ಸುಸಂಬದ್ಧತೆ – ಏಕಮಾತ್ರ ಆವರ್ತನವುಳ್ಳ ಕಿರಣಗಳ ಸಮೂಹದಲ್ಲಿ ಅಲೆಗಳ, ಏರಿಕೆಗಳ ಹಂತವ್ಯತ್ಯಾಸವು ಸ್ಥಿರವಾಗಿರುವುದು. ಒಂದೇ ದಿಕ್ಕಿಗೆ ಹರಿಯುವ ಬೆಳಕನ್ನು ಹೊರಸೂಸುವ ಆಕರವು ಸುಸಂಬದ್ಧವಾಗಿರುತ್ತದೆ, ಉದಾಹರಣೆಗೆ ಲೇಸರ್.
ಕನ್ನಡ ಕನ್ನಡಿ
ವಾರಕ್ಕೆ ಐದು ಪದಗಳಂತೆ, ತಾಂತ್ರಿಕ/ವೈಜ್ಞಾನಿಕ ಕ್ಷೇತ್ರದ ಪದಗಳಿಗೆ ಕನ್ನಡ ಸಂವಾದಿ ಪದಗಳ ಪರಿಚಯ ಮಾಡುವ ಅಂಕಣವಿದು. ಕನ್ನಡದಲ್ಲಿ ಹೊಸ ಜ್ಞಾನ ನಿರ್ಮಾಣ ಆಗಬೇಕೆಂದರೆ ಅದರ ಪದಕೋಶವು ವಿಸ್ತಾರಗೊಳ್ಳಬೇಕು. ಈ ದಿಸೆಯಲಿನ್ಲ ಕಿರುಪ್ರಯತ್ನವೇ ಈ ಅಂಕಣ.
ಸಮಕಣ ಆಕರ್ಷಣೆ – ಒಂದೇ ರೀತಿಯ ಅಲೆಗಳು ಅಥವಾ ಒಂದೇ ವಸ್ತುವಿನ ಅಣುಗಳ ನಡುವಿನ ಆಕರ್ಷಣೆಯ ಬಲ.
ತಂಪು ಋಣವಿದ್ಯುದ್ವಾರ – ವಿದ್ಯುತ್ ತಂತಿಯ ಸಹಾಯದಿಂದ ಬಿಸಿ ಮಾಢದೇ ಇರುವ ಋಣ ವಿದ್ಯುದ್ವಾರ.
ಶೀತ ಪಂಜರ – ದ್ರವರೂಪೀ ಅನಿಲ ಅಥವಾ ಅಸಿಟೋನಿನಲ್ಲಿರುವ ಒಣ ಮಂಜುಗಡ್ಡೆ(ಹೆಪ್ಪುಗಟ್ಟಿಸಿದ ಇಂಗಾಲದ ಡೈ ಆಕ್ಸೈಡ್)ಯನ್ನು ಹೊಂದಿದ್ದು, ತುಂಬ ತಣ್ಣಗಿರುವ ಒಂದು ಕೊಳವೆ ಇದು. ಈ ಕೊಳವೆಯು ತನ್ನ ಮೂಲಕ ಚಿಲಸುವ ಆವಿಯನ್ನು ಹಿಡಿದು ದ್ರವರೂಪಕ್ಕೆ ತಂದುಬಿಡುತ್ತದೆ.
ಢಿಕ್ಕಿ(ಸಂಘರ್ಷ) – ಅಣುಗಳು, ಪರಮಾಣುಗಳು ಮುಂತಾದವು ಮುಖಾಮುಖಿಯಾದಾಗ ಅವುಗಳಲ್ಲಿ ಉಂಟಾಗುವ ಪರಸ್ಪರ ಕ್ರಿಯೆ.
ಕಲಿಲ – ಇದು ಒಂದು ರೀತಿಯ ಮಿಶ್ರಣ. ಒಂದು ವಸ್ತು ಮತ್ತು ಆ ವಸ್ತುವಿನೊಳಗೆ ಅದರ ಎಲ್ಲೆಡೆಗೂ ವ್ಯಾಪಿಸಿರುವ ಆದರೆ ಕರಗದ ಕಣಗಳ ರೂಪದಲ್ಲಿಯೇ ಉಳಿದಿರುವ ಇನ್ನೊಂದು ವಸ್ತು – ಇವುಗಳ ಮಿಶ್ರಣ ಇದು. ಉದಾಹರಣೆಗೆ ಹಾಲು. ಹಾಲಿನಲ್ಲಿ ಕೊಬ್ಬಿನ ಕಣಗಳು ಕರಗದ ಕಣಗಳಾಗಿಯೇ ಇರುತ್ತವೆ.
ಬಣ್ಣಶಕ್ತಿ ಮಾಪಕ – ಯಾವುದೇ ಬಣ್ಣದ ತೀಕ್ಷ್ಣತೆಯನ್ನಾದರೂ ಮೂರು ಮೂಲಭೂತ ಬಣ್ಣಗಳ (ಕೆಂಪು, ಹಸುರು, ನೀಲಿ) ನೆಲೆಯಲ್ಲಿ(ಅಂದರೆ ಪ್ರತಿಯೊಂದರ ಪರಿಭಾಷೆಯಲ್ಲಿ) ನೀಡುವ ಒಂದು ಉಪಕರಣ.
ಬಣ್ಣ – ಮನುಷ್ಯನ ಕಣ್ಣಿನ ಮೇಲೆ ಬೇರೆ ಬೇರೆ ತರಂಗಾಂತರಗಳ ಬೆಳಕು ಬಿದ್ದಾಗ ಉಂಟಾಗುವ ಇಂದ್ರಿಯ ಗ್ರಹಿಕೆ.
ಬಣ್ಣಗುರುಡು – ಮನುಷ್ಯನ ಕಣ್ಣಿನ ಒಂದು ಸಮಸ್ಯೆ ಇದು. ಒಂದು ನಿರ್ದಿಷ್ಟ ಬಣ್ಣ ಅಥವಾ ಕೆಲವು ಬಣ್ಣಗಳನ್ನು ಗುರುತಿಸಲಾರದ ಕಣ್ಣಿನ ಸಮಸ್ಯೆ.
ಬಣ್ಣ ಛಾಯಾಚಿತ್ರ ಕಲೆ – ಒಂದು ತೆಳುವಾದ ಪೊರೆ ಅಥವಾ ಕಾಗದದ ಮೇಲೆ ಬಣ್ಣವುಳ್ಲ ಬಿಂಬಗಳನ್ನು ಮೂಡಿಸುವ ವಿಧಾನಗಳಲ್ಲಿ ಯಾವುದಾದರೂ ಒಂದು.