ಕೆಲವು ಸಲ ಕನ್ನಡ ಅಧ್ಯಾಪಕರನ್ನು ಬಂಧುಮಿತ್ರರು ತಮ್ಮ ಮಕ್ಕಳಿಗೆ, ಅಥವಾ ಹೊಸದಾಗಿ ಕಟ್ಟಿದ ಮನೆಗೆ ಹೆಸರು ಸೂಚಿಸಲು ಕೇಳುವುದುಂಟು. `ಮಗುವಿನ ಜಾತಕದಲ್ಲಿ ಇಂತಹ ಅಕ್ಷರ ಬಂದಿದೆ, ಯಾವುದಾದರೂ ಚೆನ್ನಾಗಿರೋ ಹೆಸರು ಹೇಳಿ ಅಂತ ಕೇಳುವುದು, ಕನ್ನಡ ಅಧ್ಯಾಪಕರು ತಮಗೆ ತಿಳಿದ ಮೂಲಗಳಿಂದ ಹೆಸರುಗಳನ್ನು ಹುಡುಕಿ ಕೊಡುವುದು ಇವು ಸಾಮಾನ್ಯವಾಗಿ ನಡೆಯುವ ವಿದ್ಯಮಾನಗಳು.
ಕನ್ನಡ ಪ್ರಸಂಗ
ಇದು ಲೇಖಕಿಯು ಕನ್ನಡದೊಂದಿಗೆ ಒಡನಾಡಿದ ಅನುಭವಗಳ ಕಥನವಾಗಿದೆ. ಕನ್ನಡ ಜಗತ್ತು ತನಗೆ ಕಲಿಸಿದ ಹಾಗೂ ಕನ್ನಡ ಭಾಷೆ ಹಾಗೂ ಸಾಹಿತ್ಯಗಳನ್ನು ತಾನು ಕಲಿಸಿದ ದಾರಿಯಲ್ಲಿನ ವಿವಿಧ ಅನುಭವಗಳನ್ನು ಓದುಗರೊಂದಿಗೆ ಹಂಚಿಕೊಳ್ಳುವ ಪ್ರಯತ್ನವಾಗಿರುತ್ತದೆ ಇದು. ವಾರಕ್ಕೆ ಒಂದು ಕನ್ನಡ ಪ್ರಸಂಗದಂತೆ ಈ ಅಂಕಣವು ಮೂಡಿ ಬರಲಿದೆ.
Like us!
Follow us!