Electrostatic generator

ಎಲೆಕ್ಟ್ರೋಸ್ಟ್ಯಾಟಿಕ್ ಜೆನರೇಟರ್ – ಸ್ಥಾಯೀವಿದ್ಯುತ್ತಿನ ಮೂಲಕ ನಿರಂತರ ವಿದ್ಯುತ್ ಸರಬರಾಜು ಆಗುವಂತೆ ವಿನ್ಯಾಸಗೊಳಿಸಿದ ಒಂದು ಉಪಕರಣ. 

Electrostatic field

ಎಲೆಕ್ಟ್ರೋಸ್ಟ್ಯಾಟಿಕ್ ಫೀಲ್ಡ್ – ಸ್ಥಾಯಿ (ಚಲಿಸದಿರುವ)ವಿದ್ಯುದಂಶದಿಂದ ಉತ್ಪತ್ತಿಯಾದ ವಿದ್ಯುತ್ ಕ್ಷೇತ್ರ.

Electroscope 

ಎಲೆಕ್ಟ್ರೋಸ್ಕೋಪ್ – ವಿದ್ಯುತ್ ಸಾಮರ್ಥ್ಯ ಶೋಧಕ – ವಿದ್ಯುತ್ ಅಂತಃ ಸಾಮರ್ಥ್ಯವ್ಯತ್ಯಾಸವನ್ನು ಪತ್ತೆ ಮಾಡುವ ಉಪಕರಣ.

Electroplating

ಎಲೆಕ್ಟ್ರೋಪ್ಲೇಟಿಂಗ್ – ವಿದ್ಯುಲ್ಲೇಪನ – ಒಂದು ಘನವಸ್ತುವಿನ ಮೇಲ್ಮೈಗೆ ವಿದ್ಯುದ್ವಿಭಜನೆಯ ಮೂಲಕ ಒಂದು ಲೋಹವನ್ನು ಲೇಪಿಸುವುದು‌.

Electro optical effect 

ಎಲೆಕ್ಟ್ರೋಆಪ್ಟಿಕಲ್ ಎಫೆಕ್ಟ್ – ವಿದ್ಯುತ್ ದೃಶ್ಯ ಬೆಳಕು ಪರಿಣಾಮ – ಯಾವುದಾದರೊಂದು ಪಾರದರ್ಶಕ‌ ವಿದ್ಯುತ್ ನಿರೋಧಕ ವಸ್ತುವೊಂದನ್ನು ತುಂಬ ಬಲವತ್ತರವಾದ ವಿದ್ಯುತ್ ಕ್ಷೇತ್ರದಲ್ಲಿರಿಸಿದಾಗ ಆ ಕ್ಷೇತ್ರದ ಹಾಗೂ ಆ ವಸ್ತುವಿನ ವಕ್ರೀಭವನದ ಗುಣಲಕ್ಷಣಗಳ ನಡುವೆ ಉಂಟಾಗುವ ಅಂತರ್ ಕ್ರಿಯೆ. 

Electron tube

ಎಲೆಕ್ಟ್ರಾನು ಕೊಳವೆ – ಎರಡು ವಿದ್ಯುದ್ವಾರಗಳ ನಡುವಿನ ಎಲೆಕ್ಟ್ರಾನುಗಳ ಚಲನೆಯು ಒಂದು ಮುಚ್ಚಿರುವ ಅಥವಾ ನಿರಂತರವಾಗಿ ಬರಿದಾಗುತ್ತಿರುವ ಆವರಣದೊಳಗಡೆ ನಡೆಯುತ್ತಿರುವಂತಹ ಒಂದು ಉಪಕರಣ.

Electron temperature

ಎಲೆಕ್ಟ್ರಾನು ಉಷ್ಣತೆ – ಪ್ಲಾಸ್ಮಾದೊಳಗಿನ ಎಲೆಕ್ಟ್ರಾನುಗಳ ಸರಾಸರಿ ಚಲನಶಕ್ತಿಯನ್ನೇ ಅನಿಲದ ಅಣುಗಳು ಕೂಡ ಹೊಂದಿರುವ ಉಷ್ಣತೆ.

Electron telescope

ಎಲೆಕ್ಟ್ರಾನು ದೂರದರ್ಶಕ‌ – ಅತಿನೇರಳೆ ಹಾಗೂ ಅಧೋಕೆಂಪು ವಿಕಿರಣವನ್ನು ದೃಗ್ಗೋಚರ ಬಿಂಬವನ್ನಾಗಿ ಪರಿವರ್ತಿಸಬಲ್ಲ ಒಂದು ದೂರದರ್ಶಕ.‌

Electron stains

ಎಲೆಕ್ಟ್ರಾನು ರಂಗು‌ – ಕೆಲವು‌ ಆಮ್ಲಗಳು ಎಲೆಕ್ಟ್ರಾನುಗಳನ್ನು ತುಂಬ ಹೆಚ್ಚಾಗಿ ಚದುರಿಸುವ ಗುಣವನ್ನು ಹೊಂದಿರುತ್ತವೆ. ಹೀಗಾಗಿ ಇವುಗಳನ್ನು ಎಲೆಕ್ಟ್ರಾನು ಸೂಕ್ಷ್ಮದರ್ಶಕದಲ್ಲಿ ಬಳಸುತ್ತಾರೆ. ಅಂದರೆ, ಬೆಳಕು ಸೂಕ್ಷ್ಮದರ್ಶಕಗಳಲ್ಲಿ ರಂಗಿನ ಮಾಧ್ಯಮಗಳನ್ನು ಬಳಸುವಂತೆಯೇ ಇವನ್ನು ಬಳಸಲಾಗುವುದು‌.

Electron paramagnetic resonance(EPR)

ಎಲೆಕ್ಟ್ರಾನು ಅರೆಕಾಂತೀಯ ಅನುರಣನ – ಲೋಹಗಳು ಮತ್ತು ಅರೆವಾಹಕಗಳಲ್ಲಿ ವಾಹಕ ಎಲೆಕ್ಟ್ರಾನುಗಳಿಂದ ಉಂಟಾಗುವ ಅನುರಣನವನ್ನು ಎಲೆಕ್ಟ್ರಾನು ಅರೆಕಾಂತೀಯ ಅನುರಣನ ಎನ್ನುತ್ತಾರೆ.

Page 6 of 12

Kannada Sethu. All rights reserved.