ಅಡಿಗೆ ಬಲ್ಲ ಗಂಡಸರನ್ನು ಮದುವೆಯಾದ ಹೆಂಗಸರ ಪಾಡು ಯಾರಿಗೂ ಬೇಡ. ಏನು ಮಾಡಿದರೂ ‘ಹೀಗಿರಬೇಕಿತ್ತು, ಹಾಗಿರಬೇಕಿತ್ತು, ಇದಕ್ಕೆ ಉಪ್ಪು ಜಾಸ್ತಿ ಆಯ್ತು, ಅದಕ್ಕೆ ಖಾರ ಕಡಿಮೆ ಆಯ್ತು, ಸಿಹಿತಿಂಡಿ ಮಾಡೋ ಹದಾನೇ ಗೊತ್ತಿಲ್ಲ ನಿಂಗೆ”…..ಹೀಗೆ ಒಂದಲ್ಲ ಒಂದು ಟೀಕಾಪ್ರಹಾರ ಆಗುತ್ತಲೇ ಇರುತ್ತದೆ, ಆ ಹೆಂಡತಿಯ ಮೇಲೆ.‌ ಇದೇ ರೀತಿಯಲ್ಲಿ, ಎಲ್ಲೇ ಆಗಲಿ ಕೆಲಸ ಚೆನ್ನಾಗಿ ಬರುವ ಒಬ್ಬ ವ್ಯಕ್ತಿಯ ಕೈಕೆಳಗೆ ಕೆಲಸಕ್ಕೆ ಸೇರಿದರೆ ಆ ಕೆಲಸಗಾರನಿಗೂ ಕೆಲಸವನ್ನು ‘ಸರಿಯಾಗಿ’ ಮಾಡುವ ಬಗೆಗೆ ಟೀಕೆ-ಟಿಪ್ಪಣಿ ತಪ್ಪಿದ್ದಲ್ಲ.‌ ಹೀಗಾಗಿ ಈ ಗಾದೆಮಾತು ನಿಜ ಜೀವನದ ಒಂದು ಸಾಮಾನ್ಯಅನುಭವಕ್ಕೆ ಕನ್ನಡಿ ಹಿಡಿದಿದೆ ಅನ್ನಿಸುತ್ತೆ. ಅಲ್ಲವೆ?

Kannada proverb : Adige ballavana hendathiyagabaaradu,  kelasa ballavana aalagabaradu (Don’t end up being the wife of a man who knows cooking, and do not work under a man who knows the job).

 It is observed in the course of life that if a woman has a husband who himself is a good cook, she can never get appreciation for her cooking. Similarly, if you become the servant of a man who knows the job, you are susceptible to the continuous corrections and comments he will be making. Therefore, this proverb depicts the reality one faces in life.