ಕನ್ನಡ ಭಾಷೆಯಲ್ಲಿ ಬಹುವಾಗಿ ಬಳಕೆಯಾಗುವ ಗಾದೆಮಾತುಗಳಲ್ಲಿ ಇದೂ ಒಂದು. ನಾವು ಮನೆಯಲ್ಲಿ ಹುಣಿಸೆ ಹಣ್ಣನ್ನು ಸಾರು, ಸಾಂಬಾರು, ಗೊಜ್ಜು, ಪುಳಿಯೋಗರೆ ಮುಂತಾದವನ್ನು ಮಾಡಲು ಬಳಸುವಾಗ, ನಮಗೆ ಎಷ್ಟು ಬೇಕೋ ಅಷ್ಟನ್ನು ನೀರಿನಲ್ಲಿ ಕಿವುಚಿಕೊಂಡು ರಸ ತೆಗೆದು ಬಳಸುತ್ತೇವಲ್ಲ, ಇದು ನಮ್ಮ ದಿನದ ರೂಢಿಯ ಮಾತಾಯಿತು. ಆದರೆ ಇಷ್ಟೇ ಪ್ರಮಾಣದ ಹುಣಿಸೆ ಹಣ್ಣನ್ನು ಒಂದು ಹೊಳೆ ಅಥವಾ ನದಿಯಲ್ಲಿ ಕಿವುಚಿದರೆ ಏನಾಗಬಹುದು!? ಆ ಹಣ್ಣು ವ್ಯರ್ಥವಾಗಿ ಹೋಗುತ್ತದೆಯೇ ಹೊರತು ನಮಗೆ ಅದರ ಹುಳಿರುಚಿ ಸ್ವಲ್ಪವೂ ದೊರೆಯುವುದಿಲ್ಲ. ಹೀಗೆಯೇ […]
ಫ್ರೀಕ್ವೆನ್ಸಿ – ಆವರ್ತನ – ಒಂದು ನಿಯತರೀತಿಯ ಘಟನೆಯ ಪುನರಾವರ್ತನೆಯ ಗತಿಲೆಕ್ಕ. ಸೆಕೆಂಡೊಂದಕ್ಕೆ ಅಲೆ ಅಥವಾ ಇನ್ಯಾವುದಾದರೂ ಆಂದೋಲನ ಅಥವಾ ಕಂಪನಗಳ ಸುತ್ತುಗಳ ಸಂಖ್ಯೆ.
ಫ್ರೆಂಕೆಲ್ ಡಿಫೆಕ್ಟ್ – ಫ್ರೆಂಕೆಲ್ ದೋಷ – ಒಂದು ಹರಳಿನ ರಚನೆಯಲ್ಲಿ ಒಂದು ಪರಮಾಣು ಅಥವಾ ಒಂದು ವಿದ್ಯುದಣು ತನ್ನ ಸಾಮಾನ್ಯ ಸ್ಥಾನದಿಂದ ತೆಗೆದುಹಾಕಲ್ಪಟ್ಟು, ಪರಮಾಣು ಸಾಲು ಮತ್ತು ವಿದ್ಯುದಣುಗಳ ಸಾಲಿನ ಮಧ್ಯೆ ಸ್ಥಿತಗೊಳ್ಳುವಂಥದ್ದು.
ಫ್ರೀಝಿಂಗ್ ಮಿಕ್ಸ್ಚರ್ – ಹೆಪ್ಪುಗಟ್ಟುವ ಮಿಶ್ರಣ – ತುಂಬಾ ಶೀತತೆಯನ್ನು ಅಂದರೆ ಅತ್ಯಂತ ಕಡಿಮೆ ಉಷ್ಣತೆಯನ್ನು ಉತ್ಪತ್ತಿ ಮಾಡಲು ಬಳಸುವಂತಹ ಒಂದು ವಸ್ತುಮಿಶ್ರಣ ಇದು. ಉದಾಹರಣೆಗೆ, ಮಂಜುಗಡ್ಡೆ ಮತ್ತು ಉಪ್ಪಿನ ಮಿಶ್ರಣ.
ಫ್ರೀಝಿಂಗ್ – ಹೆಪ್ಪುಗಟ್ಟುವಿಕೆ – ದ್ರವ ಸ್ಥತಿಯಿಂದ ಘನ ಸ್ಥಿತಿಗೆ ಮಾರ್ಪಾಡಾಗುವ ಪ್ರಕ್ರಿಯೆ.
ಫ್ರೀ ಸರ್ಫೇಸ್ ಎನರ್ಜಿ – ಮುಕ್ತ ಮೇಲ್ಮೈ ಶಕ್ತಿ – ತೆರೆದುಕೊಂಡ ಒಂದು ಮೇಲ್ಮೈ ಯಲ್ಲಿನ ಏಕಘಟಕ ಪ್ರದೇಶವು ಹೊಂದಿರುವ ಶಕ್ತಿ.
ಫ್ರೀ ಆಸ್ಸಿಲೇಷನ್ – ಮುಕ್ತ ಆವರ್ತನ – ಒಂದು ವ್ಯವಸ್ಥೆ ಅಥವಾ ವಸ್ತುವಿನ ಸಹಜ ಆವರ್ತನದಲ್ಲಿ ಇರುವ ಆಂದೋಲನ. ಲೋಲಕವೊಂದರ ಈ ಮುಕ್ತ ಆಂದೋಲನವು ಅದರ ಉದ್ದ ಮತ್ತು ದ್ರವ್ಯರಾಶಿಯನ್ನು ಅವಲಂಬಿಸಿರುತ್ತದೆ.
Like us!
Follow us!