ಒಂದು ಗಂಭೀರವಾದ ಜೀವನವಿವೇಕವನ್ನು ತುಂಬ ಚಿತ್ರಕವಾಗಿ, ಕಣ್ಣಿಗೆ ಕಟ್ಟಿದಂತೆ ಹೇಳುವ ಕನ್ನಡ ಗಾದೆ ಮಾತಿದು. ಅಡಿಕೆಯಂತಹ ಪುಟಾಣಿ ವಸ್ತುವನ್ನು ಕದ್ದರೂ, ಆನೆಯಂತಹ ಬಹು ದೊಡ್ಡಗಾತ್ರದ ವಸ್ತುವನ್ನು ಕದ್ದರೂ ಕಳ್ಳತನ ಕಳ್ಳತನವೇ ತಾನೇ. ಹಾಗೆಯೇ ತಾನು ಸಂಬಳ ತೆಗೆದುಕೊಂಡು ಮಾಡುತ್ತಿರುವಂತಹ ಉದ್ಯೋಗದ ವಿಷಯ ಬಂದಾಗ, ತನ್ನ ಕರ್ತವ್ಯ ತಾನು ಮಾಡುವುದಕ್ಕೆ ಒಂದು ರೂಪಾಯಿ ಲಂಚ ತೆಗೆದುಕೊಂಡರೂ ಭ್ರಷ್ಟಾಚಾರವೇ, ಒಂದು ಲಕ್ಷ ರೂಪಾಯಿ ತೆಗೆದುಕೊಂಡರೂ ಭ್ರಷ್ಟಾಚಾರವೇ. ಒಟ್ಟಿನಲ್ಲಿ ಈ ಗಾದೆಮಾತು ಕಲಿಸುವ ಪಾಠವೇನೆಂದರೆ ಮನುಷ್ಯನು ಕೆಟ್ಟದ್ದರಿಂದ ಸಂಪೂರ್ಣವಾಗಿ ದೂರವಿರಬೇಕು. ‘ಸ್ವಲ್ಪ ಕೆಟ್ಟದ್ದು, […]
ಪ್ರಸ್ನೆಲ್ – ಫ್ರೆಸ್ನೆಲ್ – ಆವರ್ತನದ ಒಂದು ಮೂಲಮಾನ ಇದು. 1000000000000 ಹರ್ಟ್ಝ್ ಗೆ ಸಮ ಹಾಗೂ ಒಂದು ಟೆರಾ ಹರ್ಟ್ಝ್ ಗೆ ಸಮ. ಇದು ಎ.ಜೆ.ಫ್ರೆಸ್ನೆಲ್ ( 1788-1827) ಎಂಬ ಫ್ರೆಂಚ್ ವಿಜ್ಞಾನಿಯ ನೆನಪಿನಲ್ಲಿ ಇಟ್ಟ ಹೆಸರು .
ಎಫ್.ಎಂ – (ಫ್ರೀಕ್ವೆನ್ಸಿ ಮಾಡ್ಯುಲೇಷನ್) – ಪ್ರಸಾರವಾಗಬೇಕಾಗಿರುವ ಶ್ರವ್ಯ ಅಥವಾ ದೃಶ್ಯ ಅಲೆಗೆ ಅನುಗುಣವಾಗಿ ಒಯ್ಯಕ ಅಲೆಯ ಆವರ್ತನವನ್ನು ನಿಯಂತ್ರಿಸುವ ಕ್ರಿಯೆ.
ಫ್ಲೈ ವ್ಹೀಲ್ – ಗತಿದಾಯಿ ಚಕ್ರ ಅಥವಾ ಮುಖ್ಯ ಚಕ್ರ – ಯಂತ್ರೋಪಕರಣಗಳಲ್ಲಿ ಶಕ್ತಿ ಸಂರಕ್ಷಕ ಉಪಕರಣವಾಗಿ ಬಳಸುವ ಒಂದು ದೊಡ್ಡ ಚಕ್ರ ಇದು.
ಫ್ಲಕ್ಸ್ ಮೀಟರ್ – ಬಲರೇಖಾ ಮಾಪಕ – ಕಾಂತೀಯ ಬಲರೇಖೆಗಳನ್ನು ಅಳೆಯಲು ಬಳಸುವ ಉಪಕರಣ. ಗ್ಯಾಲ್ವನೋಮೀಟರ್ ಹಾಗೂ ಲೋಹದ ಒಂದು ಸುರುಳಿಯನ್ನು ಬಳಸಿ ಇದನ್ನು ತಯಾರು ಮಾಡಿರುತ್ತಾರೆ.
ಫ್ಲಕ್ಸ್ ಡೆನ್ಸಿಟಿ (ಮ್ಯಾಗ್ನೆಟಿಕ್) – (ಕಾಂತೀಯ) ಬಲರೇಖಾ ಸಾಂದ್ರತೆ – ಒಂದು ಬಿಂದುವಿನಲ್ಲಿ ಏಕ ಘಟಕ ವಿಸ್ತೀರ್ಣದಲ್ಲಿರುವ ಕಾಂತೀಯ ರೇಖೆಗಳು.
ಫ್ಲಕ್ಸ್ – ವಸ್ತುಪ್ರವಾಹ ಅಥವಾ ಶಕ್ತಿಪ್ರವಾಹ – 1. ವಸ್ತು ಅಥವಾ ಶಕ್ತಿಯು ಹರಿಯುತ್ತಿರುವ ದಿಕ್ಕಿಗೆ ಲಂಬವಾಗಿರುವ ಏಕಘಟಕ ವಿಸ್ತೀರ್ಣದಲ್ಲಿ, ಹರಿಯುವ ಆ ವಸ್ತು ಅಥವಾ ಶಕ್ತಿಯ ಹರಿವಿನ ಗತಿ.
2. ಕ್ಷೇತ್ರದಲ್ಲಿನ ಬಲದ ರೇಖೆಗಳ ಸಂಖ್ಯೆ.
Like us!
Follow us!