Density

ಸಾಂದ್ರತೆ – ಏಕಘಟಕ ಪರಿಮಾಣದಲ್ಲಿರುವ ಒಂದು ವಸ್ತುವಿನ ದ್ರವ್ಯರಾಶಿ.  

Densitometer

ಸಾಂದ್ರತಾ ಮಾಪಕ‌ – ಒಂದು ಚಿತ್ರಪರದೆ ಅಥವಾ ಛಾಯಾಚಿತ್ರದ ಮುದ್ರಿತ ಪ್ರತಿಯಲ್ಲಿನ ಒಂದು ಬಿಂಬದ ಸಾಂದ್ರತೆಯನ್ನು‌ ಅಳೆಯಲು ಬಳಸುವ ಒಂದು ಮಾಪಕ.‌

Denature 

ಗುಣಗೆಡಿಸುವುದು – ಒಂದು‌ ವಸ್ತುವಿಗೆ ತಾಪ ನೀಡಿ ಅಥವಾ ರಾಸಾಯನಿಕ ಪದಾರ್ಥಗಳು ಮುಂತಾದುವನ್ನು ಸೇರಿಸಿ ಅದರ ಮೂಲ ಸ್ವಭಾವವನ್ನು‌ ಕೆಡಿಸುವುದು. 

Demagnetization

ನಿಷ್ಕಾಂತೀಕರಣ – ಒಂದು ಅಯಸ್ಕಾಂತದ ಕಾಂತಕ್ಷೇತ್ರವನ್ನು ಉಷ್ಣತಾ ಉಪಚಾರ ನೀಡಿ ಅಥವಾ ಪರ್ಯಾಯಗೊಳ್ಳುವ ವಿದ್ಯುತ್ ನೀಡಿ ತೆಗೆದು ಹಾಕುವುದು. 

Digital computer

ಅಂಕೀಯ ಗಣಕಯಂತ್ರ- 0 ಮತ್ತು 1 ಎಂಬ ಅಂಕಿಗಳಲ್ಲಿರುವ ದತ್ತಾಂಶವನ್ನು ಬಳಸಿಕೊಂಡು ಕೆಲಸ ಮಾಡುವ ಗಣಕಯಂತ್ರ. ಇದು ಭೌತಿಕ ಪರಿಮಾಣಗಳನ್ನು ಬಳಸುವ ಗಣಕಯಂತ್ರಕ್ಕಿಂತ ( analogue computer) ಗಿಂತ ಭಿನ್ನವಾದದ್ದು.‌

Degrees of freedom

ಸ್ವಾತಂತ್ರ್ಯದ ಮಟ್ಟಗಳು – ಪರಮಾಣುಗಳಲ್ಲಿ ಕಣಗಳು ಶಕ್ತಿಯನ್ನು ಪಡೆದುಕೊಳ್ಳುವ ಸ್ವತಂತ್ರ ರೀತಿಗಳು.

Degaussing

ನಿಷ್ಕಾಂತಗೊಳಿಸುವಿಕೆ – ಒಂದು‌ ವಸ್ತುವಿನ ಕಾಂತಕ್ಷೇತ್ರವನ್ನು ಅದಕ್ಕೆ ಸಮವಾಗಿರುವ ಮತ್ತು ಅದರ ವಿರುದ್ಧ ದಿಕ್ಕಿನಲ್ಲಿರುವ ಕಾಂತಕ್ಷೇತ್ರದ ಬಳಕೆಯಿಂದ ತಟಸ್ಥಗೊಳಿಸುವುದು.

Decoupling

ಜೋಡಣೆ ಕಳಚುವಿಕೆ – ವಿದ್ಯುನ್ಮಂಡಲವೊಂದರಿಂದ ಯಾವುದಾದರೂ ಭಾಗವನ್ನು ತೆಗೆದುಬಿಡುವುದು.

Declinometer

ಇಳಿಜಾರು ಮಾಪಕ‌ – ಅಯಸ್ಕಾಂತೀಯ ಇಳಿಜಾರನ್ನು ಅಳೆಯಲು‌ ಬಳಸುವ ಉಪಕರಣ.

Decay

ವಿನಾಶ – ಒಂದು ವಿಕಿರಣ ಬೀಜಕೇಂದ್ರವು ಇನ್ನೊಂದು ವಿಕಿರಣ ಬೀಜಕೇಂದ್ರವಾಗಿ‌ ಮಾರ್ಪಾಟುಗೊಳ್ಳುವುದು.

Page 6 of 7

Kannada Sethu. All rights reserved.