ಕನ್ನಡ ಕನ್ನಡಿ

ವಾರಕ್ಕೆ ಐದು ಪದಗಳಂತೆ, ತಾಂತ್ರಿಕ/ವೈಜ್ಞಾನಿಕ ಕ್ಷೇತ್ರದ ಪದಗಳಿಗೆ ಕನ್ನಡ ಸಂವಾದಿ ಪದಗಳ ಪರಿಚಯ ಮಾಡುವ ಅಂಕಣವಿದು. ಕನ್ನಡದಲ್ಲಿ ಹೊಸ ಜ್ಞಾನ ನಿರ್ಮಾಣ ಆಗಬೇಕೆಂದರೆ ಅದರ ಪದಕೋಶವು ವಿಸ್ತಾರಗೊಳ್ಳಬೇಕು. ಈ ದಿಸೆಯಲಿನ್ಲ ಕಿರುಪ್ರಯತ್ನವೇ ಈ ಅಂಕಣ.

Drift velocity

ಗತಿಶೀಲತೆಯ ದಿಶಾವೇಗ – ಒಂದು ಅರೆವಾಹಕದಲ್ಲಿ, ಏಕಘಟಕ ವಿದ್ಯುತ್ ಕ್ಷೇತ್ರದಲ್ಲಿ ಬೇಕಾದ್ದಕ್ಕಿಂತ ಹೆಚ್ಚು ಸಂಖ್ಯೆಯಲ್ಲಿರುವ ಅಲ್ಪಸಂಖ್ಯಾತ ವಿದ್ಯುದಂಶ ಒಯ್ಯಕಗಳ ಸರಾಸರಿ ದಿಶಾವೇಗ.

Driver

ಚಾಲಕ ವಿದ್ಯುನ್ಮಂಡಲ – ಒಂದು ಅಥವಾ ಅದಕ್ಕಿಂತ ಹೆಚ್ಚು ವಿದ್ಯುನ್ಮಂಡಲಗಳಿಗೆ ಒಳಹರಿವಿನ ವಿದ್ಯುತ್ ನೀಡುವಷ್ಟು  ಹೊರಹರಿವಿನ ಸಾಮರ್ಥ್ಯವುಳ್ಳ ವಿದ್ಯುನ್ಮಂಡಲ.

Dry cell

ಒಣ ಕೋಶ – ತನ್ನಲ್ಲಿನ ವಿದ್ಯುತ್ ವಿಭಜಕವು ಹಣ್ಣುಪಾಕ ಅಥವಾ ಲೇಹ್ಯದಂತಹ ಹದದಲ್ಲಿ ಇರುವ ಒಂದು ವಿದ್ಯುತ್ ರಾಸಾಯನಿಕ ಕೋಶ. ಇದನ್ನು ಕೈದೀಪದಂತಹ, ಕೈಯಲ್ಲಿಟ್ಟುಕೊಂಡು ಓಡಾಡಿಸುವ ಉಪಕರಣಗಳಲ್ಲಿ ಬಳಸುತ್ತಾರೆ.

Dry ice

ಒಣ ಮಂಜುಗಡ್ಡೆ – ಘನರೂಪದಲ್ಲಿರುವ ಇಂಗಾಲದ ಡೈಆಕ್ಸೈಡ್. ಇದನ್ನು ತಂಪುಕಾರಕವಾಗಿ ಬಳಸುತ್ತಾರೆ.

Duality (wave – particle duality)

ಇಬ್ಬಗೆ ( ಅಲೆ – ಕಣ ಇಬ್ಬಗೆ) – ವಿದ್ಯುತ್ಕಾಂತೀಯ ವಿಕಿರಣವು ಕೆಲವು ಸನ್ನಿವೇಶಗಳಲ್ಲಿ ಅಲೆಗಳಂತೆ ಮತ್ತು ಇನ್ನು ಕೆಲವು ಸನ್ನಿವೇಶಗಳಲ್ಲಿ ಕಣಗಳಂತೆ ವರ್ತಿಸುತ್ತದೆ. ಈ ಸನ್ನಿವೇಶವನ್ನು ಇಬ್ಬಗೆ( ಅಲೆ-ಕಣ ಇಬ್ಬಗೆ) ಎನ್ನುತ್ತಾರೆ.

Ductility 

ತಂತಿಯಾಗುವ ಸಾಮರ್ಥ್ಯ – ವಸ್ತುಗಳಲ್ಲಿ ಅದರಲ್ಲೂ ಮುಖ್ಯವಾಗಿ ಲೋಹಗಳಲ್ಲಿ ಕಾಣಿಸುವ ಸಾಮರ್ಥ್ಯ ಇದು. ಉದಾಹರಣೆಗೆ ತಾಮ್ರ ಲೋಹವನ್ನು ತಂತಿಯಂತೆ ಉದ್ದಕ್ಕೆ ಎಳೆದರೂ ಅದು ಸೀಳಿಕೊಳ್ಳದೆ, ಮುರಿಯದೆ ಇರುತ್ತದೆ.

Dwraf star

ಕುಬ್ಜ ನಕ್ಷತ್ರ – ತನ್ನ ವಿಕಾಸದ ಕೊನೆಯ ಹಂತದಲ್ಲಿರುವ ನಕ್ಷತ್ರವಿದು. ಇದರೊಳಗಿನ ಇಂಧನವು ತೀರಿಹೋಗಿ ಅದರ ಗುರುತ್ವ ಶಕ್ತಿಯು ಕುಸಿದು ಹೋಗಿರುತ್ತದೆ.

Dynamic equilibrium

ಚಲನಾತ್ಮಕ ಸಮತೋಲನ – ಸಮಸ್ಥಿತಿಯಲ್ಲಿರುವ ಒಂದು ವ್ಯವಸ್ಥೆಯಲ್ಲಿ ಮುಮ್ಮುಖ ಕ್ರಿಯೆ ಮತ್ತು ಹಿಮ್ಮುಖ ಕ್ರಿಯೆಗಳು ಒಂದೇ ವೇಗದಲ್ಲಿ ನಡೆದರೆ ಅದನ್ನು ಚಲನಾತ್ಮಕ ಸಮತೋಲನ ಎನ್ನುತ್ತಾರೆ.

Dynamics

ಬಲ ವಿಜ್ಞಾನ – ಬಲಗಳ ವರ್ತನೆಯ ಅಡಿಯಲ್ಲಿ ಚಲಿಸುವ ವಸ್ತುಗಳ ಅಧ್ಯಯನ ಮಾಡುವ ಶಾಸ್ತ್ರ. ಯಂತ್ರಚಲನಶಾಸ್ತ್ರ(ಮೆಕ್ಯಾನಿಕ್ಸ್)ದ ಒಂದು ಶಾಖೆ ಇದು.

Dynamo

ವಿದ್ಯುತ್ ಉತ್ಪಾದಕ – ಯಾಂತ್ರಿಕ ಶಕ್ತಿಯನ್ನು ವಿದ್ಯುತ್ ಶಕ್ತಿಯಾಗಿ ಪರಿವರ್ತಿಸುವ ಒಂದು ಚಿಕ್ಕ ಉಪಕರಣ.

Page 7 of 7

Kannada Sethu. All rights reserved.