ಕನ್ನಡ ಕನ್ನಡಿ

ವಾರಕ್ಕೆ ಐದು ಪದಗಳಂತೆ, ತಾಂತ್ರಿಕ/ವೈಜ್ಞಾನಿಕ ಕ್ಷೇತ್ರದ ಪದಗಳಿಗೆ ಕನ್ನಡ ಸಂವಾದಿ ಪದಗಳ ಪರಿಚಯ ಮಾಡುವ ಅಂಕಣವಿದು. ಕನ್ನಡದಲ್ಲಿ ಹೊಸ ಜ್ಞಾನ ನಿರ್ಮಾಣ ಆಗಬೇಕೆಂದರೆ ಅದರ ಪದಕೋಶವು ವಿಸ್ತಾರಗೊಳ್ಳಬೇಕು. ಈ ದಿಸೆಯಲಿನ್ಲ ಕಿರುಪ್ರಯತ್ನವೇ ಈ ಅಂಕಣ.

Geiger counter( Geiger – Muller counter)

ಗೀಗರ್ ಕೌಂಟರ್ ( ಗೀಗರ್ ಮುಲ್ಲರ್ ಕೌಂಟರ್) – ಬಿಡಿಕಣಗಳು ಮತ್ತು ಬೆಳಕು ಕಣಗಳು ( ಫೋಟಾನ್) ಗಳನ್ನು ಲೆಕ್ಕ ಮಾಡುವುದಕ್ಕೋಸ್ಕರ ಅಯಾನೀಕರಿಸುವ ವಿಕಿರಣದ ಪತ್ತೆಯಲ್ಲಿ ಬಳಸುವ ಉಪಕರಣ.

Geisser’s tube

ಗೀಸರ್ಸ್ ಟ್ಯೂಬ್ – ಗೀಸರ್ ಕೊಳವೆ – ಪಾದರಸದ ಒತ್ತಡವು 1 ಮಿಲಿಮೀಟರ್ ನಷ್ಟು ಇರುವಂತೆ ತಯಾರಿಸಿದ ಒಂದು ನಿರ್ವಾತ ಕೊಳವೆ‌. ಇದರಲ್ಲಿನ ವಿಸರ್ಜನವು ಹೆಚ್ಚು ಉಜ್ವಲವಾಗಿರಬೇಕೆಂದು ಒಂದು ಕಿರಿದಾದ ಜಾಗದಲ್ಲಿ ಸಂಗ್ರಹವಾಗುವಂತೆ ಮಾಡಲಾಗುತ್ತದೆ. ಈ ಕೊಳವೆಯನ್ನು ಅನಿಲದ ವರ್ಣಪಟಲಗಳನ್ನು ಅಧ್ಯಯನ ಮಾಡಲಿಕ್ಕೋಸ್ಕರ ಬಳಸುತ್ತಾರೆ.

Generator 

ಜೆನರೇಟರ್ – ವಿದ್ಯದುತ್ಪಾದಕ – ಯಂತ್ರಚಲನ ಶಕ್ತಿಯನ್ನು ವಿದ್ಯುಚ್ಛಕ್ತಿಯಾಗಿ ಪರಿವರ್ತಿಸುವ ಒಂದು ದೊಡ್ಡ ಗಾತ್ರದ ಯಂತ್ರ.

Geodesic (line)

ಜಿಯೋಡೆಸಿಕ್ ಲೈನ್ – ಭೂವಿಭಜನಾ (ರೇಖೆ) – ಬಾಗಿರುವ ಒಂದು ಮೇಲ್ಮೈ ಯಲ್ಲಿ ಎರಡು ಬಿಂದುಗಳಿಗಿರುವ ಅತ್ಯಂತ ಕಡಿಮೆ (ಕನಿಷ್ಠ) ಅಂತರ.

Geometric average

ಜಿಯೋಮೆಟ್ರಿಕ್ ಆವರೇಜ್ – ಜ್ಯಾಮಿತೀಯ ಸರಾಸರಿ – n ಸಂಖ್ಯೆಗಳ ಒಂದು ಗಣದ ಜ್ಯಾಮಿತೀಯ ಸರಾಸರಿ ಅಂದರೆ ಅವುಗಳ ಗುಣಲಬ್ಧದ n ನೇ ಘಾತ.

Geometric series

ಜಿಯೋಮೆಟ್ರಿಕ್ ಸೀರೀಸ್  – ಸಂಖ್ಯೆಗಳು ಅಥವಾ ಗಣಿತ ವಾಕ್ಯಗಳ ಒಂದು ಸರಣಿ. ಇದರಲ್ಲಿ ಪ್ರತಿ ಸಂಖ್ಯೆ ಮತ್ತು ಅದರ‌ ಹಿಂದಿನ ಸಂಖ್ಯೆಗೆ ಇರುವ ಅನುಪಾತವು ಸ್ಥಿರವಾಗಿರುತ್ತದೆ. ಉದಾಹರಣೆಗೆ, 1, 4, 16, 64, 156. ಈ ಸರಣಿಯ ಸರ್ವಸಾಮಾನ್ಯ ಅನುಪಾತ 4.

Geometrical optics

ಜಿಯೋಮೆಟ್ರಿಕಲ್ ಆಪ್ಟಿಕ್ಸ್ – ಜ್ಯಾಮಿತೀಯ ದೃಶ್ಯಬೆಳಕು ವಿಜ್ಞಾನ –  ದೃಶ್ಯಬೆಳಕು ವಿಜ್ಞಾನದ (optics) ಒಂದು ಶಾಖೆ ಇದು‌. ಬೆಳಕು ಸರಳರೇಖೆಯಲ್ಲಿ  ಪ್ರಯಾಣಿಸುತ್ತದೆ ಎಂಬುದನ್ನು ತಳಹದಿ ಊಹೆಯಾಗಿ ಇರಿಸಿಕೊಂಡು ಬೆಳಕಿನ ಕಿರಣದ ಪ್ರತಿಫಲನ ಹಾಗೂ ವಕ್ರೀಭವನಗಳ ನಿಯಂತ್ರಣದ ಕುರಿತು ಚಿಂತನೆ ನಡೆಸುತ್ತದೆ.

Geometrical resolving power

ಜಿಯೋಮೆಟ್ರಿಕಲ್ ರಿಸಾಲ್ವಿಂಗ್ ಪವರ್ – ಜ್ಯಾಮಿತೀಯ ವಿಂಗಡಣಾ ಸಾಮರ್ಥ್ಯ ‌- ಒಂದು ಸೂಕ್ಷ್ಮ ದರ್ಶಕ ಅಥವಾ ದೂರದರ್ಶಕಕ್ಕೆ ಇರುವ ಒಂದು ಸಾಮರ್ಥ್ಯ ಇದು‌ ; ಎರಡು ತುಂಬ ಹತ್ತಿರ ಇರುವ ಬೇರೆ ಬೇರೆ ವಸ್ತುಗಳನ್ನು ಎರಡು ಪ್ರತ್ಯೇಕ ವಸ್ತುಗಳಾಗಿ ತೋರಿಸುವ ಸಾಮರ್ಥ್ಯ.

Geophysics

 ಜಿಯೋಫಿಸಿಕ್ಸ್ – ಭೂ ಭೌತವಿಜ್ಞಾನ ‌- ಭೂಮಿಯ ಹೊರಪದರ ಮತ್ತು‌ ಒಳತಿರುಳನ್ನು ಅಧ್ಯಯನ ಮಾಡಲು ‌ಗಣಿತ ಮತ್ತು ಭೌತಶಾಸ್ತ್ರದ ಸಿದ್ಧಾಂತಗಳನ್ನು ಅನ್ವಯಿಸುವ ಭೂವಿಜ್ಞಾನದ ಒಂದು ಶಾಖೆ ಇದು. 

Geostationary orbit or Geosynchronous orbit

ಜಿಯೋಸ್ಟೇಷನರಿ ಆರ್ಬಿಟ್ ಅಥವಾ ಜಿಯೋಸಂಕ್ರಾನಸ್ ಆರ್ಬಿಟ್ – ಭೂಸ್ಥಾಯಿ ಕಕ್ಷೆ ಅಥವಾ ಭೂಸಮಕಾಲಿಕ‌ ಕಕ್ಷೆ‌  – ಭೂಮಿಯು ತನ್ನ ಅಕ್ಷದ ಮೇಲೆ ಸುತ್ತಲು ತೆಗೆದುಕೊಳ್ಳುವಷ್ಟೇ ( 24 ಗಂಟೆ, 56 ನಿಮಿಷ ಮತ್ತು 4.1 ಸೆಕೆಂಡ್) ಸಮಯವನ್ನು ತೆಗೆದುಕೊಂಡು ಭೂಮಿಯನ್ನು ಸುತ್ತುವ ಕೃತಕ ಉಪಗ್ರಹದ ಕಕ್ಷಾಪಥ.

Page 3 of 8

Kannada Sethu. All rights reserved.