ಜೀವನವು ಎಷ್ಟು ಸಂಕೀರ್ಣ ಹಾಗೂ ಅನೂಹ್ಯ ಎಂಬುದು ಎಲ್ಲ ಪ್ರಬುದ್ಧ ವಯಸ್ಕರಿಗೂ, ಒಂದಲ್ಲ ಒಂದು ಸಲ ಭಾಸವಾಗಿಯೇ ಆಗುವ ಸತ್ಯ. ಹೀಗಾಗಿ ವಿನಯ ಹಾಗೂ ನಿರಂತರ ಕಲಿಕೆಯ ಮನ:ಸ್ಥಿತಿ ಮಾತ್ರ ಜೀವನದ ಅಸಾಧ್ಯ ಏರುತಗ್ಗುಗಳ ಪಯಣದಲ್ಲಿ ನಮ್ಮ ಆಧಾರಗಳಾಗಬಲ್ಲವು. ಕಲಿಕೆ ಮುಖ್ಯ ಎಂದಾದಾಗ ನಾವು ಕಲಿಸುವವರ ವಯಸ್ಸು, ವಿದ್ಯೆ, ಸ್ಥಾನಮಾನ ನೋಡದೆ ಕಲಿಯಬೇಕು. ಅದರಲ್ಲೂ ವಯಸ್ಕ ಜೀವನದ ಇಕ್ಕಟ್ಟುಗಳಿಗೆ ಇನ್ನೂ ಪರಿಚಿತರಾಗದ ಚಿಕ್ಕ ಮಕ್ಕಳು ತಮ್ಮ ಬೆರಗು, ನಗು, ಸರಳ-ಮುಗ್ಧ ಮನೋನೆಲೆಗಳಿಂದ ಜೀವನದ ಬಗ್ಗೆ ಅತ್ಯಂತ ನೂತನ ಹಾಗೂ ಅನಿರೀಕ್ಷಿತ ಒಳನೋಟಗಳನ್ನು, ಮತ್ತು ಕಠಿಣ ಅನ್ನಿಸುವ ಸಮಸ್ಯೆಗಳಿಗೆ ಸರಳ ಪರಿಹಾರಗಳನ್ನು ಕೊಡಬಲ್ಲರು. ಹೀಗಾಗಿ ಈ ಗಾದೆಮಾತು ಬುದ್ಧಿವಂತಿಕೆಯ (ಯುಕ್ತಿಯ) ಮಾತನ್ನು ‘ಮಕ್ಕಳಿಂದಾದರೂ ತಿಳ್ಕೋ’ ಎಂಬ ಯುಕ್ತವಾದ ಕಿವಿಮಾತನ್ನು ಹೇಳಿದೆ.
Kannada proverb – If it is an intelligent thing, you must learn, even from children.
Life being so unpredictable and complex, the attitude of eternal learning is our only solace. Therefore we should make it a point to keep learning. Whether it is a child, villager or an old man they might have something valuable to teach. Children especially can have a way of looking at life with fresh eyes, therefore they can make good teachers. Therefore this proverb is teaching us something which is very wise and sensible.
Like us!
Follow us!