ವಿದ್ಯುತ್ ಪಕ್ಪಪಾತ ವಿದ್ಯುನ್ಮಾನ ಉಪಕರಣವೊಂದರಲ್ಲಿ ವಿದ್ಯುತ್ ಉಪಕರಣವೊಂದಕ್ಕೆ ಇಚ್ಛಿಸಿದ ಗುಣಲಕ್ಷಣ ಪಡೆಯಲು ನೀಡಿದ ವಿದ್ಯುತ್ ಸಾಮರ್ಥ್ಯ.
ಪಟ್ಟಿ ವಿಸ್ತಾರ ಒಂದು ಉಪಕರಣದ ಆಕರ್ಷಣ ತಂತಿಯು ಸರಾಗವಾಗಿ ಸ್ವೀಕರಿಸಬಲ್ಲ ಅಥವಾ ನಿರ್ವಹಿಸಬಲ್ಲ ಆವರ್ತನಗತಿ(ಫ್ರೀಕ್ವೆನ್ಸಿ)ಗಳು ಅಥವಾ ತರಂಗಾಂತರ(ವೇವ್‌ಲೆಂಗ್ತ್)ಗಳ ಒಂದು ಕಟ್ಟು.
ವಾಯುಭಾರ ಮಾಪಕ ವಾತಾವರಣದ ಒತ್ತಡವನ್ನು ಅಳೆಯುವ ಉಪಕರಣ.
ವಿದ್ಯುತ್ ಸಂಗ್ರಾಹಕ – ಹಲವು ವಿದ್ಯುತ್‌ಕೋಶಗಳನ್ನು ಒಂದು ಸರಣಿಯಲ್ಲಿ ಜೋಡಿಸಿರುವಂತಹ ವ್ಯವಸ್ಥೆ.
ಕಿರಣಪುಂಜ ಒಂದೇ ದಿಕ್ಕಿನಲ್ಲಿ ಚಲಿಸುತ್ತಿರುವ ಆದರೆ ಸದಾ ಕಾಲ ಸಮಾನಾಂತರವಾಗಿಯೇನೂ ಇರದ ಬೆಳಕಿನ ಅಥವಾ ಇನ್ನಿತರ ವಿಕಿರಣಗಳ ಕಿರಣಸಮೂಹ.
ನಿಯತ ಹೊಡೆತ ಎರಡು ಭಿನ್ನ ಆವರ್ತನಗತಿಗಳಿರುವ ಎರಡು ಅಲೆಗಳು ಒಟ್ಟಿಗೆ ಸೇರಿದಾಗ ಶಬ್ಧದ(ಅಥವಾ ಬೇರೆ) ಅಲೆಗಳ ತೀಕ್ಷ್ಣತೆಯಲ್ಲಿ ಉಂಟಾಗುವ ನಿಯತವಾದ ಏರುಪೇರು.
ಕ್ಷಿಪಣಿ ಪಥ ಅಧ್ಯಯನ – ಮುಂದಕ್ಕೆಸೆಯಲಾಗುವ ವಸ್ತುಗಳ ಅದರಲ್ಲೂ ಕ್ಷಿಪಣಿಗಳ ಪಥಚಲನೆಯ ಅಧ್ಯಯನ.
ಹಿನ್ನೆಲೆ ವಿಕಿರಣ – ಭೂಮಿಯ ಮೇಲ್ಮೈಯಲ್ಲಿ ಮತ್ತು ವಾತಾವರಣದಲ್ಲಿ ಸದಾ ಇರುವ ಸಹಜವಾದ, ಕಡಿಮೆ ತೀಕ್ಷ್ಣತೆಯ, ಪರಮಾಣುಗಳನ್ನು ವಿದ್ಯುತ್‌ಕಣಗಳನ್ನಾಗಿಸುವ ಸಾಮರ್ಥ್ಯವುಳ್ಳ ವಿಕಿರಣ.
ಪಟ್ಟಿಪಟ್ಟಿ ವರ್ಣಪಟಲ – ಹೀರಿಕೊಂಡ ಅಥವಾ ಹೊರಗೆ ಬಿಟ್ಟ ವಿಕಿರಣದಿಂದಾಗಿ ಪಟ್ಟಿಪಟ್ಟಿಯಾಗಿ ತೋರಿಬರುವ ವರ್ಣಪಟಲ.
ಬಾಲ್ಮರ್ ಸರಣಿ – ಜಲಜನಕದ ಪರಮಾಣುಗಳ ವರ್ಣಪಟಲದ ಗೆರೆಗಳ ಅಧ್ಯಯನ.