Geisser’s tube

ಗೀಸರ್ಸ್ ಟ್ಯೂಬ್ – ಗೀಸರ್ ಕೊಳವೆ – ಪಾದರಸದ ಒತ್ತಡವು 1 ಮಿಲಿಮೀಟರ್ ನಷ್ಟು ಇರುವಂತೆ ತಯಾರಿಸಿದ ಒಂದು ನಿರ್ವಾತ ಕೊಳವೆ‌. ಇದರಲ್ಲಿನ ವಿಸರ್ಜನವು ಹೆಚ್ಚು ಉಜ್ವಲವಾಗಿರಬೇಕೆಂದು ಒಂದು ಕಿರಿದಾದ ಜಾಗದಲ್ಲಿ ಸಂಗ್ರಹವಾಗುವಂತೆ ಮಾಡಲಾಗುತ್ತದೆ. ಈ ಕೊಳವೆಯನ್ನು ಅನಿಲದ ವರ್ಣಪಟಲಗಳನ್ನು ಅಧ್ಯಯನ ಮಾಡಲಿಕ್ಕೋಸ್ಕರ ಬಳಸುತ್ತಾರೆ.

Geiger counter( Geiger – Muller counter)

ಗೀಗರ್ ಕೌಂಟರ್ ( ಗೀಗರ್ ಮುಲ್ಲರ್ ಕೌಂಟರ್) – ಬಿಡಿಕಣಗಳು ಮತ್ತು ಬೆಳಕು ಕಣಗಳು ( ಫೋಟಾನ್) ಗಳನ್ನು ಲೆಕ್ಕ ಮಾಡುವುದಕ್ಕೋಸ್ಕರ ಅಯಾನೀಕರಿಸುವ ವಿಕಿರಣದ ಪತ್ತೆಯಲ್ಲಿ ಬಳಸುವ ಉಪಕರಣ.

Gate

ಗೇಟ್- ವಿದ್ಯುತ್ ಸಂಕೇತ/ದ್ವಾರ – ವಿದ್ಯುನ್ಮಂಡಲವನ್ನು ಚಾಲೂ ಮಾಡುವ ಒಂದು ವಿದ್ಯುತ್ ಸಂಕೇತ.

Gassing

ಗ್ಯಾಸಿಂಗ್ – ಅನಿಲೋತ್ಪಾದನೆ – ಒಂದು ವಿದ್ಯುತ್ ಕೋಶದ ವಿದ್ಯುತ್ ಪೂರಣವು ಮುಗಿದ ಮೇಲೂ ವಿದ್ಯುತ್ ಪೂರಣವನ್ನು ಮುಂದುವರಿಸಿದಾಗ ಆ ವಿದ್ಯುತ್ ಕೋಶದಿಂದ ಸಣ್ಣ ಸಣ್ಣ ಗುಳ್ಳೆಗಳು ಏಳುವ ಕ್ರಿಯೆ.

Gas turbine

ಗ್ಯಾಸ್ ಟರ್ಬೈನ್ – ಹವೆ ಯಂತ್ರ – ದ್ರವರೂಪೀ ಇಂಧನದ ರಾಸಾಯನಿಕ ಶಕ್ತಿಯು ಯಂತ್ರಚಾಲನಾ ಶಕ್ತಿಯಾಗಿ ಪರಿವರ್ತಿತವಾಗುವ ಒಂದು ಚಾಲಕ ಯಂತ್ರ. ಇದನ್ನು ವಿಮಾನ, ರೈಲು ಹಾಗೂ ಮೋಟಾರು ಕಾರುಗಳಲ್ಲಿ ಬಳಸುತ್ತಾರೆ.

Gas thermometer

ಗ್ಯಾಸ್ ಥರ್ಮೋಮೀಟರ್ – ಅನಿಲ ತಾಪಮಾಪಕ – ಒಂದು ರೀತಿಯ ತಾಪಮಾಪಕ – ಇದರಲ್ಲಿ ತಾಪದ ಉತ್ಪನ್ನವಾಕ್ಯ(ಫಂಕ್ಷನ್)ವಾಗಿ ಅನಿಲದ ಗುಣಗಳ ಬದಲಾವಣೆಯನ್ನು ಗಮನಿಸಿ ತಾಪಮಾನದ ಅಳತೆ ಮಾಡಲಾಗುತ್ತದೆ. 

Gas oil

ಗ್ಯಾಸ್ ಆಯಿಲ್ – ಅನಿಲ ಎಣ್ಣಿ ಅಥವಾ ಡೀಸೆಲ್ ಎಣ್ಣೆ – ಕಚ್ಚಾ ಪೆಟ್ರೋಲಿಯಂನಿಂದ ಪೆಟ್ರೋಲ್ ಮತ್ತು ಸೀಮೆಎಣ್ಣೆಯನ್ನು ಭಟ್ಟಿ ಇಳಿಸಿ‌ ತೆಗೆದ ನಂತರ ಉಳಿಯುವ ಎಣ್ಣೆ. ಇದನ್ನು ಡೀಸಲ್ ಚಾಲಿತ  ಚಾಲಕಯಂತ್ರಗಳಲ್ಲಿ ಇಂಧನವಾಗಿ ಬಳಸುತ್ತಾರೆ, ಮತ್ತು ಅಶ್ರುವಾಯು ತಯಾರಿಸುವಾಗಿನ ಇಂಗಾಲ ಮಿಶ್ರಣವನ್ನು ಮಾಡುವಲ್ಲಿ ಬಳಸುತ್ತಾರೆ.

Gas maser

ಗ್ಯಾಸ್ ಮೇಸರ್ – ಅನಿಲ‌ ಬಲವರ್ಧಕ – ಮೈಕ್ರೋ ಅಲೆಗಳ ವಿಕಿರಣವು ಅನಿಲದ ಅಣುಗಳೊಂದಿಗೆ ಅಂತರ್ ಕ್ರಿಯೆ ನಡೆಸುವ ಒಂದು ಬಲವರ್ಧಕ.

Gas laws

ಗ್ಯಾಸ್ ಲಾಸ್ – ಅನಿಲ ನಿಯಮಗಳು – ಒಂದು ಅನಿಲದ ಒತ್ತಡ ಮತ್ತು/ಅಥವಾ ಉಷ್ಣತೆಯನ್ನು ಬದಲಾಯಿಸಿದಾಗ ಉಂಟಾಗುವ ಬದಲಾವಣೆಗಳನ್ನು ವಿವರಿಸುವ ನಿಯಮಗಳು. ಉದಾಹರಣೆಗೆ ಬಾಯ್ಲ್ ರ ನಿಯಮ, ಚಾಲ್ಸ್ರ್ ರ ನಿಯಮ.

Gas cell

ಗ್ಯಾಸ್ ಸೆಲ್ – ಅನಿಲ ವಿದ್ಯುತ್ ಕೋಶ – – ತನ್ನ ವಿದ್ಯುತ್ ದ್ವಾರಗಳು ಅನಿಲವನ್ನು ಹೀರಿಕೊಳ್ಳುವುದರ ಮೂಲಕ ಕೆಲಸ ಮಾಡುವಂತಹ ಒಂದು ವಿದ್ಯುತ್ ಕೋಶ.

Page 6 of 8

Kannada Sethu. All rights reserved.