ಕನ್ನಡ ಕನ್ನಡಿ

ವಾರಕ್ಕೆ ಐದು ಪದಗಳಂತೆ, ತಾಂತ್ರಿಕ/ವೈಜ್ಞಾನಿಕ ಕ್ಷೇತ್ರದ ಪದಗಳಿಗೆ ಕನ್ನಡ ಸಂವಾದಿ ಪದಗಳ ಪರಿಚಯ ಮಾಡುವ ಅಂಕಣವಿದು. ಕನ್ನಡದಲ್ಲಿ ಹೊಸ ಜ್ಞಾನ ನಿರ್ಮಾಣ ಆಗಬೇಕೆಂದರೆ ಅದರ ಪದಕೋಶವು ವಿಸ್ತಾರಗೊಳ್ಳಬೇಕು. ಈ ದಿಸೆಯಲಿನ್ಲ ಕಿರುಪ್ರಯತ್ನವೇ ಈ ಅಂಕಣ.

Epicentre

ಎಪಿಸೆಂಟರ್ – ಭೂಕಂಪ ಅಧಿಕೇಂದ್ರ – ಒಂದು ಭೂಕಂಪಸ್ಥಳದ ಕೇಂದ್ರಗಮನ ಬಿಂದುವಿನ‌ ರೇಖೆಯಲ್ಲೇ ಭೂಮಿಯ ಮೇಲ್ಮೈ ಮೇಲೆ ಇರುವ ಒಂದು ಬಿಂದು ಅಥವಾ ಅಣುಸ್ಫೋಟದ ಬಿಂದುವಿನ ರೇಖೆಯಲ್ಲೇ ಅದರ ಮೇಲೆ ಅಥವಾ ಕೆಳಗೆ ಇರುವ ಬಿಂದು. 

Epicycle

ಅಧಿಚಕ್ರ – ಇದು ಒಂದು ಚಿಕ್ಕ ವೃತ್ತ/ಚಕ್ರ. ಇದರ ಕೇಂದ್ರವು ಒಂದು ಸ್ಥಳದಲ್ಲಿ ಸ್ಥಿರವಾಗಿಟ್ಟ ದೊಡ್ಡ ವೃತ್ತವೊಂದರ ಪರಿಧಿಯುದ್ದಕ್ಕೂ ಉರುಳುತ್ತದೆ.

Epidiascope

ಎಪಿಡಿಯಾಸ್ಕೋಪ್  – ಬಿಂಬ ದರ್ಶಕ – ಬೋಧನಾ ವೃತ್ತಿಯಲ್ಲಿರುವವರು ಬಳಸುವ ಒಂದು ದೃಶ್ಯೋಪಕರಣ ಇದು. ಒಂದು ಪಾರದರ್ಶಕ ಅಥವಾ ಅಪಾರದರ್ಶಕ ವಸ್ತುವೊಂದರ  ಹಿಗ್ಗಲಿಸಿದ  ಬಿಂಬವನ್ನು ಪರದೆಯ ಮೇಲೆ ಬೀರಲು ಈ ಉಪಕರಣವನ್ನು ಬಳಸುತ್ತಾರೆ.

Epitaxy

ಎಪಿಟ್ಯಾಕ್ಸಿ – ಪದರ ಬೆಳೆಸುವಿಕೆ – ಒಂದು ವಸ್ತುವಿನ ಏಕ ಹರಳಿನ ಮೇಲೆ ಇನ್ನೊಂದು ವಸ್ತುವಿನ ಪದರವೊಂದನ್ನು ಬೆಳೆಸುವುದು.

Epithermal neutron

ಎಪಿಥರ್ಮಲ್ ನ್ಯೂಟ್ರಾನ್ –  ಹೆಚ್ಚು ತಾಪದ ನ್ಯೂಟ್ರಾನು ‌- ತಾಪ ನ್ಯೂಟ್ರಾನಿನ ಶಕ್ತಿಗಿಂತ ಹೆಚ್ಚಾದ ಮತ್ತು ವೇಗದ ನ್ಯೂಟ್ರಾನಿಗಿಂತ ಕಡಿಮೆ ಶಕ್ತಿಯುಳ್ಳ ನ್ಯೂಟ್ರಾನು. 

EPM ( Electron probe micro analysis)

ಎಲೆಕ್ಟ್ರಾನ್ ಪ್ರೋಬ್ ಮೈಕ್ರೋಅನಾಲಿಸಿಸ್ -ಎಲೆಕ್ಟ್ರಾನು‌ ಬಿಂಬಾಧಾರಿತ ವಸ್ತು ವಿಶ್ಲೇಷಣೆ – ಒಂದು ವಸ್ತುವಿನಲ್ಲಿ ಯಾವ ಯಾವ ಮೂಲವಸ್ತುಗಳಿವೆ ಎಂದು ಪತ್ತೆ ಹಚ್ಚಲು, ಆ ವಸ್ತುವಿನೊಳಗೆ ಎಲೆಕ್ಟ್ರಾನು ಕಿರಣಪುಂಜವನ್ನು ಹರಿಸಿ, ಹೊರಬರುವಂತಹ ವಸ್ತುವಿಶಿಷ್ಟ ಕ್ಷಕಿರಣವನ್ನು ಅಳೆಯುವುದು.

Equator 

ಈಕ್ವೇಟರ್ – ಭೂಮಧ್ಯರೇಖೆ – ಭೂಮಿಯ ಸುತ್ತಲೂ ಇರುವ ಮಹಾರೇಖೆ ಇದು, ಭೂಮಿಯ ಮಹಾವರ್ತುಲ. ಇದು ಭೂಮಿಯ ಅಕ್ಷಕ್ಕೆ ಲಂಬವಾಗಿರುವ ಮೇಲ್ಮೈಯಲ್ಲಿರುತ್ತದೆ ಮತ್ತು ಎರಡೂ ಧ್ರುವಗಳಿಂದ ಸಮಾನ ದೂರದಲ್ಲಿರುತ್ತದೆ.

Equilibrant

ಈಕ್ವಿಲಿಬ್ರೆಂಟ್ – ಸಮತೋಲಕ – ಒಂದು ವಸ್ತುವಿನ ಮೇಲೆ ವರ್ತಿಸುತ್ತಿರುವ ವಿವಿಧ ಬಲಗಳ ಫಲಿತಾಂಶಬಲಕ್ಕೆ ಸಮವಾದ ಮತ್ತು ವಿರುದ್ದವಾದ ಬಲ.

Equilibrium

ಈಕ್ವಿಲಿಬ್ರಿಯಂ – ಸಮತೋಲನ – ಒಂದು ವಸ್ತುವಿನ ಮೇಲೆ ವರ್ತಿಸುತ್ತಿರುವ ಬಲಗಳ ಮೊತ್ತ ಸೊನ್ನೆ ಆಗಿದ್ದಾಗ ಆ ವಸ್ತು ಸಮತೋಲನದಲ್ಲಿದೆ ಎಂದು ಹೇಳಲಾಗುತ್ತದೆ.

Equinox

ಈಕ್ವಿನಾಕ್ಸ್ – ಸಮಕಾಲ – ಸೂರ್ಯನು ಭೂಮಧ್ಯರೇಖೆಯನ್ನು ದಾಟುವ ಕಾಲ, ಹಗಲು ಮತ್ತು ರಾತ್ರಿಗಳು ಸಮ ಅವಧಿಯನ್ನು  ಹೊಂದಿರುವ ಕಾಲ.

Page 9 of 12

Kannada Sethu. All rights reserved.