ಮೀನ್ ಫ್ರೀ ಟೈಮ್ – ಸರಾಸರಿ ಮುಕ್ತ ಸಮಯ – ಒಂದು ಅನಿಲದಲ್ಲಿನ ಅಣುಗಳು, ಒಂದು ಲೋಹದ ಹರಳಿನಲ್ಲಿನ ಎಲೆಕ್ಟ್ರಾನುಗಳು, (ಅಣುಸ್ಥಾವರದ) ಮಂದಕಾರಕದಲ್ಲಿನ ನ್ಯೂಟ್ರಾನುಗಳು …… ಒಟ್ಟಿನಲ್ಲಿ ಇಂತಹ ಕಣಗಳ ಸಂಘಟ್ಟನೆ ( ಢಿಕ್ಕಿ) ಗಳ ನಡುವೆ ಸರಿದುಹೋಗುವ ಸರಾಸರಿ ಸಮಯ.
ಮೀನ್ ಫ್ರೀ ಪಾತ್ – ಸರಾಸರಿ ಮುಕ್ತ ಪಥ – ಒಂದು ಅನಿಲದಲ್ಲಿನ ಅಣುಗಳು, ಒಂದು ಲೋಹದ ಹರಳಿನಲ್ಲಿನ ಎಲೆಕ್ಟ್ರಾನುಗಳು, ( ಅಣುಸ್ಥಾವರದ) ಮಂದಕಾರಕದಲ್ಲಿನ ನ್ಯೂಟ್ರಾನುಗಳು …….. ಒಟ್ಟಿನಲ್ಲಿ ಇಂತಹ ಕಣಗಳು ಸಂಘಟ್ಟನೆ ( ಢಿಕ್ಕಿ) ಗಳ ನಡುವೆ ಚಲಿಸುವಂತಹ ಸರಾಸರಿ ದೂರವಿದು.
ಮ್ಯಾಕ್ಸ್ವೆಲ್ಸ್ ಥಿಯರಿ ಆಫ್ ಲೈಟ್ – ಮ್ಯಾಕ್ಸ್ವೆಲ್ ರ ಬೆಳಕು ಸಿದ್ಧಾಂತ – ಕ್ಲಾರ್ಕ್ ಮ್ಯಾಕ್ಸ್ವೆಲ್ ರು 1860 ರಲ್ಲಿ ಬೆಳಕಿನ ಪ್ರಸರಣವನ್ನು ವಿದ್ಯುತ್ಕಾಂತೀಯ ವಿದ್ಯಮಾನವಾಗಿ ಅಂದರೆ ವಿದ್ಯುತ್ತೀಯ ಮತ್ತು ಕಾಂತೀಯ ಬಲಗಳನ್ನು ಒಳಗೊಂಡಿರುವ ಅಲೆಯ ಪ್ರಸರಣವಾಗಿ ನೋಡಬಹುದೆಂಬುದನ್ನು ಪ್ರತಿಪಾದಿಸಿದರು.
ಮ್ಯಾಕ್ಸ್ ವೆಲ್ ಡಿಸ್ಟ್ರಿಬ್ಯೂಷನ್ – ಮ್ಯಾಕ್ಸ್ ವೆಲ್ ವಿತರಣೆ – ಒಂದು ಅನಿಲದ ಕಣಗಳೊಳಗಿನ ದಿಕ್ವೇಗಗಳ ವಿತರಣೆ (ದಿಕ್ವೇಗ = ದಿಕ್ಕು ಇರುವ ವೇಗ = ವೆಲಾಸಿಟಿ).
ಮ್ಯಾಕ್ಸ್ ವೆಲ್ ಸಿಂಬಲ್, Mx – ಮ್ಯಾಕ್ಸ್ ವೆಲ್ ಸಂಕೇತ, Mx – ಸಿ.ಜಿ.ಎಸ್. ವ್ಯವಸ್ಥೆಯಲ್ಲಿ ಬಳಸಲಾಗುವ ಕಾಂತೀಯ ಬಲರೇಖೆಯ ಒಂದು ಮೂಲಮಾನ. 1 Mx = 1/100000000 Wb.
ಮ್ಯಾಕ್ಸಿಮಮ್ ಆಂಡ್ ಮಿನಿಮಮ್ ಥರ್ಮೋಮೀಟರ್ – ಗರಿಷ್ಠತಮ ಹಾಗೂ ಕನಿಷ್ಠತಮ ಉಷ್ಣಮಾಪಕ – ಒಂದು ದತ್ತ ಕಾಲಾವಧಿಯಲ್ಲಿನ ಗರಿಷ್ಠತಮ ಹಾಗೂ ಕನಿಷ್ಠತಮ ಉಷ್ಣಾಂಶಗಳನ್ನು ದಾಖಲಿಸುವಂತೆ ವಿನ್ಯಾಸಗೊಳಿಸಲಾಗಿರುವ ಒಂದು ಉಷ್ಣಮಾಪಕ. ಇದರಲ್ಲಿ ಪಾದರಸ, ಇಥೆನಾಲ್ ಹಾಗೂ ಶಾಶ್ವತ ಅಯಸ್ಕಾಂತವೊಂದನ್ನು ಬಳಸಲಾಗುತ್ತದೆ.
ಮ್ಯಾಟ್ರಿಕ್ಸ್ – ಸಂಖ್ಯಾಯತ ಅಥವಾ ಮಾತೃಕೆ – ಆಯಾತಕಾರದಲ್ಲಿ ಇಡಲ್ಪಟ್ಟ ಪರಿಮಾಣಗಳ ಒಂದು ಕಟ್ಟು. ಇದನ್ನು ಕೆಲವು ಗಣಿತಕ್ರಿಯೆಗಳಲ್ಲಿ ಬಳಸುತ್ತಾರೆ.
ಮ್ಯಾಟರ್ ವೇವ್ಸ್ – ವಸ್ತು ಅಲೆಗಳು – ವಸ್ತುವಿನಲ್ಲಿರುವ ಕಣ(ಪ್ರೋಟಾನು, ನ್ಯೂಟ್ರಾನು ಮುಂತಾದವು)ಗಳಿಗೆ ಸಂಬಂಧಪಟ್ಟ ಅಲೆಗಳು. ಒಂದೊಂದು ಕಣಕ್ಕೂ ತನ್ನದೇ ಆದ ನಿರ್ದಿಷ್ಟ ಅಲೆ ಇರುತ್ತದೆ.
Like us!
Follow us!