ಕೆಲವು ಸಲ ನಾವು ಮಾಡಬೇಕಾದ ಮುಖ್ಯ ಕೆಲಸಕ್ಕಿಂತ ಅದರ ಜೊತೆಗಿರುವ ಅಡ್ಡ ಕೆಲಸಗಳೇ ಹೆಚ್ಚು ಶ್ರಮ, ಸಮಯ ತೆಗೆದುಕೊಳ್ಳುತ್ತವೆ. ಉದಾಹರಣೆಗೆ ನಾವು ಅಧ್ಯಾಪಕರು ತರಗತಿ ತೆಗೆದುಕೊಳ್ಳುವಾಗ ವಿದ್ಯಾರ್ಥಿಗಳು ಬಂದು ಕೂರುವುದು, ಸ್ಥಳವಿಲ್ಲ, ಬೆಂಚಿಲ್ಲ ಎಂದು ಗದ್ದಲ ಮಾಡುವುದು, ಸುಮ್ಮನೆ ಅತ್ತಿಂದಿತ್ತ ಇತ್ತಿಂದತ್ತ ತಾರಾಡುತ್ತಾ ಸ್ಥಳ ಹುಡುಕುವುದು ಮಾಡುತ್ತಿದ್ದರೆ ಪಾಠ ಶುರು ಮಾಡುವುದೇ ಕಷ್ಟವಾಗುತ್ತದೆ. ಅಮೂಲ್ಯವಾದ ಸಮಯವು ಹೀಗೆ ವ್ಯರ್ಥವಾದ ಗಲಗು ಗದ್ದಲಗಳಲ್ಲಿ ಹೋಗುವಾಗ ನಾವು ಅಧ್ಯಾಪಕರು ಈ ಗಾದೆಮಾತು ನೆನಪಿಸಿಕೊಂಡು ಪೇಚಾಡುತ್ತೇವೆ! ಈ ಗಾದೆಮಾತಿನಿಂದ ನಾವು ಕಲಿಯಬೇಕಾದ ಪಾಠವೇನೆಂದರೆ ನಮ್ಮ ಅಮೂಲ್ಯ ಶಕ್ತಿ ಮತ್ತು ಸಮಯವನ್ನು ನಾವು ಸರಿಯಾದ ರೀತಿಯಲ್ಲಿ ವ್ಯಯಿಸಬೇಕು, ಅವು ವ್ಯರ್ಥ ವಿಷಯಗಳಲ್ಲಿ ದುಂದಾಗಿ ಹೋಗದಂತೆ ಎಚ್ಚರಿಕೆ ವಹಿಸಬೇಕು ಎಂಬುದು.
Kannada proverb – Maduve kharchella chapparadalle (Money reserved for marriage spent away just for porch decoration).
Sometimes our energy which should have been invested in a main event, is spent away for some not so important side events. For example, if students take too much time in settling down in the classroom there will not be enough time for the actual important lessons. This is why we need to be careful while we spend our precious time and energy. In other words, we should not waste our resources in climbing the wrong mountain.
Like us!
Follow us!