ಕನ್ನಡ ಕನ್ನಡಿ

ವಾರಕ್ಕೆ ಐದು ಪದಗಳಂತೆ, ತಾಂತ್ರಿಕ/ವೈಜ್ಞಾನಿಕ ಕ್ಷೇತ್ರದ ಪದಗಳಿಗೆ ಕನ್ನಡ ಸಂವಾದಿ ಪದಗಳ ಪರಿಚಯ ಮಾಡುವ ಅಂಕಣವಿದು. ಕನ್ನಡದಲ್ಲಿ ಹೊಸ ಜ್ಞಾನ ನಿರ್ಮಾಣ ಆಗಬೇಕೆಂದರೆ ಅದರ ಪದಕೋಶವು ವಿಸ್ತಾರಗೊಳ್ಳಬೇಕು. ಈ ದಿಸೆಯಲಿನ್ಲ ಕಿರುಪ್ರಯತ್ನವೇ ಈ ಅಂಕಣ.

Incandescence

ಇನ್ಕಾಂಡೆಸೆನ್ಸ್- ಪ್ರಜ್ವಲ ಬೆಳಕು  – ತುಂಬ ಹೆಚ್ಚು ತಾಪಮಾನ ಹೊಂದಿರುವ ಮೇಲ್ಮೈಯಿಂದ ಸೂಸುವಂತಹ ಬೆಳಕು. ನಾವು ಮನೆಗಳಲ್ಲಿ ಬಳಸುವ, ಟಂಗ್ಸ್ಟನ್ ತಂತುವನ್ನು ಹೊಂದಿರುವ ವಿದ್ಯುತ್ ದೀಪವು ಇದಕ್ಕೆ ಉದಾಹರಣೆಯಾಗಿದೆ.

Inclination ( Angle of dip)

ಇನ್ಕ್ಲಿನೇಷನ್( ಆಂಗಲ್ ಆಫ್ ಡಿಪ್) – ಇಳಿಜಾರು ( ಇಳಿಜಾರು ಕೋನ) – ಭೂಮಿಯ ಕಾಂತಕ್ಷೇತ್ರಕ್ಕೂ ಮತ್ತು ಅದರ ಮೇಲ್ಮೈಯಲ್ಲಿನ ಅಡ್ಡರೇಖೆಗೂ, ಬಿಂದುವೊಂದರಲ್ಲಿ ಉಂಟಾಗುವ ಕೋನ. ಸಮಯದೊಂದಿಗೆ ಇದು ತುಸು ಬದಲಾಗುತ್ತದೆ.

Incoherent holography

ಇನ್ಕೋಹೆರೆಂಟ್ ಹೋಲೋಗ್ರಫಿ – ಸುಸಂಬದ್ಧವಲ್ಲದ ಪೂರ್ಣಚಿತ್ರಗ್ರಹಣ –  ಪ್ರಾರಂಭದಲ್ಲಿ ತೆಗೆಯಲಾಗುತ್ತಿದ್ದ ಸುಸಂಬದ್ಧವಲ್ಲದ ಪೂರ್ಣಚಿತ್ರಗಳು‌.‌ ಇವುಗಳನ್ನು ಸಾಂಪ್ರದಾಯಿಕ ಛಾಯಾಚಿತ್ರಗಳನ್ನು ಹಾಗೂ ಸುಸಂಬದ್ಧವಲ್ಲದ ದೃಶ್ಯವಿಜ್ಞಾನದ ವ್ಯವಸ್ಥೆಗಳನ್ನು ಬಳಸಿ ತೆಗೆಯುತ್ತಿದ್ದರು.

Incubator

ಇನ್ಕ್ಯುಬೇಟರ್ – ಕಾವು ಪೆಟ್ಟಿಗೆ – ತಾಪಸ್ಥಾಪಕವನ್ನು ಉಪಯೋಗಿಸಿಕೊಂಡು ಸ್ಥಿರವಾದ ಆಂತರಿಕ ಉಷ್ಣತೆಯನ್ನು ಕಾಪಾಡಿಕೊಂಡು ಬರುವ ಸಾಮರ್ಥ್ಯವನ್ನು ಹೊಂದಿರುವಂತೆ ವಿನ್ಯಾಸ ಮಾಡಿರುವ ಒಂದು ಪೆಟ್ಟಿಗೆ. ಕೋಳಿಮರಿಗಳನ್ನು ಬೆಳೆಸಲು, ಅವಧಿಗೆ ಮುನ್ನ ಹುಟ್ಟಿದ ಎಳೆಶಿಶುಗಳನ್ನು ಸುರಕ್ಷಿತವಾಗಿ ಬೆಳೆಸಲು ಮತ್ತು ಬ್ಯಾಕ್ಟೀರಿಯಾಶಾಸ್ತ್ರದಲ್ಲಿ ಇದನ್ಬು ಬಳಸುತ್ತಾರೆ.

Indeterminacy principle (Uncertainty principle) 

ಇನ್‌ಡೆಟರ್ಮಿನೆನ್ಸಿ ಪ್ರಿನ್ಸಿಪ್ಲ್( ಅನ್ಸರ್ಟೈನಿಟಿ ಪ್ರಿನ್ಸಿಪ್ಲ್) – ಅನಿರ್ದಿಷ್ಟತಾ ಸಿದ್ಧಾಂತ ( ಹೈಸನ್ ಬರ್ಗ್ ರ ಅನಿಶ್ಚಿತತೆಯ ಸಿದ್ಧಾಂತ )‌ – ಒಂದು ಕಣದ ಸ್ಥಾನಬಿಂದು ಹಾಗೂ ದ್ರವ್ಯವೇಗವನ್ನು  ಏಕಕಾಲಕ್ಕೆ ನಿಖರವಾಗಿ ಅರಿಯಲು ಸಾಧ್ಯ ಇಲ್ಲ ಎಂದು ಹೇಳುವ ಸಿದ್ಧಾಂತ ಇದು. ಇದನ್ನು 1927 ರಲ್ಲಿ ಇದನ್ನು ವರ್ನರ್ ಹೈಸನ್ಬರ್ಗ್( 1901-1976) ರು ಕಂಡುಹಿಡಿದರು.

Index

ಇಂಡೆಕ್ಸ್ – ಸೂಚ್ಯಂಕ – ಆಯಾಮರಹಿತವಾದ ಒಂದು ಅಂಕಿ‌ ಪರಿಮಾಣ.‌ ಇದನ್ನು ಭೌತಶಾಸ್ತ್ರೀಯ ಪರಿಣಾಮವೊಂದರ ಪರಿಮಾಣವನ್ನು ಸೂಚಿಸಲು ಬಳಸುತ್ತಾರೆ.  ಉದಾಹರಣೆಗೆ ಒಂದು ವಸ್ತುವಿನ ವಕ್ರೀಭವನ ಸೂಚ್ಯಂಕ.

Index error ( zero error) 

ಇಂಡೆಕ್ಸ್ ಎರರ್( ಝೀರೋ ಎರರ್) – ಸೂಚ್ಯಾಂಕ ದೋಷ ಅಥವಾ ಶೂನ್ಯ ದೋಷ – ಅಳೆಯುವ ಉಪಕರಣವೊಂದರಲ್ಲಿ ಕಂಡುಬರುವ ಒಂದು ಅಳತೆಮಾನದ ದೋಷ ಇದು. ಇದರಲ್ಲಿ ಏನಾಗುತ್ತದೆಂದರೆ ಉಪಕರಣವು ಸೊನ್ನೆ ನಮೂದನ್ನು ತೋರಿಸಬೇಕಾದ ಕಡೆ ಈ ನಮೂದನ್ನು ತೋರಿಸುತ್ತದೆ.‌

Indicator diagram

ಇಂಡಿಕೇಟರ್ ಡಯಾಗ್ರಮ್ – ಸೂಚಕ ಚಿತ್ರ – ಒಂದು ಚಾಲಕಯಂತ್ರದ ಗುಂಡುಕಂಬ (ಸಿಲಿಂಡರ್)ದೊಳಗಿರುವ ಚಲಿಸುವ ಭಾಗವು( ಪಿಸ್ಟನ್) ರೇಖಿಸಿದ ರೇಖಾಕಾರದ ಚಿತ್ರ. ‌ಈ ಚಿತ್ರವನ್ನು ಚಾಲಕಯಂತ್ರದ ಕಾರ್ಯದಕ್ಷತೆಯನ್ನು ಅಂದಾಜು ಮಾಡಲು ಬಳಸುತ್ತಾರೆ.

Inductance

ಇಂಡಕ್ಟೆನ್ಸ್ – ವಿದ್ಯುತ್ ಪ್ರೇರಕತೆ – ಒಂದು ವಿದ್ಯುನ್ಮಂಡಲ ಅಥವಾ ಉಪಕರಣ ಭಾಗದ ವಿದ್ಯುತ್ ಪ್ರೇರಿಸುವ ಗುಣ ಇದು‌. ಇದರಿಂದಾಗಿ, ವಿದ್ಯುನ್ಮಂಡಲದಲ್ಲಿ ಹರಿಯುತ್ತಿರುವ ವಿದ್ಯುತ್ ಬದಲಾದಾಗ ವಿದ್ಯುತ್ ಚಾಲಕ ಶಕ್ತಿಯ ಉತ್ಪಾದನೆಯಾಗುತ್ತದೆ.

Inductance meter 

ಇಂಡಕ್ಟೆನ್ಸ್ ಮೀಟರ್ – ವಿದ್ಯುತ್ ಪ್ರೇರಕತಾ ಮಾಪಕ – ಒಂದು ವಿದ್ಯುನ್ಮಂಡಲದ ಸ್ವಯಂಪ್ರೇರಕತೆಯನ್ನು ಅಥವಾ ಜೋಡಿ ಮಾಡಲ್ಪಟ್ಟ ಎರಡು ವಿದ್ಯುನ್ಮಂಡಲಗಳ ಪರಸ್ಪರ ಪ್ರೇರಕತೆಯನ್ನು ಕಂಡು ಹಿಡಿಯಲು ಬಳಸುವ ಒಂದು ವಿದ್ಯುತ್ ಉಪಕರಣ.

Page 3 of 7

Kannada Sethu. All rights reserved.