ಕನ್ನಡ ಕನ್ನಡಿ

ವಾರಕ್ಕೆ ಐದು ಪದಗಳಂತೆ, ತಾಂತ್ರಿಕ/ವೈಜ್ಞಾನಿಕ ಕ್ಷೇತ್ರದ ಪದಗಳಿಗೆ ಕನ್ನಡ ಸಂವಾದಿ ಪದಗಳ ಪರಿಚಯ ಮಾಡುವ ಅಂಕಣವಿದು. ಕನ್ನಡದಲ್ಲಿ ಹೊಸ ಜ್ಞಾನ ನಿರ್ಮಾಣ ಆಗಬೇಕೆಂದರೆ ಅದರ ಪದಕೋಶವು ವಿಸ್ತಾರಗೊಳ್ಳಬೇಕು. ಈ ದಿಸೆಯಲಿನ್ಲ ಕಿರುಪ್ರಯತ್ನವೇ ಈ ಅಂಕಣ.

Chip

ಮೈಕ್ರೋಚಿಪ್ಪು – ತುಂಬ ಪುಟ್ಟದಾಗಿರುವ ಒಂದು ಅರೆವಾಹಕ. ಇದು ಸಂಕಲಿತ ವಿದ್ಯುನ್ಮಂಡಲದ ಟ್ರಾನ್ಸ್ಮೀಟರನ್ನು ಅಥವಾ ನಿರೋಧಕವನ್ನು ಒಳಗೊಂಡಿರುತ್ತದೆ. 

Choke

ವಿದ್ಯುತ್ ನಿಯಂತ್ರಕ – ಪರ್ಯಾಯ ವಿದ್ಯುತ್ ಅಲೆಗಳ ಆವರ್ತನಗಳನ್ನು ಅಡ್ಡಿಯೊಡ್ಡಿ ಕಡಿಮೆ ಮಾಡಲು ಹಾಗೂ ಏಕಮುಖೀ ವಿದ್ಯುತ್ ಹರಿವಿನ ಮಂಡಲಗಳಲ್ಲಿನ ಓಲಾಟ, ಅಸ್ಥಿರತೆಗಳನ್ನು ಸರಿ ಮಾಡಲು ಬಳಸುವ ವಿದ್ಯುತ್ ಚೋದಕವಿದು.

Choroid

ಕಣ್ಣಿನ ಮಧ್ಯಪದರ – ಕಣ್ಣಿನಲ್ಲಿರುವ ಮೂರು ಪದರಗಳಲ್ಲಿ ಮಧ್ಯದ್ದು. ಕಣ್ಣುಗುಡ್ಡೆಯನ್ನು ಆವರಿಸಿರುವ ಚರ್ಮದ ಪದರವಿದು.

Chromatic aberration

ಬಣ್ಣ ಸಂಬಂಧೀ ಬಿಂಬದೋಷ – ಒಂದು ಮಸೂರದಿಂದ ಉಂಟಾಗುವ ಬಿಂಬದಲ್ಲಿ ಬಣ್ಣದ ಅಂಚುಗಳು ಮೂಡುವಂತಹ ದೋಷ ಇದು. ಗಾಜಿನ ವಕ್ರೀಭವನ ಗುಣ ( ರಿಫ್ರಾಕ್ಷನ್) ದಿಂದಾಗಿ ಈ ದೋಷ ಉಂಟಾಗುತ್ತದೆ.

Chromosphere

ವರ್ಣಮಂಡಲ – ಸೂರ್ಯನ ಪ್ರಭಾಮಂಡಲ(ಫೋಟೋಸ್ಪಿಯರ್)ದ ಸುತ್ತ ಇರುವ ಒಂದು ವಾತಾವರಣ ಪದರ.  ಸಂಪೂರ್ಣ ಸೂರ್ಯಗ್ರಹಣದ ಸಂದರ್ಭದಲ್ಲಿ ನಾವಿದನ್ನು ವೀಕ್ಷಿಸಬಹುದು.

Circuit(electrical)

ಮಂಡಲ(ವಿದ್ಯುನ್ಮಂಡಲ) – ವಿದ್ಯುತ್‌ವಾಹಕ ಪಥವೊಂದನ್ನು ನಿರ್ಮಿಸುವ ವಿದ್ಯುತ್ ಉಪಕರಣ ಭಾಗಗಳ ಒಂದು ಸಂಯೋಜನೆಯಿದು.

Circular measure

ವೃತ್ತಾಕಾರೀ ಅಳತೆ – ಕೋನಗಳನ್ನು ರೇಡಿಯನ್ ಎಂಬ ಮೂಲಮಾನದಲ್ಲಿ ಅಳೆಯುವುದು. ಇದರ ಅರ್ಥವೇನೆಂದರೆ, ತ್ರಿಜ್ಯ(ರೇಡಿಯಸ್)ವೊಂದರ ಉದ್ದವನ್ನು ತೆಗೆದುಕೊಂಡು ಅದನ್ನು ವೃತ್ತಾಕಾರದಲ್ಲಿ ಸುತ್ತಿಟ್ಟರೆ ಉಂಟಾಗುವ ಕೋನದ ಅಳತೆ.

Circular motion

 ವೃತ್ತಪಥ ಚಲನೆ(ಸುತ್ತು ಚಲನೆ) – ಒಂದು ರೀತಿಯ ನಿಯತಕಾಲಿಕ ಅಥವಾ ವೃತ್ತಾಕಾರದ ಚಲನೆ. ಇದು ಸಾಧ್ಯವಾಗಲು ಒಂದು ಧನಾತ್ಮಕ ಕೇಂದ್ರಮುಖೀ ಬಲವೊಂದು ವಸ್ತುವಿನ ಮೇಲೆ ವರ್ತಿಸಬೇಕು.

Circular polarization

 ವೃತ್ತಾಕಾರ ಧ್ರುವೀಕರಣ – ವಿದ್ಯುತ್ಕಾಂತೀಯ ಕಿರಣಗಳ ಒಂದು ರೀತಿಯ ಧ್ರುವೀಕರಣವಿದು. ಇದರಲ್ಲಿ ಕಿರಣವು ಮುಂದೆ ಮುಂದೆ ಚಲಿಸುತ್ತಿದ್ದಂತೆ ಧ್ರುವೀಕರಣದ ಮೇಲ್ಮೆöÊಯು ಅಕ್ಷದ ಸುತ್ತ ಒಂದೇ ಸಮನೆ ಸುತ್ತುತ್ತಿರುತ್ತದೆ.

Clark cell

ಕ್ಲಾರ್ಕ್ ವಿದ್ಯುತ್‌ಕೋಶ – ಪಾದರಸವನ್ನು ಬಳಸುತ್ತಿದ್ದ ಒಂದು ಬಗೆಯ ವಿದ್ಯುತ್ಕೋಶವಿದು. ಮುಂಚೆ, ವಿದ್ಯುತ್ ಚಾಲಕ ಬಲ(ಎಲೆಕ್ಟ್ರಾಮೋಟಿವ್ ಫೋರ್ಸ್)ದ ಆಕರವಾಗಿ ಇದನ್ನೇ ವ್ಯಾಪಕವಾಗಿ ಬಳಸುತ್ತಿದ್ದರು. ಇದನ್ನು ೧೮೭೩ರಲ್ಲಿ ಇಂಗ್ಲೆಂಡಿನ ಯಂತ್ರಜ್ಞಾನಿಯಾದ ಜೋಸಿಯಾ ಲ್ಯಾಟಿಮರ್ ಕ್ಲಾರ್ಕ್ರು ಕಂಡುಹಿಡಿದರು.

Page 7 of 15

Kannada Sethu. All rights reserved.