ಬಹಳ ಅಪರೂಪದ ಗಾದೆ ಮಾತು ಇದು. ನಮ್ಮ ಮನಸ್ಸು ಕೆಲವೊಮ್ಮೆ ಈ ದಾರಿಯೋ, ಆ ದಾರಿಯೋ, ಅದೋ ಇದೋ, ಆ ಕೆಲಸವೋ, ಈ ಕೆಲಸವೋ ಎಂದು ಯೋಚಿಸಿ ಯೋಚಿಸಿ ದ್ವಂದ್ವಕ್ಕೆ ಬಿದ್ದು ಯಾವ ನಿರ್ಧಾರಕ್ಕೂ ಬರದೆ ಅಂದುಕೊಂಡ ಕೆಲಸ ಆಗುವುದೇ ಇಲ್ಲ. ಇದು ಕೆಲಸದ ವಿಷಯದಲ್ಲಿ ಮಾತ್ರವಲ್ಲ, ಪ್ರಯಾಣ, ಸಂಬಂಧ ಎಲ್ಲ ವಿಷಯಗಳಲ್ಲೂ ನಿಜ. ಹೀಗಾಗಿ ಇಮ್ಮನ ಅಂದರೆ, ಒಂದೇ ಬಾರಿಗೆ ಎರಡು ಕಡೆ ಎಳೆಯುವ ಮನಸ್ಸಿನಿಂದ ನಮ್ಮನ್ನು ನಾವು ಕಾಪಾಡಿಕೊಳ್ಳಬೇಕು. ಸರಿಯಾದ ಹೊತ್ತಿನಲ್ಲಿ ಯಾವುದಾದರೂ ಒಂದು ನಿರ್ಧಾರ ಮಾಡುವುದು ಅನೇಕ ಸಲ ತುಂಬ ಮುಖ್ಯವಾಗಿರುತ್ತದೆ ; ಇಮ್ಮನ ನಮ್ಮನ್ನು ಸೋಲಿಸಿಬಿಡುತ್ತದೆ. ಅದಕ್ಕೇ ನೋಡಿ ನಮ್ಮ ಹಿರಿಯರು ಈ ಗಾದೆಮಾತನ್ನು ಮಾಡಿದ್ದಾರೆ.
Kannada proverb – Immanadinda summane kette(I ruined myself because of two minds).
Sometimes we can not decide which path to choose when we have to choose between two paths. This indecision can happen with respect to things or people also. If we decide on one particular thing, it is alright. But, if we remain indecisive for too long then it may be too late. Therefore one should not be in two minds forever, when it comes to life’s important matters. This way, the proverb is an eye opener. Isn’t it?
Like us!
Follow us!