಳೋಣ. ಈ ವಿದ್ಯುದಂಶದ ಪರಿಣಾಮವು, ಅದನ್ನು ಆ ವಾಹಕದ ಹಿಂದೆ ಇಟ್ಟರೂ ಮುಂದೆ ಇಟ್ಟರೂ, ದೂರವು ಸಮನಾಗಿದ್ದಾಗ ಒಂದೇ ಆಗಿರುತ್ತದೆ, ಕನ್ನಡಿಯಲ್ಲಿನ ಬಿಂಬವೋ ಎಂಬಂತೆ. ಇದೇ ‘ವಿದ್ಯುತ್ ಬಿಂಬ’.
ವಿದ್ಯುತ್ತೀಯ ಬೆಳಕು ವ್ಯವಸ್ಥೆ- ವಿದ್ಯುತ್ತಿನಿಂದ ನೀಡಲಾದಂತಹ ಬೆಳಕಿನ ವ್ಯವಸ್ಥೆ. ಇದಕ್ಕಾಗಿ ಬಳಸುವ ಉಪಕರಣಗಳೆಂದರೆ ವಿದ್ಯುತ್ ಪ್ರಕಾಶ ದೀಪ( ಎಲೆಕ್ಟ್ರಿಕ್ ಆರ್ಕ್ ಲ್ಯಾಂಪ್), ವಿದ್ಯುತ್ ಬುರುಡೆ ದೀಪ( ಬಲ್ಬು) ಹಾಗೂ ಬೆಳಕು ಹೊರಹೊಮ್ಮಿಸುವ ( ಪ್ಲೋರೋಸೆಂಟ್ ಕೊಳವೆಗಳು).
ವಿದ್ಯುತ್ ಧ್ರುವೀಕರಣ – ಒಂದು ಪರಮಾಣುವನ್ಬು ಅಥವಾ ವಿದ್ಯುತ್ ನಿರೋಧಕ ಕ್ಷೇತ್ರವೊಂದರಲ್ಲಿಟ್ಟಾಗ ಅದರಲ್ಲಿನ ಧನ ಹಾಗೂ ವಿದ್ಯುದಂಶಗಳು ಸ್ಥಾನಪಲ್ಲಟಗೊಳ್ಳುವುದು.
ವಿದ್ಯುತ್ ಅಂತಃ ಸಾಮರ್ಥ್ಯ – ಅನಂತದಿಂದ ಒಂದು ಘಟಕ ಅಳತೆಯ ವಿದ್ಯುದಂಶವನ್ನು ಒಂದು ಬಿಂದುವಿಗೆ ತರಲಿಕ್ಕಾಗಿ ಬೇಕಾದ ಶಕ್ತಿ. ಇದರ ಮೂಲಮಾನ ವೋಲ್ಟ್ (V).
ವಿದ್ಯುತ್ ಕಿಡಿ – ಒಂದು ಅನಿಲದಲ್ಲಿ ಬೆಳಕು ಮತ್ತು ಶಬ್ಧಸಹಿತವಾಗಿ ವಿದ್ಯುತ್ ಶಕ್ತಿಯ ಹೊರಚೆಲ್ಲುವಿಕೆ.
ವಿದ್ಯುಚ್ಛಕ್ತಿ -ಒಂದು ವಿದ್ಯುತ್ ಕ್ಷೇತ್ರದಲ್ಲಿ ವಿದ್ಯುದಂಶವುಳ್ಳ ಕಣಗಳಿಗೆ ಸಂಬಂಧಿಸಿದ ಶಕ್ತಿ.
ಎಲೆಕ್ಟ್ರೋಆಪ್ಟಿಕಲ್ ಎಫೆಕ್ಟ್ – ವಿದ್ಯುತ್ ದೃಶ್ಯ ಬೆಳಕು ಪರಿಣಾಮ – ಯಾವುದಾದರೊಂದು ಪಾರದರ್ಶಕ ವಿದ್ಯುತ್ ನಿರೋಧಕ ವಸ್ತುವೊಂದನ್ನು ತುಂಬ ಬಲವತ್ತರವಾದ ವಿದ್ಯುತ್ ಕ್ಷೇತ್ರದಲ್ಲಿರಿಸಿದಾಗ ಆ ಕ್ಷೇತ್ರದ ಹಾಗೂ ಆ ವಸ್ತುವಿನ ವಕ್ರೀಭವನದ ಗುಣಲಕ್ಷಣಗಳ ನಡುವೆ ಉಂಟಾಗುವ ಅಂತರ್ ಕ್ರಿಯೆ.
ವಿದ್ಯುತ್ ರಾಸಾಯನಿಕ ಸರಣಿ – ರಾಸಾಯನಿಕ ಮೂಲವಸ್ತುಗಳನ್ನು ಅವುಗಳ ನಿಯತ ವಿದ್ಯುದ್ವಾರ ಅಂತಃ ಸಾಮರ್ಥ್ಯಕ್ಕೆ ಅನುಗುಣವಾಗಿ ಜೋಡಿಸುವುದು.