ಧೈರ್ಯ ಎಂಬುದು ಜೀವನದಲ್ಲಿ ತುಂಬ ಮುಖ್ಯ. ಈಜು ಕಲಿಯುವುದರಿಂದ ಹಿಡಿದು ಮೇಲಧಿಕಾರಿಗಳು ಮಾಡಿದ ತಪ್ಪನ್ನು ತಪ್ಪು ಎಂದು ಅವರ ಎದುರಿಗೇ ಅನ್ನುವುದರ ತನಕ, ವಾಹನ ತುಂಬಿರುವ ರಸ್ತೆ ದಾಟುವುದರಿಂದ ಹಿಡಿದು, ಕಹಿಯಾದರೂ ಸತ್ಯವನ್ನು ಬಾಯಿಬಿಟ್ಟು ಹೇಳುವ ತನಕ  ಪ್ರತಿಯೊಂದಕ್ಕೂ ಧೈರ್ಯ ಬೇಕು‌. ಅದಕ್ಕೇ ಧೈರ್ಯವನ್ನು ಎಲ್ಲ ಸದ್ಗುಣಗಳ ತಾಯಿ ಅನ್ನುತ್ತದೆ ಒಂದು ಇಂಗ್ಲಿಷ್ ಸೂಕ್ತಿ. ಆಸ್ತಿಕರು ಅಂದರೆ ದೇವರನ್ನು ನಂಬುವವರು ಸಹ ಧೈರ್ಯ ಇದ್ದವರಿಗೆ ಮಾತ್ರ ದೈವವು ಸಹಾಯ ಮಾಡುತ್ತದೆ ಎನ್ನುತ್ತಾರೆ! ಅಂದರೆ ಯಾವುದೇ ಸವಾಲಿನ ಕೆಲಸವಾದರೂ ಮೊದಲ ಹೆಜ್ಜೆಯನ್ನು ಮನುಷ್ಯನೇ ಇಡಬೇಕು, ಆಗ ಮುಂದಿನ ಒಂಬತ್ತು ಹೆಜ್ಜೆಗಳಿಗೆ ದೈವಸಹಾಯ ಒದಗುತ್ತದೆ ಎಂಬ ನಂಬಿಕೆ ಇದೆ. ಒಟ್ಟಿನಲ್ಲಿ ಈ ಗಾದೆಮಾತು ಧೈರ್ಯ ಎಂಬ ಸದ್ಉಣದ ಪ್ರಾಮುಖ್ಯವನ್ನು ಹೇಳುತ್ತದೆ. 

Kannada proverb – Dhairya viddavarigee daivada sahaya (The courageous only are helped by God). 

Courage is the most important virtue in a human being because it is known as the mother of all virtues. If we closely observe we understand that our life seems to be a joint project of both human being and God/fate. In life’s difficulties it is said that if we move forward with courage even God/fate tender’s his help. This way the above proverb stresses on the importance of courage in our lives.