ರಂಗುರಹಿತ ಬಣ್ಣ – ಯಾವುದೇ ರಂಗಿಲ್ಲದ ಬಣ್ಣ, ಅಂದರೆ ಕಪ್ಪು, ಬಿಳಿ ಅಥವಾ ಬೂದು ಬಣ್ಣ
ಸಂಗ್ರಾಹಕ ಕೋಶ – ವಿದ್ಯುತ್ ಹರಿಸುವುದರ ಮೂಲಕ ವಿದ್ಯುದಂಶ(ಚಾರ್‍ಜ್)ವನ್ನು ನೀಡಬಹುದಾದ ವಿದ್ಯುತ್ ಕೋಶ ಅಥವಾ ಬ್ಯಾಟರಿ ಇದು.
ವಕ್ರಗೊಳಿಸದ ಗುಣ – ವಸ್ತುಗಳಲ್ಲಿರುವ ಒಂದು ಗುಣಲಕ್ಷಣ. ಒಂದು ವಸ್ತುವು ತನ್ನ ಮೇಲೆ ಬಿದ್ದಂತಹ ಬೆಳಕನ್ನು ವಕ್ರೀಭವನಕ್ಕೆ(ರಿಫ್ರ್ಯಾಕ್ಷನ್) ಒಳಪಡಿಸದ ಒಂದು ಗುಣವಿದು.
ವಿಕಿರಣ ಪ್ರಚೋದನೆ _ ಒಂದು ವಸ್ತುವಿನಲ್ಲಿ ವಿಕಿರಣ(ರೇಡಿಯೇಷನ್)ವನ್ನು ಪ್ರಚೋದಿಸುವ ಪ್ರಕ್ರಿಯೆ.
ಪರಮ ಶೂನ್ಯ – ಸೈದ್ಧಾಂತಿಕವಾಗಿ ಸಾಧ್ಯವಾಗಬಹುದಾದ ಅತಿ ಕನಿಷ್ಠ ಉಷ್ಣತೆ.
ಶಬ್ಧವಿಜ್ಞಾನ – ಶಬ್ಧವನ್ನು ಕುರಿತು ಅಧ್ಯಯನ ಮಾಡುವ ಭೌತವಿಜ್ಞಾನದ ಶಾಖೆ.
ಅಂಟಿಕೊಳ್ಳುವಿಕೆ – ಒಂದರಂತೆ ಒಂದಿಲ್ಲದ ಕಣಗಳು ಅಥವಾ ಮೇಲ್ಮೈ ಗಳು ಪರಸ್ಪರ ಅಂಟಿಕೊಳ್ಳುವ ಪ್ರವೃತ್ತಿ.
ಆಲ್ಫಾ ಕಣಗಳು – ಎರಡು ಪ್ರೋಟಾನುಗಳು ಮತ್ತು ಎರಡು ನ್ಯೂಟ್ರಾನುಗಳು ಒಟ್ಟಿಗೆ ಬೆಸೆದುಕೊಂಡು ಉಂಟಾಗಿರುವ ಕಣ. ಹೀಲಿಯಂ ಅಣುವಿನ ಬೀಜಕೇಂದ್ರಕ್ಕೆ ಸಮನಾದದ್ದು.
ಆಕಾರರಹಿತ ಘನವಸ್ತು – ಹರಳುಗಟ್ಟದಿರುವಂತಹ ಘನವಸ್ತು. ಇದಕ್ಕೆ ನಿಶ್ಚಿತ ಆಕಾರ ಇರುವುದಿಲ್ಲ.
ಪ್ರತಿ ಕಣ – ಒಂದು ಕಣವು ಹೊಂದಿರುವಷ್ಟೇ ದ್ರವ್ಯರಾಶಿ ಮತ್ತು ಗಿರಕಿ(ಸ್ಪಿನ್)ಗಳನ್ನು ಹೊಂದಿದ್ದರೂ ಅದಕ್ಕೆ ವಿರುದ್ಧವಾದ ವಿದ್ಯುದಂಶವನ್ನು ಹೊಂದಿರುವ ಕಣ.