ಜೀವನದಲ್ಲಿ ನಮಗೆ ಕಷ್ಟಸುಖ, ನೋವು ನಲಿವುಗಳನ್ನು ಹಂಚಿಕೊಳ್ಳಲು ಬಂಧುಗಳು ಬೇಕು. ಬಂಧುಗಳು ಅಂದರೆ ನೆಂಟರು, ಸಂಬಂಧಿಕರು. ನಮಗೆ ಯಾರ ಜೊತೆ ಬಂಧವಿರುತ್ತದೋ ಅವರು ಬಂಧುಗಳು. ಎಷ್ಟು ಹಣಕಾಸು, ಐಶ್ವರ್ಯ, ವೈಭವ ಇದ್ದರೇನಂತೆ, ಜೊತೆಯಾಗಿ ಅರ್ಧ ಲೋಟ ಕಾಫಿ ಕುಡಿಯಲು, ನೋವಾದಾಗ ಹೆಗಲಿಗೊರಗಿ ಅಳಲು, ಖುಷಿಯಾದಾಗ ತಕ್ಷಣ ಅದನ್ನು ಹಂಚಿಕೊಳ್ಳಲು, ಹಬ್ಬ-ಹರಿದಿನಗಳಲ್ಲಿ ಜೊತೆಯಾಗಿ ಉಣ್ಣಲು ನಮಗೆ ಯಾರೂ ಇಲ್ಲ ಅಂದರೆ ನಾವು ಖಂಡಿತವಾಗಿಯೂ ಬಡವರೇ. ಅಲ್ಲವೆ? ಈ ಗಾದೆಮಾತು ಬದುಕಿನ ಬಹುಮುಖ್ಯ ಸಂಗತಿಯೊಂದನ್ನು ಬಹಳ ಅರ್ಥಪೂರ್ಣವಾಗಿ ಹೇಳುತ್ತಿದೆ.
Kannada proverb – Bandhugalilladiro badathana endhiguu beda ( May the poverty of not having relatives never inflict us).
One may have a lot of riches, namely money, a big house, gold, silk, cars etc. But if he/she has no one to share his/her joys and sorrows, that person is not rich in the real sense. Human beings need and thrive in close bonds.To share a cup of coffee, to break a good news, to weep over a shoulder when we are sad, don’t we need people? Therefore it is important to have and maintain our relationship with people related to us by blood, love or friendship. This is why the wise proverb points out that it is a state poverty if we don’t have relatives in life. Makes sense. Isn’t it?
Like us!
Follow us!