Biophysics 

ಜೈವಿಕ ಭೌತಶಾಸ್ತ್ರ  ಜೀವಶಾಸ್ತ್ರೀಯ ವಿದ್ಯಮಾನ(ಆಗುಹೋಗುಗಳಿಗೆ) ಭೌತಶಾಸ್ತ್ರದ ನಿಯಮಗಳನ್ನು ಅನ್ವಯಿಸುವ ಜ್ಞಾನಶಿಸ್ತು.

Biconcave

ಎರಡುತಗ್ಗು ಗಾಜು – ಎರಡು ಕಡೆ ತಗ್ಗು ಇರುವ ಗಾಜು ಅಥವಾ ಮಸೂರ. 

Big bang theory

ಮಹಾ ಸ್ಫೋಟ ಸಿದ್ಧಾಂತ – ಇಡೀ ವಿಶ್ವದ ಎಲ್ಲ ವಸ್ತು ಮತ್ತು ಶಕ್ತಿಗಳು ಭೂತಕಾಲದ ಒಂದು ನಿರ್ದಿಷ್ಟ ಗಳಿಗೆಯೊಂದರಲ್ಲಿ ಸಂಭವಿಸಿದ, ಸಾಂದ್ರವಾದ ಮಹಾ ಮುದ್ದೆಯೊಂದರ ಮಹಾ ಸ್ಫೋಟದಿಂದ ಹುಟ್ಟಿದವು ಎಂದು ಹೇಳುವ, ವಿಶ್ವೋತ್ಪತ್ತಿಯನ್ನು ಕುರಿತ ಸಿದ್ಧಾಂತ. 

Bimetallic strip 

ದ್ವಿಲೋಹ ಪಟ್ಟಿ – ಪರಸ್ಪರ ಭಿನ್ನವಾದ ವಿಸ್ತಾರ ಸಾಮರ್ಥ್ಯ ಹೊಂದಿರುವ ಎರಡು ಲೋಹಗಳನ್ನು ಒಟ್ಟಿಗೆ ಬೆಸೆದಿರುವ ಅಥವಾ ಜೋಡಿಸಿರುವ ಒಂದು ಪಟ್ಟಿ. 

Bimorph cell 

ದ್ವಿರೂಪೀ ಕೋಶ – ಒಟ್ಟಿಗೆ ಬೆಸೆದಂತಹ `ಒತ್ತಡಮೂಲ ವಿದ್ಯುದುತ್ಪಾದಕ ವಸ್ತುಗಳ (ಉದಾಹರಣೆಗೆ ಸಕ್ಕರೆ) ಎರಡು ತಗಡುಗಳನ್ನು ಅಥವಾ ಹಾಳೆಗಳನ್ನು ಹೊಂದಿರುವ ಒಂದು ಉಪಕರಣ. ವಿದ್ಯುತ್ ಹಾಯಿಸಿದಾಗ ಇವುಗಳಲ್ಲಿ ಒಂದು ಹಿಗ್ಗಿ ಇನ್ನೊಂದು ಕುಗ್ಗುವುದರಿಂದ ಇದು ಬಗ್ಗುತ್ತದೆ.

Betatron

ಬೀಟಾ ವೇಗವರ್ಧಕ  ಎಲೆಕ್ಟ್ರಾನುಗಳು ಅತಿ ಹೆಚ್ಚು ಶಕ್ತಿ ಅಂದರೆ ೩೦೦ ಎಂಇವಿ ಅಥವಾ ಇನ್ನೂ ಹೆಚ್ಚು ಶಕ್ತಿ ಪಡೆಯುವಂತೆ ಅವುಗಳ ವೇಗವನ್ನು ಹೆಚ್ಚಿಸುವ ಒಂದು ಉಪಕರಣ. 

Binding energy

(ಬೀಜಕೆಂದ್ರದ) ಒಟ್ಟುಗೂಡಿಸುವ ಶಕ್ತಿ – ಕಣಗಳ ಒಂದು ಸಮೂಹದಿಂದ ಕಣವೊಂದನ್ನು ಪ್ರತ್ಯೇಕಿಸಲು ಬೇಕಾಗುವ ಶಕ್ತಿ. ಒಂದು (ಪರಮಾಣುವಿನ) ಬೀಜಕೇಂದ್ರದ ದ್ರವ್ಯರಾಶಿಗೂ ಅದರೊಳಗಿನ ಕಣಗಳ ದ್ರವ್ಯರಾಶಿಯ ಮೊತ್ತಕ್ಕೂ ಇರುವ ವ್ಯತ್ಯಾಸ.

Bequerel Rays

ಬೆಕ್ವೆರಲ್ ಕಿರಣಗಳು – ಯುರೇನಿಯಂ ಸಂಯುಕ್ತಗಳು ತಾವಾಗಿ ತಾವೇ ಸಹಜವಾಗಿ ಹೊರಸೂಸುವ ಆಲ್ಫಾ, ಬೀಟಾ ಮತ್ತು ಗಾಮಾ ಕಿರಣಗಳು.

Bending moment

ಬಗ್ಗಿಸುವ ತಿರುಗುಬಲ – ವಸ್ತುವೊಂದನ್ನು ಬಗ್ಗುವಂತೆ ಮಾಡುವ ಬಲ ಅಥವಾ ಒಂದು ತೊಲೆಯ ಒಂದು ಬದಿಯ ಮೇಲೆ ವರ್ತಿಸುವ ಎಲ್ಲ ಬಲಗಳ ಮೊತ್ತ.

Beta decay

ಬೀಟಾ ಕ್ಷಯ – ಪರಮಾಣು ಬೀಜಕೇಂದ್ರವು ಎಲೆಕ್ಟ್ರಾನಿನಂತಹ ಕಣವೊಂದನ್ನು ಹೊರಚೆಲ್ಲುತ್ತಾ ಕ್ಷಯಗೊಳ್ಳುವ ಒಂದು ರೀತಿಯ ವಿಕಿರಣ ಪ್ರಕ್ರಿಯೆ.

Page 4 of 6

Kannada Sethu. All rights reserved.