ಕ್ರಮವಿಧಿ – ನಿಖರವಾದ ಸೂಚನಾಪಟ್ಟಿಯೊಂದನ್ನು ಇಟ್ಟುಕೊಂಡು ಹಂತಹಂತವಾಗಿ ಸಮಸ್ಯೆಯೊಂದನ್ನು ಪರಿಹರಿಸುವ ಗಣಿತ ವಿಧಾನ.
ಮಿಶ್ರಲೋಹ : ಎರಡು ಅಥವಾ ಅದಕ್ಕಿಂತ ಹೆಚ್ಚು ಲೋಹಗಳಿಂದ ಕೂಡಿದ ವಸ್ತು.
ಅಲ್ನಿಕೋ : ಕಬ್ಬಿಣ, ಅಲ್ಯುಮಿನಿಯಂ, ನಿಕ್ಕಲ್, ಕೋಬಾಲ್ಟ್ ಮತ್ತು ತಾಮ್ರವನ್ನು ಒಳಗೊಂಡ ಒಂದು ಸರಣಿಯ ವ್ಯಾಪಾರೀನಾಮ. ಇದನ್ನು ಶಾಶ್ವತ ಅಂiiಸ್ಕಾಂತಗಳನ್ನು ಮಾಡಲು ಬಳಸುತ್ತಾರೆ.
ಆಲ್ಫಾ ಪ್ರಕಾಶ : ಒಂದು ವಸ್ತುವನ್ನು ಆಲ್ಪಾ ಕಣಗಳ ಕಿರಣ ಸಮೂಹಕ್ಕೆ ಒಡ್ಡುವುದು.
ಶಕ್ತಿ ವಿನಿಮಯರಹಿತ ಬದಲಾವಣೆ ವ್ಯವಸ್ಥೆಯಲ್ಲಿರುವ ಶಕ್ತಿಯು ಹೊರಗೆ ಹೋಗದೆ, ಹೊರಗಿನಿಂದ ಶಕ್ತಿಯು ಒಳಗೆ ಪ್ರವೇಶಿಸದೆ ನಡೆಯುವಂತಹ ಪ್ರಕ್ರಿಯೆ.
ಆಕರ್ಷಣ ತಂತಿ – ಬಾನುಲಿ, ದೂರದರ್ಶನಗಳಲ್ಲಿ ವಿದ್ಯುತ್ ಕಾಂತೀಯ ತರಂಗಗಳನ್ನು ಆಕರ್ಷಿಸಲು ಬಳಸುವ ತಂತಿ.
ವಾಯುಚಲನ ಶಾಸ್ತ್ರ ವಾಯುವಿನಲ್ಲಿ ವಿಮಾನ, ರಾಕೆಟ್ಟು, ಕ್ಷಿಪಣಿ ಮುಂತಾದ ವಸ್ತುಗಳ ಚಲನೆ ಮತ್ತು ನಿಯಂತ್ರಣವನ್ನು ಕುರಿತ ಅಧ್ಯಯನ.
ವಾಯುಜಿಡ್ಡು ಒಂದು ಅನಿಲದಲ್ಲಿ ಒಂದು ಘನವಸ್ತು ಅಥವಾ ದ್ರವವಸ್ತುವು ಅಲ್ಲಲ್ಲಿ ಹರಡಿಕೊಂಡ ಸ್ಥಿತಿಯಲ್ಲಿ, ಸುಲಭವಾಗಿ ಬೇರ್ಪಡಿಸಲಾಗದಂತೆ ಇದ್ದುಬಿಡುವುದು.
ವಾಯುಮಂಡಲ – ಭೂಮಿಯ ಸುತ್ತ ಇರುವ ವಾಯುಮಂಡಲ ಮತ್ತು ಅದರಾಚೆಗೆ ಇರುವ ಆಕಾಶ.
ಬಿಂಬದೋಷ – ಒಂದು ಮಸೂರ(ಉಬ್ಬು ಗಾಜು, ಅಥವಾ ತಗ್ಗು ಗಾಜು) ಅಥವಾ ಕನ್ನಡಿಯಿಂದ ರೂಪುಗೊಂಡಂತಹ ಬಿಂಬದಲ್ಲಿರುವ ದೋಷ.