ಲೇಡನ್ ಜಾರ್  – ಲೇಡನ್ ಪಾತ್ರೆ – ಪೂರ್ವಕಾಲದ ಒಂದು ರೀತಿಯ ವಿದ್ಯುತ್ ಸಂಗ್ರಾಹಕ. ಇದನ್ನು ಡಚ್ ಲ್ಯಾಂಡಿನ ಲೇಡನ್ ಎಂಬ ಸ್ಥಳದಲ್ಲಿ 1745ರಲ್ಲಿ ನಿರ್ಮಿಸಿದ್ದರು‌. ಇದರಲ್ಲಿ ಒಂದು ಗಾಜಿನ ಪಾತ್ರೆಯ ಹೊರ ಮೇಲ್ಮೈಗೆ ಒಂದು ಲೋಹದ ತೆಳುಹಾಳೆಯನ್ನು ಹೊದಿಸಿರುತ್ತಿದ್ದು, ಒಳ ಮೇಲ್ಮೈಗೂ ಇಂಥದೇ ಹಾಳೆಯನ್ನು ಹಾಕಿ ಮುಚ್ಚಿರುತ್ತಿದ್ದರು‌. ಒಳ ಮೇಲ್ಮೈ ಹೊದಿಕೆಯ ಲೋಹವನ್ನು ಮುಕ್ತವಾಗಿ ತೂಗಾಡುತ್ತಿದ್ದ ಸರಪಣಿಯೊಂದು ಸ್ಪರ್ಶಿಸುತ್ತಿತ್ತು.