Commutator

ವಿನಿಮಯಕ – ಇದು ಏಕಮುಖೀ ವಿದ್ಯುತ್ತು ಹರಿಯುವ ವಿದ್ಯುತ್‌ಚಾಲಕ ಅಥವಾ ವಿದ್ಯುಜ್ಜನಕ ಯಂತ್ರದ ಒಂದು ಇದು ಭಾಗ. ಇದು ಯಂತ್ರದ ವಿದ್ಯುತ್ ಸುರುಳಿಗಳನ್ನು ಹೊರಗಿನ ವಿದ್ಯುನ್ಮಂಡಲಕ್ಕೆ ಜೋಡಿಸುತ್ತದೆ, ಹಾಗೂ ವಿದ್ಯುತ್ ಸುರುಳಿಯು ಸುತ್ತುತ್ತಿರುವಾಗ ಅದರಲ್ಲಿ ಹರಿಯುವ ವಿದ್ಯುತ್ ಪ್ರವಾಹದ ದಿಕ್ಕು ಒಂದೇ ಆಗಿರುವಂತೆ ನೋಡಿಕೊಳ್ಳುತ್ತದೆ.

Comet

ಧೂಮಕೇತು – ಸೂರ್ಯನ ಆಕರ್ಷಣೆಗೊಳಪಟ್ಟು ಚಲಿಸುವ ಒಂದು ಆಕಾಶಕಾಯ. ಮಬ್ಬುಮಬ್ಬು ಅನಿಲದ ಮೋಡಗಳಿಂದ ಉಂಟಾಗಿರುವ ಇದರಲ್ಲಿ ಹೆಚ್ಚು ಪ್ರಕಾಶಮಾನವಾದ ಬೀಜಕೇಂದ್ರ ಮತ್ತು ಅಷ್ಟೇನೂ ಪ್ರಕಾಶಮಾನವಲ್ಲದ ಬಾಲ ಇರುತ್ತದೆ.

Coma

ಧೂಮಕೇತು ಬಿಂಬ – ಒಂದು ರೀತಿಯ ಬಿಂಬದೋಷ ಇದು. ಗೋಳಾಕಾರದ ಮಸೂರಗಳಲ್ಲಿ ಬೆಳಕು ಓರೆಯಾಗಿ ಬಿದ್ದಾಗ, ಬಿಂಬವು ಸಮಕಟ್ಟಿಲ್ಲದೆ ರೂಪುಗೊಳ್ಳುತ್ತದೆ. ಇಲ್ಲಿ ಒಂದು ಬಿಂದುವಿನ ಬಿಂಬವು ಧೂಮಕೇತುವಿನ ಆಕಾರದಲ್ಲಿರುವುದರಿಂದ ಇದನ್ನು ಧೂಮಕೇತು ಬಿಂಬ ಎನ್ನುತ್ತಾರೆ.

Colour vision

ಬಣ್ಣಯುತ ದೃಷ್ಟಿ – ಮನುಷ್ಯನ ಕಣ್ಣಿಗಿರುವ ಒಂದು ಸಾಮರ್ಥ್ಯ ಇದು. ಬೇರೆ ಬೇರೆ ಬಣ್ಣಗಳ ನಡುವಿನ ವ್ಯತ್ಯಾಸವನ್ನು ಗುರುತಿಸುವಂತಹ ಸಾಮರ್ಥ್ಯ.

Colour Television

ಬಣ್ಣದ ದೂರದರ್ಶನ(ಟಿವಿ) – ಪರದೆಯೊಂದರ ಮೇಲೆ ಬಣ್ಣದ ಚಿತ್ರಗಳನ್ನು ಮೂಡಿಸುವ ವ್ಯವಸ್ಥೆ. ಕೆಂಪು, ಹಸುರು ಮತ್ತು ನೀಲಿ ಎಂಬ ಮೂಲಭೂತ ಬಣ್ಣಗಳನ್ನು ಹೊಂದಿರುವ ಬಿಂಬಗಳನ್ನು ಒಂದಾದ ಮೇಲೊಂದರಂತೆ ತುಂಬ ವೇಗದಲ್ಲಿ ಪ್ರಸಾರ ಮಾಡಿ ಎಲ್ಲ ಬಣ್ಣವುಳ್ಳ ಬಿಂಬವನ್ನು ರೂಪಿಸುವುದು.

Colorimeter

ಬಣ್ಣಶಕ್ತಿ ಮಾಪಕ – ಯಾವುದೇ ಬಣ್ಣದ ತೀಕ್ಷ್ಣತೆಯನ್ನಾದರೂ ಮೂರು ಮೂಲಭೂತ ಬಣ್ಣಗಳ (ಕೆಂಪು, ಹಸುರು, ನೀಲಿ) ನೆಲೆಯಲ್ಲಿ(ಅಂದರೆ ಪ್ರತಿಯೊಂದರ ಪರಿಭಾಷೆಯಲ್ಲಿ) ನೀಡುವ ಒಂದು ಉಪಕರಣ.

Colloid

ಕಲಿಲ – ಇದು ಒಂದು ರೀತಿಯ ಮಿಶ್ರಣ. ಒಂದು ವಸ್ತು ಮತ್ತು ಆ ವಸ್ತುವಿನೊಳಗೆ ಅದರ ಎಲ್ಲೆಡೆಗೂ ವ್ಯಾಪಿಸಿರುವ ಆದರೆ ಕರಗದ ಕಣಗಳ ರೂಪದಲ್ಲಿಯೇ ಉಳಿದಿರುವ ಇನ್ನೊಂದು ವಸ್ತು – ಇವುಗಳ ಮಿಶ್ರಣ ಇದು. ಉದಾಹರಣೆಗೆ ಹಾಲು. ಹಾಲಿನಲ್ಲಿ ಕೊಬ್ಬಿನ ಕಣಗಳು ಕರಗದ ಕಣಗಳಾಗಿಯೇ ಇರುತ್ತವೆ.

Collision

ಢಿಕ್ಕಿ(ಸಂಘರ್ಷ) – ಅಣುಗಳು, ಪರಮಾಣುಗಳು ಮುಂತಾದವು ಮುಖಾಮುಖಿಯಾದಾಗ ಅವುಗಳಲ್ಲಿ ಉಂಟಾಗುವ ಪರಸ್ಪರ ಕ್ರಿಯೆ.

Colour photography

ಬಣ್ಣ ಛಾಯಾಚಿತ್ರ ಕಲೆ – ಒಂದು ತೆಳುವಾದ ಪೊರೆ ಅಥವಾ ಕಾಗದದ ಮೇಲೆ ಬಣ್ಣವುಳ್ಲ ಬಿಂಬಗಳನ್ನು ಮೂಡಿಸುವ ವಿಧಾನಗಳಲ್ಲಿ ಯಾವುದಾದರೂ ಒಂದು.

Colour blindness

ಬಣ್ಣಗುರುಡು – ಮನುಷ್ಯನ ಕಣ್ಣಿನ ಒಂದು ಸಮಸ್ಯೆ ಇದು. ಒಂದು ನಿರ್ದಿಷ್ಟ ಬಣ್ಣ ಅಥವಾ ಕೆಲವು ಬಣ್ಣಗಳನ್ನು ಗುರುತಿಸಲಾರದ ಕಣ್ಣಿನ ಸಮಸ್ಯೆ.

Page 6 of 15

Kannada Sethu. All rights reserved.