Hot spot 

ಹಾಟ್ ಸ್ಪಾಟ್ – ಗರಿಷ್ಠ ತಾಪ ಬಿಂದು – ತನ್ನ ಸುತ್ತಮುತ್ತಲ ಪ್ರದೇಶಗಳಿಗೆ ಹೋಲಿಸಿದರೆ ತುಂಬ ಹೆಚ್ಚು ತಾಪಮಾನವುಳ್ಳ ಒಂದು ಪ್ರದೇಶ.

Hot wire microphone

ಹಾಟ್ ವಯರ್ ಮೈಕ್ರೋಫೋನ್ – ಧ್ವನಿಶಕ್ತಿ ಮಾಪಕ – ಶಬ್ಧದ ಅಲೆಗಳ ಎತ್ತರ ಮತ್ತು ತೀಕ್ಷ್ಣತೆಯನ್ನು ಅಳೆಯಲು ಬಳಸುವಂತಹ ಉಪಕರಣ. ಇದರಲ್ಲಿ ವಿದ್ಯುತ್ತಿನ ಮೂಲಕ  ಕಾಯಿಸಲಾದ ಒಂದು ತಂತಿಗೆ ಶಬ್ಧದ ಅಲೆಗಳನ್ನು ಹಾಯಿಸಿದಾಗ ಅದರ ಪ್ರತಿರೋಧವು ಕಡಿಮೆಯಾಗುವುದನ್ನು ಅವಲಂಬಿಸಿ‌, ಶಬ್ಧದ ತೀಕ್ಷ್ಣತೆಯನ್ನು ಅಳೆಯಲಾಗುತ್ತದೆ.

Hot wire gauge

ಹಾಟ್ ವೈರ್ ಗಾಜ್ – ಬಿಸಿತಂತಿಯ ಅಳತೆ ಉಪಕರಣ – ಒಂದು ಅನಿಲವು ಬಿಸಿತಂತಿಯನ್ನು ತಣ್ಣಗಾಗಿಸುವುದನ್ಬು ಅವಲಂಬಿಸಿ‌, ಒತ್ತಡವನ್ನು ಅಳೆಯುವ ಉಪಕರಣ.

Hot laboratory

ಹಾಟ್ ಲ್ಯಾಬೊರೇಟರಿ – ಸುಡು ಪ್ರಯೋಗಾಲಯ – ವಿಕಿರಣ ವಸ್ತುಗಳಿಗೆ ಸಂಬಂಧಿಸಿದ ಪ್ರಯೋಗಗಳನ್ನು ಮಾಡಲು ವಿಶೇಷವಾಗಿ ವಿನ್ಯಾಸಗೊಳಿಸಿದ ಪ್ರಯೋಗಾಲಯ. ‌ಈ ಲೋಹಗಳ ರಾಸಾಯನಿಕ ಕ್ರಿಯಾತ್ಮಕತೆಯು (ರಿಯಾಕ್ಟಿವಿಟಿ) ತುಂಬಾ ಹೆಚ್ಚಿನ ಮಟ್ಟದಲ್ಲಿರುತ್ತದೆ.

Hot cathode tube

ಹಾಟ್ ಕ್ಯಾಥೋಡ್ ಟ್ಯೂಬ್ – ಬಿಸಿ ಋಣವಿದ್ಯುದ್ವಾರ ಕೊಳವೆ ಅಥವಾ ಬಿಸಿ‌ ಕ್ಯಾಥೋಡು – ವಿದ್ಯುತ್ ಹರಿವಿಗಾಗಿ ಬೇಕಾಗುವಂತಹ ಎಲೆಕ್ಟ್ರಾನುಗಳನ್ನು, ಕಾಯಿಸಿದ ಒಂದು ಭಾಗದಿಂದ ಸರಬರಾಜು ಮಾಡುವ ವ್ಯವಸ್ಥೆಯುಳ್ಳ  ಒಂದು ವಿದ್ಯುತ್ (ಹರಿವಿನ) ಕೊಳವೆ‌.

Hot atom

ಹಾಟ್ ಆಟಂ – ಸುಡು‌ ಅಣು – ಅತ್ಯಂತ ಹೆಚ್ಚಾದ ವಿಕಿರಣ ಚಟುವಟಿಕೆ ಮಾಡುತ್ತಿರುವ ಅಣು. ಇದು ಉದ್ರೇಕಿತ ಸ್ಥಿತಿಯಲ್ಲಿರುತ್ತದೆ ಅಥವಾ ತನ್ನ ಸುತ್ತಲಿನ ವಾತಾವರಣದ ತಾಪಮಾನದಲ್ಲಿ ತನಗೆ ಇರಬಹುದಾದದ್ದಕ್ಕಿಂತ ಹೆಚ್ಚಿನ ಮಟ್ಟದ ಚಲನಶಕ್ತಿಯನ್ನು ಹೊಂದಿರುತ್ತದೆ. ಇದು ಸಾಮಾನ್ಯವಾಗಿ ವಿಕಿರಣ ಕ್ರಿಯೆಗಳ ಫಲಿತವಾಗಿರುತ್ತದೆ.

Horse power ( H.P.)

ಹಾರ್ಸ್ ಪವರ್( H.P.) – ಅಶ್ವ ಶಕ್ತಿ – ಎಫ್.ಪಿ.ಎಸ್. ( ಫುಟ್, ಪೌಂಡ್, ಸೆಕೆಂಡ್) ಮೂಲಮಾನ ವ್ಯವಸ್ಥೆಯಲ್ಲಿ ವಿದ್ಯುತ್ ಸಾಮರ್ಥ್ಯದ ಒಂದು ಮೂಲಮಾನ.‌ ಇದು 746 ವ್ಯಾಟ್ ಗೆ ಸಮ ಅಥವಾ 33,000 ft.lb.per minuteಗೆ ಸಮ.

Horizontal intensity

ಹಾರಿಜಾಂಟಲ್ ಇನ್ ಟೆನ್ಸಿಟಿ‌ – ಅಡ್ಡ ರೇಖೆಯುದ್ಧದ  ತೀವ್ರತೆ – ಭೂಮಿಯ ಮೇಲ್ಮೈಯ ಅಡ್ಡರೇಖೆಯಲ್ಲಿರುವ  ಯಾವುದಾದರೂ ದತ್ತ ಬಿಂದುವಿನಲ್ಲಿ ಅಥವಾ ಅದರ ಮೇಲ್ಮೈಯ ಹತ್ತಿರದ ಬಿಂದುವಿನಲ್ಲಿ ಇರುವಂತಹ ಕಾಂತಕ್ಷೇತ್ರದ ಶಕ್ತಿ.

Hooke’s law

ಹೂಕ್ಸ್ ಲಾ – ಹೂಕ್ ರ ನಿಯಮ – ಈ ನಿಯಮದ ಪ್ರಕಾರ ಒಂದು ವೇಳೆ ಒಂದು ವಸ್ತುವು ವಿರೂಪಗೊಂಡಿದೆಯೆಂದರೆ, ಅದರಲ್ಲಿ ಉಂಟಾದ ವಿರೂಪ ಅಥವಾ ಪೀಡನೆಯು ಅದರ ಮೇಲೆ ಹಾಕಿದ ಒತ್ತಡಕ್ಕೆ ನೇರ ಅನುಪಾತದಲ್ಲಿರುತ್ತದೆ. ಆದರೆ, ಒಂದು ಮಟ್ಟಕ್ಕಿಂತ ಹೆಚ್ಚಿನ ಒತ್ತಡ ಹಾಕಿದರೆ ಆ ವಸ್ತುವು ಹೂಕ್ ರ ನಿಯಮವನ್ನು ಪಾಲಿಸುವುದಿಲ್ಲ.

Homopolar crystal

ಹೋಮೋಪೋಲಾರ್ ಕ್ರಿಸ್ಟಲ್ – ಏಕಧ್ರುವ ಹರಳು ಅಥವಾ ಏಕಧ್ರುವ ಸ್ಫಟಿಕ) – ಕೇವಲ ಸಹಸಂಯೋಗ ( ಕೋವೇಲೆಂಟ್) ಬಂಧಗಳನ್ನು ಹೊಂದಿರುವ ಒಂದು ಹರಳು ಅಥವಾ ಸ್ಫಟಿಕ.

Page 4 of 9

Kannada Sethu. All rights reserved.