ಕೆಲವು ಸಲ ಮನುಷ್ಯರು, ತಮಗೆ ಆದ ತೀವ್ರ ನೋವು, ಸಂಕಟ, ಅವಮಾನಗಳನ್ನು ನುಂಗಿಕೊಂಡು ಏನೂ ಹೇಳದೆ, ಪ್ರತಿಕ್ರಯಿಸದೆ, ಹಾಗೇ ಸುಮ್ಮನಿದ್ದುಬಿಡುತ್ತಾರೆ.‌ ಮೇಲ್ನೋಟಕ್ಕೆ ಅವರು ಆರಾಮಾಗಿ ಇದ್ದಾರೆ ಅನ್ನಿಸಿದರೂ ಆ ಸಂಕಟ ಒಳಗೇ ಅವರನ್ನು ತೀವ್ರವಾಗಿ ಸುಡುತ್ತಿರುತ್ತದೆ. ಆದರೆ ಕಾಲಾನಂತರ ಈ ಸಂಕಟವು ಯಾವುದಾದರೂ ದೈಹಿಕ, ಮಾನಸಿಕ ರೋಗವಾಗಿ ಪರಿವರ್ತನೆ ಆಗಬಹುದು‌. ಅಥವಾ ಈ ಸಂಕಟದ ಕಾರಣದಿಂದಾಗಿ ಆ ವ್ಯಕ್ತಿಯು ಇಡೀ ಲೋಕದ ವಿರುದ್ಧ ತಿರುಗಿ ಬೀಳಬಹುದು‌. ಆಧುನಿಕ ಮನೋವಿಜ್ಞಾನ ಸಹ ‘ತಾನು ನುಂಗಿಕೊಂಡ ಸಂಕಟವು ವ್ಯಕ್ತಿಯ ಮಟ್ಟಿಗೆ ವಿಷಕಾರಿಯಾಗುತ್ತದೆ, ಅವನು/ಅವಳು ಅದನ್ನು ಹೇಗಾದರೂ ಹೊರಹಾಕಬೇಕು’ ಎನ್ನುತ್ತದೆ. ಹಿರಿಯರ ಲೋಕಜ್ಞಾನ ಮತ್ತು ಆಧುನಿಕ ವಿಜ್ಞಾನ ಎರಡೂ ಸಹಮತಿ ಹೊಂದಿದ ಒಂದು ಉತ್ತಮ ಉದಾಹರಣೆ ಇದು‌‌.‌ ಅಲ್ಲವೆ?

Kannada proverb – Nungikonda sankara benkigintha hechchu (The anguish you swallowed is more harmful than fire).

Sometimes a person when demeaned or insulted unjustly by others just swallows the anguish experienced without a word of retaliation. The deep pain or anguish which is internalised this way, will not stay put. It corrodes his/her interiors or makes him or her hate the entire world. Therefore it is better to express the feelings of anger or sadness caused by life situations in a healthy way. Modern psychology too supports this idea of venting it out before it destroys us. This is the case of folk wisdom and modern science being on the same page. Isn’t it?