ನಗರ ಅಥವಾ ಪೇಟೆಯ ರಸ್ತೆಗಳಲ್ಲಿ ಓಡಾಡುವಾಗ ‘ಉಪಹಾರ ಗೃಹ’ ಎಂಬ ಪದವನ್ನು, ಮತ್ತು ಆಹ್ವಾನ ಪತ್ರಿಕೆಗಳಲ್ಲಿ ‘ಸಭೆಗೆ ಮುಂಚೆ ಲಘು ಉಪಹಾರದ ವ್ಯವಸ್ಥೆ ಇದೆ’ ಎಂಬ ಪದಪ್ರಯೋಗಗಳನ್ನು ನಾವೆಲ್ಲ ಗಮನಿಸಿರುತ್ತೇವಲ್ಲ.. ಅದನ್ನು ನೋಡಿದಾಗೆಲ್ಲ ನನ್ನ ಮನಸ್ಸಿನಲ್ಲಿ ಒಂದು ಪ್ರಶ್ನೆ ಚಿಮ್ಮುತ್ತಿತ್ತು. ಇದು ಉಪಹಾರವೋ ಉಪಾಹಾರವೋ ಎಂಬ ಪ್ರಶ್ನೆ ಅದು. ಕನ್ನಡ ಸಾಹಿತ್ಯ ಪರಿಷತ್ತಿನ ಸಂಕ್ಷಿಪ್ತ ಕನ್ನಡ ನಿಘಂಟನ್ನು ನೋಡಿದಾಗ ಗೊಂದಲ ತಿಳಿಯಾಯಿತು. ನಿಘಂಟಿನಲ್ಲಿ ಉಪಹಾರಕ್ಕೂ ಉಪಾಹಾರಕ್ಕೂ ತಿಂಡಿ, ಅಲ್ಪಾಹಾರ ಎಂದೇ ಅರ್ಥವಿದೆ (ಬೇರೆ ಅರ್ಥಗಳ ಜೊತೆಗೆ). ಒಂದೇ ಅರ್ಥ […]
ಗ್ರ್ಯಾವಿಟೇಷನಲ್ ಫೋರ್ಸ್ – ಗುರುತ್ವಾಕರ್ಷಣ ಬಲ – ನಾಲ್ಕು ಮೂಲಭೂತ ಬಲಗಳಲ್ಲಿ ಒಂದು. ಈ ಬಲವು ಎಲ್ಲ ವಸ್ತುಗಳನ್ನೂ ಪ್ರಭಾವಿಸುತ್ತದೆ ಮತ್ತು ಒಂದು ಅನಂತ ಶ್ರೇಣಿ ಹಾಗೂ ವಿಸ್ತಾರಗಳಲ್ಲಿ ವರ್ತಿಸುತ್ತದೆ.
ಗ್ರ್ಯಾವಿಟೇಷನಲ್ ಫೀಲ್ಡ್ – ಗುರುತ್ವ ಕ್ಷೇತ್ರ – ಬೃಹತ್ ಗಾತ್ರವುಳ್ಳ ಒಂದು ವಸ್ತುವಿನ ಸುತ್ತಲಿನ ಪ್ರದೇಶ ಇದು. ಈ ಪ್ರದೇಶದಲ್ಲಿ ಬೇರೆ ವಸ್ತುಗಳು ಆಕರ್ಷಣೆಯನ್ನು ಅನುಭವಿಸುತ್ತವೆ.
ಗ್ರ್ಯಾವಿಟೇಷನ್ – ಗುರುತ್ವ – ನ್ಯೂಟನ್ ಅವರು ಗುರುತ್ವ ನಿಯಮವನ್ನು ಪ್ರತಿಪಾದಿಸಿದ್ದಾರೆ. ಎರಡು ದ್ರವ್ಯರಾಶಿಗಳ ನಡುವಿನ ಗುರುತ್ವಾಕರ್ಷಣೆಯ ಬಲವು ಅವುಗಳಲ್ಲಿನ ಪ್ರತಿಯೊಂದು ದ್ರವ್ಯರಾಶಿಯ ಪ್ರಮಾಣಕ್ಕೆ ಸಮಾನುಪಾತದಲ್ಲಿ ಹಾಗೂ ಅವುಗಳ ನಡುವಿನ ದೂರದ ವರ್ಗಕ್ಕೆ ವಿಲೋಮ ಅನುಪಾತದಲ್ಲಿ ಇರುತ್ತದೆ.
ಗ್ರೇಟಿಂಗ್ – ಪಟ್ಟಿ ಪಟ್ಟಿ ಗಾಜು – ತುಂಬ ಹತ್ತಿರ ಹತ್ತಿರ ಇರುವ ಸಮಾನಂತರ ರೇಖೆಗಳನ್ನು ಪಟ್ಟಿ ಪಟ್ಟಿಯಾಗಿ ಕೊರೆಯಲ್ಪಟ್ಟ ಒಂದು ಗಾಜಿನ ಫಲಕ. ಬೆಳಕಿನ ವರ್ಣಪಟಲವನ್ನು ಉತ್ಪತ್ತಿ ಮಾಡಲು ಹಾಗೂ ಅದರಲ್ಲಿರುವ ತರಂಗಾಂತರಗಳನ್ನು ಅಧ್ಯಯನ ಮಾಡಲು ಇದನ್ನು ಬಳಸುತ್ತಾರೆ.
ಗ್ರಾಂ ವ್ಹೈಟ್ – ಗ್ರಾಂ ವ್ಹೈಟ್ – ಇದು ಬಲದ ಒಂದು ಮೂಲಮಾನ. ಏಕಘಟಕ ದ್ರವ್ಯರಾಶಿಯು ಭೂಮಿಯ ಆಕರ್ಷಣೆಯಿಂದಾಗಿ ಅನುಭವಿಸುವ ಬಲವನ್ನು ಇದು ಸೂಚಿಸುತ್ತದೆ.
ಗ್ರಾಂ ಮೋಲಿಕ್ಯೂಲ್ – ಅಣು ಗ್ರಾಂ – ಒಂದು ವಸ್ತುವಿನ ಅಣುತೂಕವನ್ನು ಗ್ರಾಂಗಳಲ್ಲಿ ವ್ಯಕ್ತಪಡಿಸುವ ನೆಲೆ.
ಗ್ರೈನ್ – ದ್ರವ್ಯರಾಶಿಯ ಬ್ರಿಟಿಷ್ ಮೂಲಮಾನ. 1 ಗ್ರೈನ್ = 0.648 ಗ್ರಾಂ = 0.0001428571 ಪೌಂಡ್.
Like us!
Follow us!